Summer Tips: ಮನೆಯಲ್ಲಿ ಎಸಿ ಇಲ್ದಿದ್ರೂ ಬೇಸಿಗೆಯಲ್ಲಿ ತಂಪಾಗಿ ಇರಬೇಕಾ? ಒಂದು ರೂಪಾಯಿ ಖರ್ಚಿಲ್ಲ, ತಕ್ಷಣ ಈ ಕೆಲಸ ಮಾಡಿ; ಕೂಲ್ ಆಗಿರಿ!

Summer Tips: ಈ ವರ್ಷದ ಬೇಸಿಗೆಕಾಲ ಪ್ರತಿಯೊಬ್ಬರಿಗೂ ತಲೆನೋವು ಉಂಟುಮಾಡಿದೆ ಯಾಕಂದ್ರೆ ಪ್ರತಿವರ್ಷಕ್ಕಿಂತ ಈ ವರ್ಷದ ತಾಪಮಾನ ಇನ್ನೂ ಹೆಚ್ಚಾಗಿದೆ ಎನ್ನಬಹುದು ಉದಾಹರಣೆಗೆ ಬೆಂಗಳೂರಿನಂತಹ ಪ್ರದೇಶದಲ್ಲಿ ಈ ಹಿಂದೆ ಬೇಸಿಗೆಯಲ್ಲಿಯೂ ಇಷ್ಟೊಂದು ಬಿಸಿ ಇರಲಿಲ್ಲ. ಆದರೆ ಈಗ ತಾಪಮಾನ 40° ಆಗಿದೆ. ಹಾಗಾಗಿ ಮನೆಯಲ್ಲಿ ಎಸಿ ಫ್ಯಾನ್ ಕೂಲರ್ ಮೊದಲಾದವುಗಳನ್ನು ಬಳಸುವುದು ಅನಿವಾರ್ಯ.

ಹಾಗಂತ ಎಲ್ಲರ ಮನೆಯಲ್ಲೂ ಎಸಿ ಇರುವುದಕ್ಕೆ ಸಾಧ್ಯ ಇಲ್ಲ. ಫ್ಯಾನ್ ನಿಂದ ಬರುವ ಗಾಳಿ ಕೆಲವೊಮ್ಮೆ ಬಿಸಿ ಗಾಳಿಗೆ ಆಗಿರುತ್ತೆ. ಹೀಗಿರುವಾಗ ಮನೆಯಲ್ಲಿ ಕೂಲ್ ಆಗಿರುವುದು ಹೇಗೆ? ಅದಕ್ಕೂ ಇಲ್ಲಿದೆ ಟಿಪ್ಸ್.

ಕಿಟಕಿ ಬಾಗಿಲುಗಳನ್ನು ಮುಚ್ಚಿ!
ಮುಖ್ಯವಾಗಿ ಬೇಸಿಗೆಯಲ್ಲಿ ಕೋಣೆಯ ಒಳಗೆ ಬಿಸಿ ಬಾರದೆ ಇರೋದಕ್ಕೆ ನಿಮ್ಮ ಕಿಟಕಿ ಬಾಗಿಲುಗಳನ್ನು ಮುಚ್ಚಿ ಜೊತೆಗೆ ಸೂರ್ಯನ ಬಿಸಿಯನ್ನು ತಡೆಯುವುದಕ್ಕೆ ಕರ್ಟನ್ ಕೂಡ ಕ್ಲೋಸ್ ಮಾಡಿ. ಈ ರೀತಿ ಮಾಡುವುದರಿಂದ ರಾತ್ರಿ ಸಮಯದಲ್ಲಿ ನಿಮ್ಮ ಕೋಣೆ ಬಿಸಿ ಆಗಿರುವುದಿಲ್ಲ. ಆದರೆ ಈ ರೀತಿ ಕಿಟಕಿ ಬಾಗಿಲು ಮುಚ್ಚಿ ಮನೆಯಲ್ಲಿ ನೀವು ಕುಳಿತುಕೊಳ್ಳುವುದಾದರೆ ವೆಂಟಿಲೇಟರ್ ಇದೆ ಎಂಬುದನ್ನು ಚೆಕ್ ಮಾಡಿಕೊಳ್ಳಿ.

ಹುಲ್ಲಿನ ಚಾಪೆ ಬಳಕೆ!
ಬೇಸಿಗೆಯಲ್ಲಿ ಕರ್ಟನ್ ಆಗಿ ಹುಲ್ಲಿನಿಂದ ಮಾಡಿದ ಚಾಪಿಗಳನ್ನ ಬಳಸುವುದು ಒಳ್ಳೆಯದು ಈ ರೀತಿ ಮಾಡುವುದರಿಂದ ಮನೆ ಒಳಗೆ ತಂಪಾದ ಗಾಳಿಯು ಬರುತ್ತದೆ ಜೊತೆಗೆ ಬಿಸಿ ಗಾಳಿ ಮನೆಯೊಳಗೆ ಭಾರದಂತೆ ಈ ಹುಲ್ಲಿನ ಚಾಪೆ ತಡೆಯುತ್ತದೆ. ಹಾಗಾಗಿಯೇ ಪ್ರಾಚೀನ ಕಾಲದಲ್ಲಿಯೂ ಕೂಡ ಇದನ್ನ ಬಳಕೆ ಮಾಡುತ್ತಿದ್ದರು ಆ ಸಮಯದಲ್ಲಿ ಬೇಸಿಗೆಯಲ್ಲಿಯೂ ಮನೆ ಕೂಲ್ ಆಗಿ ಇರುತ್ತಿತ್ತು.

ಗಿಡಗಳನ್ನು ಬೆಳೆಸಿ!
ನಿಮ್ಮ ಮನೆಯ ಕಿಟಕಿಗಳ ಎದುರು ಏರು ಪ್ಯೂರಿಫೈಯರ್ ಪ್ಲಾಂಟ್ ಗಳನ್ನು ಬೆಳೆಸಿದರೆ ಒಳ್ಳೆಯದು ಇದು ಇಂಗಾಲದ ಡೈಯಾಕ್ಸೈಡ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ ಮತ್ತು ಕೋಣೆಯ ಉಷ್ಣಾಂಶ ಸಮತಟ್ಟಾಗಿ ಇರುವಂತೆ ಮಾಡುತ್ತದೆ. ಹೀಗಾಗಿ ಸ್ನೇಕ್ ಪ್ಲಾಂಟ್, ಪೀಸ್ ಲಿಲಿ, ಸ್ಪೈಡರ್ ಪ್ಲಾಂಟ್ ಗಳಂತಹ ಏರ್ ಪ್ಯೂರಿಫೈಯರ್ ಪ್ಲಾಂಟ್ ಗಳನ್ನು ಬೆಳೆಸುವುದು ಸೂಕ್ತ.

ಎಕ್ಸಾಸ್ಟ್ ಫ್ಯಾನ್ ಬಳಸಿ!
ಒಳಗಿನ ಬಿಸಿ ಗಾಳಿ ಹೊರಗೆ ಹೋಗುವಂತೆ ಮಾಡಲು ನೀವು ಮನೆಯಲ್ಲಿ ಫ್ಯಾನ್ ಬಳಸುವುದಕ್ಕಿಂತ ಎಕ್ಸಾಸ್ಟ್ ಫ್ಯಾನ್ ಬಳಸುವುದು ಬಹಳ ಮುಖ್ಯ. ಇದರಿಂದ ಕೊಠಡಿ ತಂಪಾಗಿರುತ್ತದೆ ಕೋಣೆಯ ಒಳಗಿನ ಶಾಖ ಹೊರಗೆ ಹೋಗುತ್ತದೆ. ಇದರ ಜೊತೆಗೆ ಒದ್ದೆ ಆಗಿರುವ ಬಟ್ಟೆ ಅಥವಾ ಟವೆಲ್ ಕಿಟಕಿಯ ಮೇಲೆ ಹಾಕಿದ್ರೆ ಬೇಸಿಗೆ ಸಮಯದಲ್ಲಿಯೂ ಕೋಣೆ ಕೂಲ್ ಆಗಿ ಇರುತ್ತದೆ.

ಎಸಿ ಇಲ್ಲದಿದ್ರೆ ಐಸ್ ಬೌಲ್ಸ್ ಬಳಸಿ!
ಎಲ್ಲರ ಮನೆಯಲ್ಲೂ ಎಸಿ ಮೊಳಕೆ ಮಾಡಲು ಸಾಧ್ಯವಿಲ್ಲ ಸಾಮಾನ್ಯ ವರ್ಗದ ಮನೆಯಲ್ಲಿ ಫ್ಯಾನ್ ಬಳಕೆ ಸಾಮಾನ್ಯ. ನೀವು ಟೇಬಲ್ ಫ್ಯಾನ್ ಬಳಸುವುದಾಗಿದ್ರೆ ಅದರ ಎದುರುಗಡೆ ಒಂದು ಬೌಲ್ ನಲ್ಲಿ ಐಸ್ ತುಂಡುಗಳನ್ನು ಹಾಕಿ ಇಡಿ. ಈ ರೀತಿ ಮಾಡುವುದರಿಂದ ಪ್ರತಿಬಾರಿ ಫ್ಯಾನ್ ಗಾಳಿ ಬಂದಾಗ ಐಸ್ ಕ್ಯೂಬ್ ನ ಕೂಲ್ನೆಸ್ ಕೋಣೆಯನ್ನು ತುಂಬಿಕೊಳ್ಳುತ್ತದೆ.

ಬಿಳಿಯ ಬಣ್ಣದ ಬಳಕೆ!
ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಬೆಳೆಯ ಬಣ್ಣ ಶಾಖದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಆದಷ್ಟು ಬಿಳಿಯ ಬಣ್ಣದ ಬಟ್ಟೆಯನ್ನು ಬಳಸಿ ನಿಮ್ಮ ಕೋಣೆಯಲ್ಲಿ ಬಳಸುವ ಬ್ಲಾಂಕೆಟ್ ಕೂಡ ಬಿಳಿಯ ಬಣ್ಣದ್ದೇ ಆಗಿದ್ದರೆ ಒಳ್ಳೆಯದು. ಜೊತೆಗೆ ಮನೆಯ ಗೋಡೆಗೆ ಮೇಲ್ಚಾವಣಿಗೆ ಬಿಳಿಯ ಬಣ್ಣವನ್ನು ಬಳಕೆ ಮಾಡಿದರೆ ಕೋಣೆ ತಂಪಾಗಿರುತ್ತದೆ.

ಈ ಎಲ್ಲಾ ಕ್ರಮಗಳನ್ನು ಅನುಸರಿಸುವುದರಿಂದ ಎಸಿ ಇಲ್ಲದೆ ಇದ್ದರೂ ಈ ಸುಡು ಬೇಸಿಗೆಯಲ್ಲಿ ಸ್ವಲ್ಪ ಮಟ್ಟಿಗಾದರೂ ತಂಪಾಗಿ ಇರಬಹುದು ಟ್ರೈ ಮಾಡಿ.

Comments are closed.