Ugadi 2024: ಈ ಹೊಸ ವರ್ಷಕ್ಕೆ ಬೇರೆನೂ ಬೇಡ ಈ ವಸ್ತು ಮನೆಗೆ ತನ್ನಿ ಸಾಕು, ದುಡ್ದಿಗೆ ಕೊರತೆ ಇಲ್ಲ, ಬರಿ ಸಮೃದ್ಧಿ, ನೆಮ್ಮದಿ!

Ugadi 2024: ಪ್ರತಿಯೊಬ್ಬರು ಕೂಡ ಕೆಲಸ ಮಾಡಿ ಮನೆಗೆ ಬಂದು ನೆಮ್ಮದಿಯಾಗಿ ಸಮಯವನ್ನು ಕಳೆಯಬೇಕು ಎನ್ನುವುದಾಗಿ ಅಂದುಕೊಳ್ಳುತ್ತಾರೆ. ಆದರೆ ಆ ಮನೆಯಲ್ಲೇ ಪ್ರತಿದಿನ ಕಿರಿಕಿರಿ ಹಾಗೂ ಅಶಾಂತಿ ನೆಲೆಸಿದರೆ ಎಲ್ಲಿಗೆ ತಾನೆ ಹೋಗುತ್ತಾರೆ ಹೇಳಿ. ಹೀಗಾಗಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಬೇಕು ಅಂತ ಅಂದ್ರೆ ಈ ಹೊಸ ವರ್ಷದ ಸಂದರ್ಭದಲ್ಲಿ ಏನೆಲ್ಲ ಮಾಡಬೇಕು ಅನ್ನೋದನ್ನ ವಾಸ್ತು ಶಾಸ್ತ್ರದ ಪ್ರಕಾರ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಹೊಸ ವರ್ಷದ ಸಮಯದಲ್ಲಿ ಮನೆಯಲ್ಲಿ ಈ ವಸ್ತುಗಳನ್ನು ಇರಿಸಿ

  • ಮನೆ ಹಾಗೂ ಕಚೇರಿಗಳಲ್ಲಿ ನೀವು ಸಾಕಷ್ಟು ಕಡೆಗಳಲ್ಲಿ ಲಾಫಿಂಗ್ ಬುದ್ಧನ ಮೂರುತಿಯನ್ನು ಇಡಲಾಗುವುದನ್ನು ಗಮನಿಸಿರುತ್ತೇವೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಹಾಗೂ ಸಂಪತ್ತಿನಲ್ಲಿ ಏರಿಕೆ ಕಾಣಬೇಕು ಅಂತ ಇದ್ರೆ ಲಾಫಿಂಗ್ ಬುದ್ಧನ ಇಟ್ಟರೆ ಸಾಕು ಖಂಡಿತವಾಗಿ ನಿಮಗೆ ಒಳ್ಳೆಯ ಪರಿಣಾಮ ಉಂಟಾಗುತ್ತದೆ. ಆದರೆ ಈ ಸಂದರ್ಭದಲ್ಲಿ ನೀವು ಪ್ರತಿದಿನ ಸರಿಯಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾಗಿರುತ್ತದೆ.
  • ವಾಸ್ತು ಶಾಸ್ತ್ರದ ಪ್ರಕಾರ ಏಳು ಕುದುರೆಗಳು ಓಡುತ್ತಿರುವಂತಹ ಫೋಟೋವನ್ನು ಮನೆಯಲ್ಲಿ ತೂಗು ಹಾಕುವುದರಿಂದಾಗಿ ನಿಮ್ಮ ಮನೆಯಲ್ಲಿ ಒಳ್ಳೆಯ ಪರಿಣಾಮಗಳು ಉಂಟಾಗುತ್ತವೆ. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಇನ್ನು ಮನೆಯಲ್ಲಿ ಹಂಸದ ಚಿತ್ರವನ್ನು ಇಟ್ರೆ ಕೂಡ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹಾರುವ ಹಕ್ಕಿ ನವಿಲು ಪರ್ವತ ಈ ರೀತಿಯ ಫೋಟೋಗಳು ಕೂಡ ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯ ಪರಿಣಾಮವನ್ನು ಉಂಟುಮಾಡುತ್ತದೆ.
  • ವಾಸ್ತು ಶಾಸ್ತ್ರದ ಪ್ರಕಾರ ದೊಡ್ಡಮಟ್ಟದ ವಿಗ್ರಹವನ್ನು ಮನೆಯಲ್ಲಿಟ್ಟು ಪೂಜೆ ಮಾಡೋದು ಅಷ್ಟೊಂದು ಸರಿಯಲ್ಲ. ಹೀಗಾಗಿ ಚಿಕ್ಕ ಗಾತ್ರದ ಲಕ್ಷ್ಮಿ ಅಥವಾ ಗಣೇಶನ ಫೋಟೋವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಕೂಡ ಮನೆಗೆ ಸನ್ಮಂಗಳ ಉಂಟಾಗುತ್ತದೆ.
  • ಗೋಡೆಯ ಮೇಲೆ ತೂಗು ಹಾಕುವಂತಹ ಒಂದು ಗಡಿಯಾರ ಇದ್ದರೆ ಚಂದ ಆದರೆ ಯಾವತ್ತೂ ಕೂಡ ಗಡಿಯಾರ ನಿಂತುಕೊಳ್ಳದ ಹಾಗೆ ನೋಡಿಕೊಳ್ಳಿ ಅದು ಮನೆಗೆ ಅಪಶಕುನವಾಗಿರುತ್ತದೆ.
  • ಮನೆಯಲ್ಲಿ ಚಿಕ್ಕ ಪಾಟ್ ನಲ್ಲಿ ಮಣ್ಣನ್ನು ತುಂಬಿಸಿ ಅದಕ್ಕೆ ಚಿಕ್ಕ ಗಿಡವನ್ನು ಇಟ್ಟು ಸರಿಯಾದ ರೀತಿಯಲ್ಲಿ ಪಾಲನೆ ಪೋಷಣೆ ಮಾಡುವುದರಿಂದ ಕೂಡ ವಾಸ್ತು ಶಾಸ್ತ್ರದ ಪ್ರಕಾರ ಅದು ಮನೆಗೆ ಒಳ್ಳೆತನವನ್ನು ತರಬಹುದಾಗಿದೆ ಎಂಬುದಾಗಿ ಪರಿಗಣಿಸಲಾಗುತ್ತದೆ.

ಈ ಗಿಡ ಹಾಗೂ ವಸ್ತುಗಳನ್ನು ನೀವು ಹೊಸ ವರ್ಷ ಅಂದರೆ ಯುಗಾದಿಯ ಈ ಶುಭದಿನದಂದು ಮನೆಯಲ್ಲಿ ಇಟ್ಟು ಸರಿಯಾದ ರೀತಿಯಲ್ಲಿ ನೋಡಿಕೊಂಡರೆ ಸಾಕು ಖಂಡಿತವಾಗಿ ಸಂಪತ್ತು ಶಾಂತಿ ನೆಮ್ಮದಿ ಎನ್ನುವುದು ನಿಮ್ಮ ಮನೆಯನ್ನು ಪ್ರವೇಶಿಸಿ ಅಲ್ಲಿಯೇ ವಾಸವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳಬಹುದಾಗಿದೆ. ಹೀಗಾಗಿ ಯುಗಾದಿಯ ಈ ಶುಭದಿನದಂದು ಈ ವಸ್ತುಗಳನ್ನು ಮನೆಯಲ್ಲಿ ತಂದು ಇಟ್ಟುಕೊಳ್ಳುವಂತಹ ಕೆಲಸ ಮಾಡಿ.

Comments are closed.