Property Rules: ಹೊಸ ಮನೆ, ಜಮೀನು, ಆಸ್ತಿ ಖರಿದಿ ಮಾಡ್ತಿದೀರಾ? ಹಾಗಾದ್ರೆ ಈ ಡಾಕ್ಯುಮೆಂಟ್ಸ್ ಚೆಕ್ ಮಾಡಿ ಇಲ್ಲಾಂದ್ರೆ ಪಂಗನಾಮ ಗ್ಯಾರಂಟಿ!

Property Rules: ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ತಮ್ಮದೇ ಆದಂತಹ ಆಸ್ತಿ ಅಥವಾ ಮನೆಯನ್ನು ಹೊಂದಿರಬೇಕು ಎನ್ನುವಂತಹ ಕನಸು ಖಂಡಿತವಾಗಿ ಇದ್ದೇ ಇರುತ್ತದೆ. ಇನ್ನು ಈ ರೀತಿ ಪ್ರಾಪರ್ಟಿ ಅಥವಾ ಮನೆಯನ್ನು ಖರೀದಿಸುವುದಕ್ಕಿಂತ ಮುಂಚೆ ಕೆಲವೊಂದು ವಿಚಾರಗಳನ್ನು ನೀವು ಖಾತ್ರಿಪಡಿಸಿಕೊಳ್ಳಬೇಕಾಗಿರುತ್ತದೆ. ಅದರ ಬಗ್ಗೆ ನಿಮಗೆ ಇವತ್ತಿನ ಈ ಲೇಖನದಲ್ಲಿ ಮಾಹಿತಿ ನೀಡುವುದಕ್ಕೆ ಹೊರಟಿರೋದು.

ಪ್ರಾಪರ್ಟಿ/ಮನೆ ಖರೀದಿಸುವುದಕ್ಕಿಂತ ಮುಂಚೆ ಈ ನಾಲ್ಕು ಡಾಕ್ಯುಮೆಂಟ್ ಗಳನ್ನು ಪ್ರಮುಖವಾಗಿ ಗಮನಿಸಿ

  1. ಮೊದಲನೆಯದಾಗಿ ನೀವು ಖರೀದಿ ಮಾಡುತ್ತಿರುವಂತಹ ಪ್ರಾಪರ್ಟಿಯ ಮಾಲೀಕತ್ವ ಯಾರ ಹೆಸರಿನಲ್ಲಿದೆ ಎನ್ನುವಂತಹ ಹಕ್ಕು ಪತ್ರವನ್ನು ಕೇಳಿ ಪಡೆದುಕೊಳ್ಳಿ. ಹಕ್ಕುಪತ್ರದಲ್ಲಿ ಯಾರ ಹೆಸರು ಮಾಲೀಕರ ಹೆಸರಿನ ಜಾಗದಲ್ಲಿ ಇರುತ್ತದೆ ಹಾಗೂ ನಿಮಗೆ ಮನೆ ಅಥವಾ ಪ್ರಾಪರ್ಟಿಯನ್ನು ಮಾಡುತ್ತಿರುವಂತಹ ಮಾಲೀಕರ ಹೆಸರೇನು ಎಂಬುದನ್ನು ತಾಳೆ ಹಾಕಿ ನೋಡಿ. ಇದರಲ್ಲಿ ಕೂಡ ಕೆಲವರು ಮೋಸ ಮಾಡುವವರು ಇರುತ್ತಾರೆ.
  2. Encumbrance Certificate ಕೂಡ ಬೇಕಾಗಿರುತ್ತದೆ. ಅಂದ್ರೆ ನೀವು ಪಡೆದುಕೊಳ್ಳುತ್ತಿರುವಂತಹ ಪ್ರಾಪರ್ಟಿಯ ಮೇಲೆ ಯಾವುದೇ ಕಾರಣಕ್ಕೂ ಬೇರೆ ಬ್ಯಾಂಕುಗಳ ಅಥವಾ ಫೈನಾನ್ಸಿಯಲ್ ಸಂಸ್ಥೆಗಳ ಸಾಲ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅಂದರೆ ನಿಮಗೆ ಮಾಡುತ್ತಿರುವಂತಹ ಆಸ್ತಿಯನ್ನು ಅಡಮಾನ ರೂಪದಲ್ಲಿ ಯಾವುದೇ ತಾಲೂಕು ಬಳಸಿಕೊಂಡಿಲ್ಲ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಇದನ್ನು ಸಬ್ ರಿಜಿಸ್ಟರ್ ಫಾರ್ಮ್ 15 ರ ಮೂಲಕ ನೀಡಲಾಗುತ್ತದೆ.
  3. ಇನ್ನು ಮೂರನೇದಾಗಿ ಮನೆಗೆ ಸಂಬಂಧಪಟ್ಟಂತಹ ಪ್ರತಿಯೊಂದು ಟ್ಯಾಕ್ಸ್ ಅಥವಾ ಶುಲ್ಕಗಳನ್ನು ಅವರು ಕಟ್ಟಿದ್ದಾರೆ ಅನ್ನುವಂತಹ ಮಾಹಿತಿಗಾಗಿ ಅದಕ್ಕೆ ಸಂಬಂಧಪಟ್ಟಂತಹ ರಸೀದಿಗಳನ್ನು ಕೇಳಿ ಪಡೆದುಕೊಳ್ಳಬೇಕಾಗಿರುತ್ತದೆ.
  4. ಇನ್ನು ಮನೆ ಪೂರ್ತಿಯಾಗಿದೆ ಅನ್ನೋದನ್ನು ಸಾಬೀತುಪಡಿಸುವಂತಹ ಸರ್ಟಿಫಿಕೇಟ್ ಜೊತೆಗೆ ನೀವು ಈ ಪ್ರಾಪರ್ಟಿಯನ್ನು ಖರೀದಿ ಮಾಡುವುದಕ್ಕೆ ಮುಂದಾಗಿರುವುದರಿಂದಾಗಿ ಅದಕ್ಕೆ ನೀವು ವರ್ಗಾವಣೆ ಆಗಬಹುದು ಎನ್ನುವುದಕ್ಕೆ ಒಪ್ಪಿಗೆ ಸೂಚಿಸುವಂತಹ ಸರ್ಟಿಫಿಕೇಟ್ ಅನ್ನು ಕೂಡ ನಿಮಗೆ ಮನೆಯನ್ನು ಮಾರಾಟ ಮಾಡುವಂತಹ ಮಾಲೀಕರಿಂದ ಕೇಳಿ ಪಡೆದುಕೊಳ್ಳಬೇಕು. ಇವಿಷ್ಟು ದಾಖಲೆ ಪತ್ರಗಳನ್ನು ನೀವು ಕೇಳಿದರೆ ಹಾಗೂ ಅವರಿಂದ ಸಿಕ್ರೆ, ನೀವು ಖರೀದಿ ಮಾಡಲು ಬಯಸುತ್ತಿರುವ ಪ್ರಾಪರ್ಟಿಯಲ್ಲಿ ಯಾವುದೇ ರೀತಿಯ ಫ್ರಾಡ್ಗಳು ಇಲ್ಲ ಎಂಬುದನ್ನು ಸ್ಪಷ್ಟಪಡಿಸಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಮನೆ ಹಾಗೂ ಆಸ್ತಿಪಾಸ್ತಿಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡುವಂತಹ ಸ್ಕ್ಯಾಮ್ ಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಹಾಗೂ ನಿಮ್ಮನ್ನು ನೀವು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದಕ್ಕಾಗಿ ಈ ರೀತಿಯ ದಾಖಲೆ ಪತ್ರಗಳನ್ನು ಮನೆ ಮಾರಾಟ ಮಾಡುವವರಿಂದ ಕೇಳಿ ಪಡೆದುಕೊಂಡು ಕಾನೂನು ಸಲಹೆಗಾರರ ಮೂಲಕ ಆಸ್ತಿಯನ್ನು ಖರೀದಿ ಮಾಡುವುದಕ್ಕೆ ಪ್ರಯತ್ನಪಡಿ ಎಂಬುದಾಗಿ ಹೇಳಬಹುದಾಗಿದೆ.

Comments are closed.