RCB Captain: ಆರ್ಸಿಬಿ ಕ್ಯಾಪ್ಟನ್ಸಿಯಲ್ಲಿ ಬದಲಾವಣೆ ಆಗುತ್ತಾ? ಏನಿದು ಸುದ್ದಿ!

RCB Captain: ಈ ಬಾರಿಯ ಐಪಿಎಲ್ ಪ್ರಾರಂಭ ಆಗುವುದಕ್ಕಿಂತ ಮುಂಚೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖಂಡಿತವಾಗಿ ಬಲಿಷ್ಠ ತಂಡವಾಗಿ ಕಣಕ್ಕಿಳಿಯಲಿದೆ ಹಾಗೂ ಪ್ರತಿಯೊಂದು ಪಂದ್ಯಗಳನ್ನು ನಿರೀಕ್ಷೆಗಿಂತ ಸುಲಭವಾಗಿ ಗೆಲ್ಲಬಹುದು ಎನ್ನುವಂತಹ ಲೆಕ್ಕಾಚಾರವನ್ನು ಪೇಪರ್ ಮೇಲೆ ಬರೆದಿಡಲಾಗಿತ್ತು. ಆದರೆ ಈಗ ಆರ್‌ಸಿಬಿ ಅಭಿಮಾನಿಗಳ ಆ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಗಿದೆ ಎಂದು ಹೇಳಬಹುದು. ಆಡಿರುವಂತಹ 5 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರ್ ತಂಡ ಗೆದ್ದಿರೋದು ಕೇವಲ ಒಂದು ಪಂದ್ಯವನ್ನು ಮಾತ್ರ. ಈಗಾಗಲೇ ಪಾಯಿಂಟ್ಸ್ ಟೇಬಲ್ ನಲ್ಲಿ 9ನೇ ಸ್ಥಾನದಲ್ಲಿದೆ.

ನಾಯಕತ್ವದ ಬದಲಾವಣೆಗೆ ಕೇಳಿ ಬರುತ್ತಿದೆ ಕೂಗು

ಕಳೆದ ಎರಡು ಬಾರಿಯ ಸೀಸನ್ ನಲ್ಲಿ ಡೂಪ್ಲೆಸಿಸ್(Du Plesis) ತಂಡದ ನಾಯಕನಾಗಿ ಹಾಗೂ ಆರಂಭಿಕ ಬ್ಯಾಟ್ಸ್ಮನ್ ಆಗಿ ಉತ್ತಮ ರೀತಿಯ ಪ್ರದರ್ಶನವನ್ನು ತೋರ್ಪಡಿಸಿದ್ದರು. ಈ ಬಾರಿ ನಾಯಕತ್ವ ಹಾಗೂ ಬ್ಯಾಟಿಂಗ್ ಪ್ರದರ್ಶನ ಎರಡರಲ್ಲಿಯೂ ಕೂಡ ಅವರು ಮಂಕಾಗಿರೋದು ತಂಡದ ನಾಯಕತ್ವದ ಮೇಲೆ ಅಭಿಮಾನಿಗಳು ಪ್ರಶ್ನೆ ಎತ್ತುವ ರೀತಿ ಮಾಡಿದೆ. ಡ್ಯೂಪ್ಲೆಸಿಸ್ ಅವರ ಬದಲಾಗಿ ವಿರಾಟ್ ಕೊಹ್ಲಿ ಅವರಿಗೆ ಮತ್ತೆ ನಾಯಕತ್ವವನ್ನು ನೀಡಬೇಕು ಎಂಬುದಾಗಿ ಕೂಡ ಆರ್ಸಿಬಿ ಅಭಿಮಾನಿಗಳು ಹೇಳುತ್ತಿದ್ದಾರೆ. ಕೆಲವೊಂದು ಕಡೆಗಳಲ್ಲಿ ದಿನೇಶ್ ಕಾರ್ತಿಕ್(Dinesh Karthik) ರವರಿಗೆ ನಾಯಕತ್ವವನ್ನು ನೀಡಿ ಹಾಗೂ ಡ್ಯೂಪ್ಲೆಸಿಸ್ ರವರಿಗೆ ನಾಯಕತ್ವದ ಜವಾಬ್ದಾರಿಯನ್ನು ತೆರವುಗೊಳಿಸುವುದರಿಂದ ಅವರಿಗೆ ಮುಕ್ತವಾಗಿ ಬ್ಯಾಟಿಂಗ್ ಮಾಡುವಂತಹ ಅವಕಾಶವನ್ನು ನೀಡ ಬಹುದು ಎಂಬುದಾಗಿ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಇತ್ತೀಚಿಗಷ್ಟೇ ಇಂಪ್ಯಾಕ್ಟ್ ಪ್ಲೇಯರ್ ಬಗ್ಗೆ ಮಾತನಾಡಿದಾಗ ವಿರಾಟ್ ಕೊಹ್ಲಿ ರವರು ಇದರ ಬಗ್ಗೆ ನನಗೆ ತಿಳಿದಿಲ್ಲ ಅದಕ್ಕಿಂತ ನಾನು ಸಾಕಷ್ಟು ಮುಂದು ಬಂದಿದ್ದೇನೆ ಎಂಬುದಾಗಿ ಹೇಳುವ ಮೂಲಕ ತಂಡದ ಆಯ್ಕೆಯಲ್ಲಿ ತನ್ನ ಪಾತ್ರ ಕಿಂಚಿತ್ತು ಇಲ್ಲ ಅನ್ನೋದನ್ನ ಪರೋಕ್ಷವಾಗಿ ಹೇಳಿದ್ದಾರೆ.

ಟೀಮ್ ಮ್ಯಾನೇಜ್ಮೆಂಟ್ ಮೇಲೆ ಅಭಿಮಾನಿಗಳ ಕೆಂಗಣ್ಣು

ವಿಲ್ ಜಾಕ್ಸ್ ಅವರಂತಹ ಪ್ರತಿಭಾನ್ವಿತ ಬ್ಯಾಟ್ಸ್ಮನ್ ಇದ್ರೂ ಕೂಡ ಅವರಿಗೆ ತಂಡದಲ್ಲಿ ಅವಕಾಶವನ್ನು ಯಾಕೆ ನೀಡುತ್ತಿಲ್ಲ ಎನ್ನುವುದಾಗಿ ಆರ್ಸಿಬಿ ಅಭಿಮಾನಿಗಳು ಟೀಮ್ ಮ್ಯಾನೇಜ್ಮೆಂಟ್ ಮೇಲೆ ಕೋಪಗೊಂಡಿದ್ದಾರೆ. ಮಹಿಪಾಲ್ ಲೋಮ್ರೋರ್ ತಮಗೆ ಸಿಕ್ಕಿರುವಂತಹ ಚಿಕ್ಕಪುಟ್ಟ ಅವಕಾಶಗಳಲ್ಲಿ ಕೂಡ ಅತ್ಯುತ್ತಮ ಸ್ಪೋ-ಟಕ ಬ್ಯಾಟಿಂಗ್ ಪ್ರದೇಶವನ್ನು ತೋರಿಸಿದ್ದಾರೆ. ಹೀಗಾಗಿ ಅವರಿಗೂ ಕೂಡ ಅವಕಾಶ ನೀಡಬೇಕು ಎನ್ನುವುದು ಆರ್‌ಸಿಬಿ ಅಭಿಮಾನಿಗಳ ಆಸೆಯಾಗಿದೆ. ಇದರ ಜೊತೆಗೆ ಲೋಕಲ್ ಬಾಯ್ ಕನ್ನಡದ ಹುಡುಗ ಆಗಿರುವಂತಹ ವೈಶಾಕ್ ವಿಜಯ್ ಕುಮಾರ್ ಅವರಿಗೆ ಯಾಕೆ ಅವಕಾಶ ನೀಡುತ್ತಿಲ್ಲ ಅನ್ನೋದು ಕೂಡ ತಂಡದ ಅಭಿಮಾನಿಗಳ ಪ್ರಶ್ನೆ. ಸಿಕ್ಕಿರುವಂತಹ ಅವಕಾಶಗಳನ್ನು ಅವರು ಸರಿಯಾಗಿ ಬಳಸಿಕೊಂಡಿರುವುದು ತಂಡದ ಕಣ್ಮುಂದೆ ಇದ್ರೂ ಕೂಡ ಅವರಿಗೆ ಪ್ರಮುಖ ಬೌಲರ್ ಆಗಿ ಯಾಕೆ ಪ್ರಮೋಟ್ ಮಾಡ್ತಾ ಇಲ್ಲ ಅನ್ನೋದು ಆರ್ಸಿಬಿ ಮ್ಯಾನೇಜ್ಮೆಂಟ್ ಮೇಲೆ ಅಭಿಮಾನಿಗಳು ಕೇಳುತ್ತಿರುವ ದೊಡ್ಡ ಪ್ರಶ್ನೆಯಾಗಿದೆ.

Comments are closed.