Agriculture: ಈ ಕೃಷಿ ಮಾಡಿದ್ರೆ ದಿನಕ್ಕೆ 40,000 ಆದಾಯ ಫಿಕ್ಸ್; ಯಾವ ಕೃಷಿ ಗೊತ್ತಾ?

Agriculture: ಆಹಾರದ ವಿಚಾರದಲ್ಲಿ ಬಂದರೆ ಮಶ್ರೂಮ್ ಅಂದ್ರೆ ಅಣಬೆ ಎಷ್ಟು ಪ್ರಮುಖ ಆಹಾರ ವಸ್ತುವಾಗಿ ಹೋಟೆಲ್ ಉದ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎನ್ನುವುದನ್ನ ನಿಮಗೆ ವಿಶೇಷವಾಗಿ ಹೇಳಬೇಕಾದ ಅಗತ್ಯವಿಲ್ಲ. ಇನ್ನು ಇದನ್ನ ಕೃಷಿಯಾಗಿ ಆಯ್ಕೆ ಮಾಡಿದ್ರೆ ಯಾವ ರೀತಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಿಮಗೆ ಹೇಳಲು ಹೊರಟಿದ್ದೇವೆ. ವಿಶೇಷ ಅನ್ನೋ ರೀತಿಯಲ್ಲಿ ತಾಯಿ ಮಗನ ಜೋಡಿ ಈ ಅಣಬೆ ಕೃಷಿಯನ್ನು ಮಾಡುತ್ತಿದ್ದು ಇದರಿಂದ ಅವರು ಪಡೆದುಕೊಳ್ಳುತ್ತಿರುವ ಲಾಭ ಕೂಡ ಈಗಾಗಲೇ ಜನಜನಿತವಾಗಿದೆ.

ತಾಯಿ ಮಗನ ಮಶ್ರೂಮ್ ಕೃಷಿ ಹೇಗಿದೆ ಗೊತ್ತಾ?

ಜಿತು ಥಾಮಸ್ ತಮ್ಮ ತಾಯಿಯಾಗಿರುವಂತಹ ಲೀನಾ ಅವರ ಜೊತೆಗೆ ಸೇರಿಕೊಂಡು ಈ ಅಣಬೆ ಕೃಷಿಯನ್ನು ಪ್ರಾರಂಭ ಮಾಡಿರುತ್ತಾರೆ. ಇದರ ಬಗ್ಗೆ ಅವರು ಮಾತನಾಡುತ್ತಾ 30 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇರುವಂತಹ ಹವಮಾನದಲ್ಲಿ ಅಣಬೆ ಕೃಷಿಯನ್ನು ಮಾಡಲು ಸಾಧ್ಯವಿಲ್ಲ. 20,000 ಬೆಡ್ ಗಳನ್ನು ಇರಿಸುವಂತಹ ಜಾಗದಲ್ಲಿ ಈ ಕೃಷಿಯನ್ನು ನಾವು ಪ್ರಾರಂಭಿಸಿದ್ದೇವೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಅಣಬೆ ಕೃಷಿಯ ಅತ್ಯಂತ ಕಡಿಮೆ ಸಮಯದಲ್ಲಿ ಆಗುತ್ತದೆ ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲ. ಹವಮಾನದ ಬದಲಾವಣೆ ಹಾಗೂ ಕೆಲವೊಂದು ಕೀಟಗಳ ಕಾರಣದಿಂದಾಗಿ ಇದು ಅತ್ಯಂತ ಸೂಕ್ಷ್ಮ ಕೃಷಿ ಬೆಳೆಯಾಗಿದೆ.

ಅಣಬೆ ಕೃಷಿಯಿಂದ ಈ ತಾಯಿ ಮಗ ದುಡಿತಿರುವುದು ಎಷ್ಟು ಗೊತ್ತಾ?

ಜಿತು ರವರು ತಮ್ಮ ಸ್ವಂತವಾದ 5000 ಚದರ ಅಡಿ ಭೂಮಿಯಲ್ಲಿ ಅಣಬೆ ಕೃಷಿಯನ್ನು ಮಾಡುತ್ತಿದ್ದಾರೆ. ಆಶ್ಚರ್ಯ ಎನ್ನುವ ರೀತಿಯಲ್ಲಿ ಪ್ರತಿದಿನ ಇವರು ನೂರು ಕೆಜಿಗು ಹೆಚ್ಚಿನ ಅಣಬೆಯನ್ನು ಕೃಷಿ ಮಾಡಿ ಬೆಳೆಯುತ್ತಿದ್ದಾರೆ. ಎಲ್ಲಕ್ಕಿಂತ ವಿಶೇಷ ಎನ್ನುವ ರೀತಿಯಲ್ಲಿ ಇವರು ಬೆಳೆದಿರುವಂತಹ ಅಣಬೆಯನ್ನು ಮಧ್ಯದಲ್ಲಿ ಯಾವುದೇ ದಲ್ಲಾಳಿ ಇಲ್ಲದೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಅವರ ಕಮಿಷನ್ ಹಣ ಕೂಡ ಖರ್ಚಿನಲ್ಲಿ ಉಳಿತಾಯವಾಗುತ್ತದೆ. ಇದಕ್ಕಿಂತ ವಿಶೇಷ ಎನ್ನುವ ರೀತಿಯಲ್ಲಿ ಆಣಬೆ ಕೃಷಿಯಲ್ಲಿ ತಮ್ಮದೇ ಆದಂತಹ ಯಶಸ್ಸಿನ ಕಥೆಯನ್ನು ಬರೆದಿರುವಂತಹ ಜಿತು ಈಗಾಗಲೇ ಸಾವಿರಕ್ಕೂ ಹೆಚ್ಚಿನ ಜನರಿಗೆ ಆಣಬೆ ಕೃಷಿಯ ಬಗ್ಗೆ ಶಿಕ್ಷಣವನ್ನು ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಅಣಬೆ ಕೃಷಿ ಯಾವ ರೀತಿಯಲ್ಲಿ ಲಾಭವನ್ನು ನೀಡುತ್ತದೆ ಅನ್ನೋದಕ್ಕೆ ಜಿತು ಹಾಗೂ ಅವರ ತಾಯಿ ಮಾಡುತ್ತಿರುವಂತಹ ಈ ಅಣಬೆ ಕೃಷಿಯಿಂದ ಅವರು ಪ್ರತಿ ದಿನ ಮಾಡುತ್ತಿರುವಂತಹ ಸಂಪಾದನೆಯೇ ಜೀವಂತ ಸಾಕ್ಷಿಯಾಗಿದೆ. ಹೌದು ಈ ಅಣಬೆ ಕೃಷಿಯಿಂದಾಗಿ ಜಿತು ಪ್ರತಿದಿನ 40,000ಗಳವರೆಗೆ ಆದಾಯವನ್ನು ಹೊಂದಿದ್ದಾರೆ. ಸರಿಯಾದ ರೀತಿಯಲ್ಲಿ ಪರಿಶ್ರಮ ಕೊಟ್ಟು ಒಳ್ಳೆಯ ರೀತಿಯಲ್ಲಿ ಕೃಷಿಯನ್ನು ಆಯ್ಕೆ ಮಾಡಿಕೊಂಡರೆ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಕೃಷಿ ಕ್ಷೇತ್ರದಲ್ಲಿ ಕೂಡ ಒಬ್ಬ ಉದ್ಯಮಿಗಿಂತ ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದೇ ಎನ್ನುವುದಕ್ಕೆ ಇದೇ ಜೀವಂತ ಉದಾಹರಣೆ.

Comments are closed.