Rajyoga: 50 ವರ್ಷಗಳ ನಂತರ ಕಾಣಿಸಿಕೊಂಡ ನೀಚಭಂಗ ರಾಜಯೋಗ; ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!

Rajyoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹಗಳ ಚಾಲನೆ ಎನ್ನುವುದು ನೇರವಾಗಿ ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದೇ ರೀತಿಯಲ್ಲಿ ಏಪ್ರಿಲ್ 9 ನೇ ತಾರೀಖಿನಂದು ಬುಧ ಮೀನ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಇದರಿಂದ 50 ವರ್ಷಗಳ ನಂತರ ನೀಚಭಂಗ ರಾಜಯೋಗ ನಿರ್ಮಾಣ ಆಗಲಿದ್ದು ಇದರಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟ ಎನ್ನುವುದು ಅವರು ಕೈ ಇಟ್ಟ ಕ್ಷೇತ್ರಗಳಲ್ಲಿ ಸಿಗಲಿದೆ. ಹಾಗಿದ್ರೆ ಬನ್ನಿ ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

ನೀಚ ಭಂಗ ರಾಜಯೋಗದಿಂದ ಅದೃಷ್ಟ ಪಡೆಯುವ ರಾಶಿಗಳು

ಮೇಷ ರಾಶಿ(Aries)

ಈ ಸಮಯದಲ್ಲಿ ಈ ವಿಶೇಷವಾದ ರಾಜಯೋಗದಿಂದ ಮೇಷ ರಾಶಿಯವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಳ್ಳುವ ಸಾಧ್ಯತೆ ಇದೆ ಹಾಗೂ ಜನರ ನಡುವೆ ನಿಮ್ಮ ಮೇಲೆ ಇರುವಂತಹ ಗೌರವ ಹಾಗೂ ಪ್ರೀತಿ ಹೆಚ್ಚಾಗಲಿದೆ. ಅನಿರೀಕ್ಷಿತವಾಗಿ ಧನ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಮಾನಸಿಕ ಒತ್ತಡದಿಂದ ನೀವು ಈ ಸಂದರ್ಭದಲ್ಲಿ ಪರಿಹಾರ ಪಡೆದುಕೊಳ್ಳಲಿದ್ದೀರಿ ಹಾಗೂ ಎಲ್ಲಾ ಚಿಂತನೆಗಳು ದೂರವಾಗಲಿವೆ. ಸಾಕಷ್ಟು ಸಮಯಗಳಿಂದ ನಡೆಯುತ್ತಿರುವಂತಹ ನ್ಯಾಯಾಲಯದ ಪ್ರಕರಣ ನಿಮ್ಮ ಪರವಾಗಿ ತೀರ್ಪನ್ನು ನೀಡಲಿದೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಮೇಷ ರಾಶಿಯವರು ಈ ಸಮಯದಲ್ಲಿ ಲಾಭವನ್ನು ಸಂಪಾದನೆ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ವೃಷಭ ರಾಶಿ(Taurus)

ಸಂತಾನ ಭಾಗ್ಯಕ್ಕಾಗಿ ಎದುರು ನೋಡುತ್ತಿರುವಂತಹ ವೃಷಭ ರಾಶಿಯವರಿಗೆ ಮಗು ಜನಿಸಲಿದೆ. ನೀವು ಮಾಡುವಂತಹ ವ್ಯಾಪಾರದಲ್ಲಿ ನಿಮ್ಮ ಆಪ್ತ ಸ್ನೇಹಿತರ ಸಹಾಯದ ಮೂಲಕ ನೀವು ಇನ್ನಷ್ಟು ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ. ಉದ್ಯೋಗದಲ್ಲಿ ಕೂಡ ಹೆಚ್ಚಿನ ಸಂಬಳ ಹಾಗೂ ಪ್ರಮೋಷನ್ ಪಡೆದುಕೊಳ್ಳುವಂತಹ ಅವಕಾಶ ಈ ಸಮಯದಲ್ಲಿ ನಿರ್ಮಾಣವಾಗಲಿದೆ. ನೀವು ಸಾಕಷ್ಟು ಸಮಯಗಳಿಂದ ಉಳಿಸಿ ಇಟ್ಟಿರುವಂತಹ ಹಣದಿಂದ ಆಸ್ತಿ ಮನೆ ಹಾಗೂ ಹೊಸ ವಾಹನವನ್ನು ಖರೀದಿ ಮಾಡುವಂತಹ ಅವಕಾಶ ಇದೆ. ಉದ್ಯಮದಲ್ಲಿ ಸಾಕಷ್ಟು ಹೊಸ ಡೀಲ್ ಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.

ಮಿಥುನ ರಾಶಿ(Gemini)

ಈ ವಿಶೇಷವಾದ ಸಂದರ್ಭದಲ್ಲಿ ಮಿಥುನ ರಾಶಿಯವರನ್ನು ಅನಿರೀಕ್ಷಿತವಾಗಿ ಹಣ ಹುಡುಕಿಕೊಂಡು ಬರುವಂತಹ ಸಾಧ್ಯತೆ ದಟ್ಟವಾಗಿದೆ. ವ್ಯಾಪಾರ ಹಾಗೂ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬೇಕು ಎನ್ನುವಂತಹ ರಾಶಿ ಅವರು ಕೂಡ ಈ ಸಂದರ್ಭದಲ್ಲಿ ವಿದೇಶಿ ಯಾತ್ರೆಯನ್ನು ಮಾಡಲಿದ್ದಾರೆ. ನೀವು ಕೆಲಸ ಮಾಡುತ್ತಿರುವಂತಹ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಮೆಚ್ಚಿ ವರಿಷ್ಠ ಅಧಿಕಾರಿಗಳು ಹೊಸ ದೊಡ್ಡ ಮಟ್ಟದ ಜವಾಬ್ದಾರಿಯನ್ನು ನೀಡಬಹುದು. ಕುಟುಂಬದಲ್ಲಿ ಕೂಡ ಸಾಕಷ್ಟು ಸಮಯಗಳ ನಂತರ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ನಿಮ್ಮ ಜೀವನದಲ್ಲಿ ಇನ್ನಷ್ಟು ಉತ್ತಮ ಸಂಪನ್ಮೂಲಗಳು ನಿಮ್ಮ ಕೆಲಸ ಹಾಗೂ ದೈನಂದಿನ ಜೀವನದಲ್ಲಿ ನಿಮ್ಮ ಜೊತೆಗೆ ಇರಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವಂತಹ ಸಾಧ್ಯತೆ ಕೂಡ ಇದೆ. ಇದರಿಂದಾಗಿ ಇನ್ನಷ್ಟು ಹೆಚ್ಚಿನ ಪುಣ್ಯ ಸಂಪಾದನೆ ಆಗಲಿದೆ.

Comments are closed.