Bhagyalakshmi Serial: ಒಬ್ಬನೇ ಇದ್ ತಾಂಡವ್, ಆಯ್ತಲ್ಲಾ ಹೊಸ ಎಂಟ್ರಿ. ಈಗೇನ್ ಮಾಡ್ತಾಳೆ ನಮ್ ಭಾಗ್ಯ?

Bhagyalakshmi Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಈಗಾಗಲೇ ಏನಾಗಿದೆ ಅನ್ನೋದನ್ನ ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಹೌದು ಮನೆ ಎರಡು ಇಬ್ಭಾಗವಾಗಿದ್ದು ಒಂದರಲ್ಲಿ ತಾಂಡವ್ ಇದ್ರೆ ಇನ್ನೊಂದು ಮನೆಯಲ್ಲಿ ಭಾಗ್ಯ ಕುಸುಮ ಹಾಗೂ ಮಕ್ಕಳಿದ್ದಾರೆ. ತಾಂಡವ್ ಗೆ ಸರಿಯಾದ ಪಾಠವನ್ನು ಕಲಿಸುವುದಕ್ಕೆ ಎಲ್ಲರೂ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಗಂಡ ತಾಂಡವ್ ತನಗೆ ಭಾಗ್ಯಾಳಿಂದ ವಿವಾಹ ವಿಚ್ಛೇದನ ಬೇಕು ಎನ್ನುವುದಾಗಿ ಬೇಡಿಕೊಳ್ಳುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಭಾಗ್ಯ ಮಕ್ಕಳು ಹಾಗೂ ಅತ್ತೆ ಮಾವ ಖುಷಿಯಾಗಿರಬೇಕು ಅಂತ ಬಯಸುತ್ತಾಳೆ. ಮೊದಲ ಗಂಡನ ಮಾತಿಗೆ ತಲೆ ಅಲ್ಲಾಡಿಸುತ್ತಿದ್ದ ಭಾಗ್ಯ ಈಗ ತಿರುಗಿ ಉತ್ತರ ನೀಡುವುದಕ್ಕೆ ಕೂಡ ಪ್ರಾರಂಭಿಸಿದ್ದಾಳೆ. ತಾಂಡವ್ ಗೆ ಭಾಗ್ಯ ಓಲ್ಡ್ ಫ್ಯಾಷನ್ ಓದಕ್ಕೆ ಬರೆಯುವುದಕ್ಕೆ ಬರುವುದಿಲ್ಲ ಹಾಗೂ ಈ ಮಾಡರ್ನ್ ದಿನಗಳ ಬಗ್ಗೆ ಹೆಚ್ಚಿನ ಅಪ್ಡೇಟ್ ಇಲ್ಲ ಎನ್ನುವ ಕಾರಣಕ್ಕಾಗಿ ಅವಳನ್ನು ಆದಷ್ಟು ತಿರಸ್ಕೃತ ಮನೋಭಾವದಿಂದಲೇ ನೋಡ್ತಾನೆ. ಆದರೆ ಭಾಗ್ಯ ಮಾತ್ರ ಸಾಕಷ್ಟು ಬುದ್ಧಿವಂತೆ, ಈವರೆಗೆ ಕಂಡುಬಂದಿರುವ ಪ್ರತಿಯೊಂದು ಸವಾಲುಗಳಲ್ಲಿ ಅವಳು ಗೆದ್ದಿದ್ದಾಳೆ. ಮುಂದೆ ಏನಾಗುತ್ತೆ ಅಂತ ಕಾದು ನೋಡಬೇಕು.

ಶ್ರೇಷ್ಠ – ಭಾಗ್ಯ ಹಗ್ಗ ಜಗ್ಗಾಟ

ಯಾವುದೇ ಹೆಂಡತಿ ಆದರೂ ಕೂಡ ತನ್ನ ಗಂಡನ ಬೇರೆಯವರಿಗೆ ಬಿಟ್ಟು ಕೊಡುವುದು ಕಷ್ಟದ ಮಾತು. ಸದ್ಯಕ್ಕೆ ಭಾಗ್ಯಾಳಿಂದ ಹಿಮ್ಮುಖನಾಗಿರುವ ತಾಂಡವ್ ತನ್ನ ಸಹೋದ್ಯೋಗಿ ಆಗಿರುವಂತಹ ಶ್ರೇಷ್ಠಾಳನ್ನು ಪ್ರೀತಿಸೋಕೆ ಪ್ರಾರಂಭಿಸಿದ್ದಾನೆ ಹಾಗೂ ಈ ವಿಚಾರ ಯಾರಿಗೂ ಗೊತ್ತಿಲ್ಲ. ಇದೇ ಕಾರಣಕ್ಕಾಗಿ ತಾಂಡವ್ ಭಾಗ್ಯಗಳಿಂದ ಡಿವೋರ್ಸ್ ಬೇಕು ಎನ್ನುವುದಾಗಿ ಒದ್ದಾಡುತ್ತಿದ್ದಾನೆ. ಆದರೆ ಭಾಗ್ಯ ಮಾತ್ರ ತಾಂಡವ್ಗೆ ಡಿವೋರ್ಸ್ ನೀಡುವುದಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಇದೇ ಕಾರಣಕ್ಕಾಗಿ ಈಗ ಸೂರ್ಯವಂಶಿ ಮನೆ ಅನ್ನೋದು ಎರಡು ಭಾಗವಾಗಿರೋದು. ದಿನಂಪ್ರತಿ ಮನೆಯಲ್ಲಿ ಜಗಳ ನಡೆಯುತ್ತಿದೆ ಹಾಗೂ ಸುಖ ಶಾಂತಿ ನೆಮ್ಮದಿ ಅನ್ನೋದು ಎಲ್ಲರ ಜೀವನದಿಂದ ದೂರ ಹೋಗಿದೆ ಅಂತ ಹೇಳಬಹುದು. ಇದೇ ವಿಚಾರದ ಬಗ್ಗೆ ಮತ್ತೊಂದು ಕಡೆ ಶ್ರೇಷ್ಠ ಒಮ್ಮೆ ತಾಂಡವ್ ನನ್ನು ಮದುವೆಯಾಗಿ ನಂತರ ಎಲ್ಲರಿಗೂ ಬುದ್ಧಿ ಕಲಿಸುತ್ತೇನೆ ಅನ್ನೋದಾಗಿ ಕಾಯ್ತಾ ಇದ್ದಾಳೆ.

ಭಾಗ್ಯ ಮನೆಗೆ ಹೊಸ ಅತಿಥಿ ಎಂಟ್ರಿ

ಇದೆಲ್ಲದರ ನಡುವೆ ಭಾಗ್ಯ ಲಕ್ಷ್ಮಿ ಧಾರವಾಹಿಯಲ್ಲಿ ಮತ್ತೊಬ್ಬ ಹೊಸ ಅತಿಥಿಯ ಎಂಟ್ರಿ ಆಗಿರುವಂತಹ ಪ್ರೊಮೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಕುಲವಧು ಧಾರವಾಹಿಯ ದೀಪಿಕಾ ಭಾಗ್ಯಲಕ್ಷ್ಮಿ ಮನೆಗೆ ಎಂಟ್ರಿ ನೀಡಿದ್ದಾರೆ. ಯಾತಕ್ಕಾಗಿ ಏನು ವಿಚಾರ ಅನ್ನೋದನ್ನ ಧಾರವಾಹಿ ಎಪಿಸೋಡ್ ಅನ್ನು ನೋಡಿದ ಮೇಲೆನೆ ತಿಳಿದುಕೊಳ್ಳಬೇಕು. ಒಟ್ಟಾರೆಯಾಗಿ ಎಪಿಸೋಡ್ ನಿಂದ ಎಪಿಸೋಡ್ ಗೆ ಭಾಗ್ಯಲಕ್ಷ್ಮಿ ಧಾರವಾಹಿ ಸಾಕಷ್ಟ್ ರೋಚಕತೆಯಿಂದ ಕೂಡಿದ್ದು ಪ್ರೇಕ್ಷಕರಿಗೆ ಮುಂದೇನಾಗುತ್ತದೆ ಎನ್ನುವಂತಹ ಕುತೂಹಲ ಹೆಚ್ಚಾಗುತ್ತಿದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.

Comments are closed.