Astrology: ಒಂದಕ್ಕಿಂತ ಹೆಚ್ಚು ರಾಶಿಗಳಲ್ಲಿ ನಡೀತಾ ಇದೆ ಶುಕ್ರನ ಸಂಕ್ರಮಣ. ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ; ನಿಮ್ಮ ರಾಶಿಯೂ ಇದ್ಯಾ ಚೆಕ್ ಮಾಡಿ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯಲ್ಲಿ ಶುಕ್ರನ ಸಂಚಲನ ಏಪ್ರಿಲ್ 24ರಂದು ನಡೆಯಲಿದ್ದು ಇದು ಬೇರೆ ಬೇರೆ ರಾಶಿಯವರ ರಾಶಿ ಚಕ್ರದಲ್ಲಿ ಬೇರೆ ಬೇರೆ ರೀತಿಯ ಪರಿಣಾಮವನ್ನು ಬೀರಲಿದೆ. ಶುಕ್ರನ ಈ ಚಲನೆಯಿಂದಾಗಿ ಯಾವೆಲ್ಲ ರಾಶಿಯವರಿಗೆ ಅದೃಷ್ಟ ಉಂಟಾಗಲಿದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ(Aries)

ಈ ಸಮಯದಲ್ಲಿ ದ್ವಾದಶ ರಾಶಿಗಳಲ್ಲಿ ಮೊದಲನೇ ರಾಶಿ ಆಗಿರುವಂತಹ ಮೇಷ ರಾಶಿಯವರ ಅದೃಷ್ಟ ಹಾಗೂ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ. ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದ ಮೇಷ ರಾಶಿಯವರು ಸಾಲವನ್ನು ತೀರಿಸಲಿದ್ದಾರೆ. ಕೆಲಸದ ವಿಚಾರದಲ್ಲಿ ಕೂಡ ಮೇಷ ರಾಶಿಯವರು ಸಂಬಳವನ್ನು ಹೆಚ್ಚಾಗಿ ಪಡೆದುಕೊಳ್ಳುವ ಹಾಗೂ ಪ್ರಮೋಷನ್ ಸಿಗುವಂತಹ ಸಕಾರಾತ್ಮಕ ಪರಿಣಾಮವನ್ನು ಪಡೆದುಕೊಳ್ಳಲಿದ್ದಾರೆ. ಈ ಸಮಯದಲ್ಲಿ ನಿಮಗೆ ಬೇರೆ ಬೇರೆ ಮೂಲಗಳಿಂದ ಆದಾಯ ಹೆಚ್ಚಾಗಿ ಹರಿದು ಬರಲಿದೆ.

ಸಿಂಹ ರಾಶಿ(Leo)

ಸಾಕಷ್ಟು ಸಮಯಗಳಿಂದ ಕಷ್ಟಪಟ್ಟು ದುಡಿಯುತ್ತಿರುವಂತಹ ಸಿಂಹ ರಾಶಿಯವರಿಗೆ ಅದೃಷ್ಟದ ಪ್ರತಿಫಲ ಈ ಸಂದರ್ಭದಲ್ಲಿ ದೊರಕಲಿದೆ. ಸಿಂಹ ರಾಶಿಯವರ ಮನಸ್ಸಿನಲ್ಲಿ ಇರುವಂತಹ ಇಚ್ಛಾಶಕ್ತಿ ಅವರನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗಲಿದೆ. ಉದ್ಯೋಗ ಮಾಡುವ ಸ್ಥಳದಲ್ಲಿ ಸಿಂಹ ರಾಶಿಯವರಿಗೆ ಲಾಭ ಕಾದಿದೆ. ವ್ಯಾಪಾರಸ್ಥರು ಕೂಡ ಈ ಸಂದರ್ಭದಲ್ಲಿ ಆರ್ಥಿಕ ವಿಚಾರದಲ್ಲಿ ಸಾಕಷ್ಟು ಮುಂದುವರೆದ ಫಲಗಳನ್ನು ಪಡೆದುಕೊಳ್ಳಲಿದ್ದಾರೆ. ಸಿಂಹ ರಾಶಿಯವರಿಗೆ ಉದ್ಯೋಗದಲ್ಲಿ ಕೂಡ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುವ ಸಾಧ್ಯತೆ ಹೆಚ್ಚಾಗಿದೆ.

ಮಿಥುನ ರಾಶಿ(Gemini)

ಶುಕ್ರನ ಕೃಪಾಕಟಾಕ್ಷದಿಂದಾಗಿ ಮಿಥುನ ರಾಶಿಯವರಿಗೆ ಹಣದ ವಿಚಾರದಲ್ಲಿ ಸಾಕಷ್ಟು ಲಾಭಗಳು ಕೈಗೆ ಸಿಗಲಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಮಾಡುವಂತಹ ಉದ್ಯಮಿಗಳು ದೊಡ್ಡ ಪ್ರಮಾಣದ ಡೀಲ್ ಅನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುವವರು ಕೂಡ ಅದೃಷ್ಟದ ಬಲದಿಂದಾಗಿ ಸಾಕಷ್ಟು ಲಾಭವನ್ನು ಸಂಪಾದಿಸಲಿದ್ದಾರೆ. ನಿಮ್ಮ ಕನಸಿನ ಮನೆ ಹಾಗೂ ಕಾರನ್ನು ಖರೀದಿ ಮಾಡುವುದಕ್ಕೆ ಕೂಡ ಇದೊಂದು ಸೂಕ್ತ ಸಮಯ ಎಂದು ಹೇಳಬಹುದಾಗಿದೆ. ಮಿಥುನ ರಾಶಿಯವರು ತಾವು ಅಂದುಕೊಂಡಿದ್ದ ಕನಸಿನ ಜೀವನವನ್ನು ಈ ಸಂದರ್ಭದಲ್ಲಿ ಪ್ರಾರಂಭ ಮಾಡಲಿದ್ದಾರೆ.

ಮಕರ ರಾಶಿ(Capricorn)

ಶುಕ್ರನ ಈ ಚಲನೆ ಎನ್ನುವುದು ಮಕರ ರಾಶಿಯವರ ಉದ್ಯೋಗದ ಸ್ಥಾನದ ಮೇಲೆ ಸಾಕಷ್ಟು ಸಕಾರಾತ್ಮಕ ಪರಿಣಾಮವನ್ನು ಬೀರಲಿದೆ. ತಮ್ಮ ಜೀವನದಲ್ಲಿ ಅವರು ಬಯಸಿರುವಂತಹ ಪ್ರತಿಯೊಂದು ವಸ್ತುಗಳನ್ನು ಹಾಗೂ ಐಷಾರಾಮಿ ಜೀವನವನ್ನು ಮಕರ ರಾಶಿಯವರು ಪಡೆದುಕೊಳ್ಳಲಿದ್ದಾರೆ. ಮಕರ ರಾಶಿಯವರ ಉದ್ಯೋಗದಲ್ಲಿ ಸಂಬಳದಲ್ಲಿ ಕೂಡ ಹೆಚ್ಚಳ ಕಂಡು ಬರಲಿದೆ. ನಿಮ್ಮಲ್ಲಿರುವಂತಹ ಹಣವನ್ನು ಈ ಸಮಯದಲ್ಲಿ ಆರ್ಥಿಕ ಸಲಹೆಗಾರರ ಸಲಹೆಯನ್ನು ಬಳಸಿಕೊಂಡು ದೊಡ್ಡಮಟ್ಟದ ಪ್ರಾಜೆಕ್ಟ್ ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ದೊಡ್ಡ ಮಟ್ಟದ ರಿಟರ್ನ್ ಅನ್ನು ಈ ಸಂದರ್ಭದಲ್ಲಿ ಪಡೆದುಕೊಳ್ಳಬಹುದಾಗಿದೆ. ಜೀವನದಲ್ಲಿ ನೀವು ಪ್ರಗತಿಯ ಪಥದಲ್ಲಿ ಸಾಗುತ್ತೀರಿ.

ತುಲಾ ರಾಶಿ(Libra)

ಉದ್ಯೋಗ ಹಾಗೂ ಉದ್ಯಮ ಎರಡರಲ್ಲಿ ಕೂಡ ತೊಡಗಿಸಿಕೊಂಡಿರುವಂತಹ ತುಲಾ ರಾಶಿಯವರಿಗೆ ಈ ಸಮಯ ಲಾಭ ಹಾಗೂ ತಮ್ಮ ವೃತ್ತಿ ಜೀವನದಲ್ಲಿ ಉನ್ನತ ಹಂತವನ್ನು ಸಾಧಿಸುವುದಕ್ಕೆ ಸೂಕ್ತವಾದ ಸಮಯವಾಗಿದೆ. ಹಣಕಾಸಿನ ವಿಚಾರದಲ್ಲಿ ಕೂಡ ತುಲಾ ರಾಶಿಯವರು ಸಾಕಷ್ಟು ಲಾಭವನ್ನು ಸಂಪಾದನೆ ಮಾಡಲಿದ್ದಾರೆ. ಲಾಭ ಸಿಗುತ್ತದೆ ಎಂದ ಮಾತ್ರಕ್ಕೆ ಮನಸ್ಸಿಗೆ ಬಂದ ಹಾಗೆ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಹೋಗಬೇಡಿ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಯೋಜನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಉದ್ಯೋಗ ಕ್ಷೇತ್ರದಲ್ಲಿ ನೀವು ಮಾಡುತ್ತಿರುವಂತಹ ಒಳ್ಳೆಯ ಕೆಲಸಕ್ಕಾಗಿ ಸಹೋದ್ಯೋಗಿಗಳು ಹಾಗೂ ನಿಮ್ಮ ವರಿಷ್ಠ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆದುಕೊಳ್ಳಲಿದ್ದೀರಿ.

Comments are closed.