BSNL Offers: ಬಿಎಸ್ಎನ್ಎಲ್ ಸಂಸ್ಥೆಯ ಈ ಹೊಸ ಆಫರ್ ನೋಡಿ ಕಂಗಲಾದ ಜಿಯೋ ಕಂಪನಿ; BSNL ಗ್ರಾಹಕರಿಗೆ ಖುಷಿಯೋ ಖುಷಿ!

BSNL Offers: ಸದ್ಯದ ಮಟ್ಟಿಗೆ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಏರ್ಟೆಲ್ ಹಾಗೂ ಜಿಯೋ ಸಂಸ್ಥೆ ಅತ್ಯಂತ ಜನಪ್ರಿಯವಾಗಿರುವಂತಹ ಕಂಪನಿಗಳಾಗಿವೆ ಆದರೆ ಒಂದು ಕಾಲದಲ್ಲಿ ಭಾರತೀಯ ಟೆಲಿಕಾಂ ಇಂಡಸ್ಟ್ರಿಯನ್ನು ಆಳಿದ್ದ ಬಿಎಸ್ಎನ್ಎಲ್ ಈಗ ಮತ್ತೊಮ್ಮೆ ತನ್ನ ಕೆಲವೊಂದು ಜನಪ್ರಿಯ ಯೋಜನೆಗಳ ಕಾರಣದಿಂದಾಗಿ ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ತನ್ನದೇ ಆದಂತಹ ಗ್ರಾಹಕ ಬಳಗವನ್ನು ಮತ್ತೆ ಸಂಪಾದಿಸುವುದಕ್ಕೆ ಬರುತ್ತಿದೆ.

ದೇಶದಾದ್ಯಂತ ಬಿಎಸ್ಎನ್ಎಲ್ ಸಂಸ್ಥೆಯಿಂದ ಉಚಿತ 4G ಸಿಮ್ ವಿತರಣೆ.

ಭಾರತ ದೇಶದ ಮೂಲೆ ಮೂಲೆಗೂ ಕೂಡ ಇಂದಿನ ಯುವಜನತೆಯ ಆಸಕ್ತಿಗೆ ತಕ್ಕನಾಗಿ 4G ಸಿಮ್ ಗಳನ್ನು ಭಾರತ ದೇಶದ ಕೆಲವೊಂದು ವಲಯಗಳಲ್ಲಿ ಈಗಾಗಲೇ ಉಚಿತವಾಗಿ ವಿತರಣೆ ಮಾಡುವಂತಹ ಕೆಲಸವನ್ನು ಬಿಎಸ್ಎನ್ಎಲ್ ಸಂಸ್ಥೆ ಪ್ರಾರಂಭಿಸಿದೆ. ಭಾರತದ ಕೆಲವು ಕಡೆಗಳಲ್ಲಿ ಇಂಟರ್ನೆಟ್ ಸಂಪರ್ಕ ಸರಿಯಾಗಿ ಸಿಗದೇ ಇರುವಂತಹ ಗ್ರಾಹಕರಿಗೂ ಕೂಡ ಈ ಯೋಜನೆಯ ಮೂಲಕ ಆ ಸಮಸ್ಯೆಯನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಹತ್ತಿರದ ಬಿಎಸ್ಎನ್ಎಲ್ ಸೇವಾ ಕೇಂದ್ರಗಳಿಗೆ ಹೋಗಿ ನೀವು ಕೂಡ ಆಧಾರ್ ಕಾರ್ಡ್ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ಪ್ರೂಫ್ ಗ್ರೂಪಿನಲ್ಲಿ ನೀಡುವ ಮೂಲಕ ಸಿಮ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

BSNL -ಡಿಜಿಟಲ್ ಮೋಡ್.

ಈಗಾಗಲೇ ಕಾಗದದ ಅರ್ಜಿಗಳ ಮೂಲಕ ಪಡೆದುಕೊಂಡಿದ್ದ ಬಿಎಸ್ಎನ್ಎಲ್ ಸಿಮ್ ಕಾರ್ಡ್ ಅನ್ನು ಡಿಜಿಟಲ್ ಮೋಡ್ ಗೆ ಪರಿವರ್ತಿಸಬೇಕು ಎನ್ನುವಂತಹ ನಿಯಮವನ್ನು ಕೂಡ ಬಿಎಸ್ಎನ್ಎಲ್ ಸಂಸ್ಥೆ ಈ ಮೂಲಕ ಜಾರಿಗೆ ತಂದಿದೆ. ಸಾಕಷ್ಟು ಕಡೆಗಳಲ್ಲಿ ಇದು ಈಗಾಗಲೇ ಕಾರ್ಯರೂಪಕ್ಕೆ ಬರುವಂತಹ ಕೆಲಸವನ್ನು ಕೂಡ ಪ್ರಾರಂಭಿಸಲಾಗಿದ್ದು ಗ್ರಾಹಕರು ತಮ್ಮ ಬಿಎಸ್ಎನ್ಎಲ್ ಸಿಮ್ ಕಾರ್ಡ್ ಅನ್ನು ಡಿಜಿಟಲ್ ಮೋಡ್ ಗೆ ಪರಿವರ್ತಿಸಿಕೊಂಡಿದ್ದಾರೆ.

ಡಿಜಿಟಲ್ ಮೋಡ್ ಅಗತ್ಯತೆ ಏನು?

ಭದ್ರತಾ ದೃಷ್ಟಿಯಿಂದ ಬಿಎಸ್ಎನ್ಎಲ್ ಸಂಸ್ಥೆ ಈ ರೀತಿಯಲ್ಲಿ ಡಿಜಿಟಲ್ ಮೋಡ್ ಅನ್ನು ಗ್ರಾಹಕರಲ್ಲಿ ಪರಿಚಯಿಸಿದೆ. ಬಿಎಸ್ಎನ್ಎಲ್ ಸೇವ ಕೇಂದ್ರ ಅಥವಾ ರಿಟೇಲರ್ ಬಳಿ ಹೋಗಿ ನಿಮ್ಮ ಗುರುತಿನ ಚೀಟಿಯನ್ನು ನೀಡಿ ಇದರ ಬಗ್ಗೆ ಪರಿಶೀಲನೆ ಮಾಡಿಕೊಳ್ಳಬಹುದು. ಬಿಎಸ್ಎನ್ಎಲ್ ಸಂಸ್ಥೆ ಗ್ರಾಹಕರು ಈ ರೀತಿ ತಮ್ಮ ಸಿಮ್ ಕಾರ್ಡ್ ಅನ್ನು ಡಿಜಿಟಲ್ ಮೋಡ್ ಗೆ ಪರಿವರ್ತನೆ ಮಾಡಿಕೊಳ್ಳುವಂತಹ ಗಡುವನ್ನು ಏಪ್ರಿಲ್ 30ರ ಒಳಗೆ ಮಾಡಿಕೊಳ್ಳಬೇಕು ಎನ್ನುವುದಾಗಿ ನಿಗದಿಪಡಿಸಿದೆ. ಹೀಗಾಗಿ ಒಂದು ವೇಳೆ ನೀವು ಕೂಡ ಬಿಎಸ್ಎನ್ಎಲ್ ಗ್ರಾಹಕರಾಗಿದ್ರೆ ಈ ಮೇಲೆ ಹೇಳಿರುವಂತಹ ಕೆಲಸಗಳನ್ನು ತಪ್ಪದೆ ಮಾಡಿಕೊಳ್ಳಿ. ಎಲ್ಲರಿಗೂ ಹೋದರೆ ಏಪ್ರಿಲ್ 30ರ ನಂತರ ನೀವು ಬಿಎಸ್ಎನ್ಎಲ್ ಸಂಸ್ಥೆ ನೀಡುವಂತಹ ಸೇವೆಗಳನ್ನು ನಿಮ್ಮ ಸಿಮ್ ಮೂಲಕ ಪಡೆದುಕೊಳ್ಳಲು ಸಾಧ್ಯವಾಗಿದೆ ಇರುವಂತಹ ಪರಿಸ್ಥಿತಿಯನ್ನು ತಂದುಕೊಳ್ಳಬಹುದಾಗಿದೆ. ಸರ್ಕಾರಿ ಸ್ವಾಮ್ಯದ ಕಂಪನಿ ಆಗಿರುವಂತಹ ಬಿಎಸ್ಎನ್ಎಲ್ ಕಳೆದ ಸಾಕಷ್ಟು ವರ್ಷಗಳಿಂದ ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ಲೀಡಿಂಗ್ ಸಂಸ್ಥೆಯಾಗಿ ಕಾಣಿಸಿಕೊಳ್ಳುತ್ತಿದೆ.

Comments are closed.