Marriage: ಇದು ಸಾಮೂಹಿಕ ವಿವಾಹವಲ್ಲ, ಒಂದೇ ಕುಟುಂಬದ 17 ಜನರ ಮದುವೆ; ಅಜ್ಜನ ಪ್ಲಾನ್ ಗೆ ಉಘೇ ಉಘೇ ಅನ್ನಿ!

Marriage: ಪ್ರತಿಯೊಬ್ಬರ ಜೀವನದಲ್ಲಿ ಕೂಡ ಎರಡು ಅತ್ಯಂತ ದುಬಾರಿ ಖರ್ಚುಗಳು ಎಂದರೆ ಒಂದು ಮನೆ ಮಾಡೋದು ಹಾಗೂ ಇನ್ನೊಂದು ಮದುವೆ ಮಾಡುವುದು. ಎರಡು ಖರ್ಚುಗಳನ್ನು ಕೂಡ ಅತ್ಯಂತ ಸುಲಭವಾಗಿ ನಿಭಾಯಿಸುವುದಕ್ಕೆ ಸಾಧ್ಯ ಇರುವುದಿಲ್ಲ. ಆದರೆ ಇನ್ನೊಬ್ಬ ತಾತ ಮಾಡಿರೋ ಕೆಲಸ ನೋಡಿ ಊರವರೇ ಬೆರಗಾಗಿ ಬಿಟ್ಟಿದ್ದಾರೆ. ಒಂದು ಮದುವೆ ಮಾಡುವುದಕ್ಕೆ ಕಷ್ಟ ಪಡುವಂತಹ ಈ ಕಾಲದಲ್ಲಿ ಇನ್ನೊಬ್ಬರು ಒಂದೇ ಮನೆಯಲ್ಲಿ ಒಂದೇ ಸಮಯಕ್ಕೆ 17 ಮದುವೆಯನ್ನು ಮಾಡಿ ಮುಗಿಸಿ ಬಿಟ್ಟಿರೋ ಘಟನೆ ಕೇಳಿ ಬಂದಿದೆ. ಹಾಗಿದ್ದರೆ ಈ ಘಟನೆ ಏನು ಎತ್ತ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ಪಡೆದುಕೊಳ್ಳೋಣ ಬನ್ನಿ.

ಒಂದೇ ಮನೆಯಲ್ಲಿ ಒಂದೇ ಸಮಯಕ್ಕೆ 17 ಮದುವೆ!

ಒಂದು ಮದುವೆ ಮಾಡೋದಕ್ಕೆ ಊಟ ವಿಡಿಯೋ ಗ್ರಾಫರ್ ಫೋಟೋಗ್ರಾಫರ್ ಜನರಿಗೆ ಊಟೋಪಚಾರಕ್ಕೆ ಹೀಗೆ ಪ್ರತಿಯೊಂದು ಖರ್ಚುಗಳನ್ನ ನೋಡುವಂತಹ ಈ ಸಮಯದಲ್ಲಿ ಇನ್ನೊಬ್ಬ ರೂಪ ಒಂದೇ ಮನೆಯಲ್ಲಿ ಒಂದೇ ಸಮಯಕ್ಕೆ 17 ಮದುವೆಯನ್ನು ಮಾಡಿ ಮುಗಿಸಿ ಬಿಟ್ಟಿದ್ದಾರೆ. ಅದರಲ್ಲಿ ವಿಶೇಷವಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ರಂತೂ ಮುಗ್ದೆ ಹೋಯಿತು ಒಂದು ಮದುವೆ ಮಾಡುವುದಕ್ಕೂ ಕೂಡ ಸಾಕಷ್ಟು ಪರದಾಡಬೇಕಾದಂತಹ ಪರಿಸ್ಥಿತಿ ಇಂದಿನ ದುಬಾರಿ ಜಗತ್ತಿನಲ್ಲಿದೆ. ಆದರೆ ರಾಜಸ್ಥಾನದ ಮೂಲದಲ್ಲಿ ನಡೆದಿರುವಂತಹ ಈ ಒಂದು ಘಟನೆ ಈಗ ಇಡೀ ಇಂಟರ್ನೆಟ್ ಅನ್ನು ಅಲುಗಾಡಿಸಿ ಬಿಟ್ಟಿದೆ.

ಆ ಗ್ರಾಮದ ಮುಖ್ಯಸ್ಥ ಆಗಿರುವಂತಹ ಸುರ್ಜಾ ರಾಮ್ ಗೋಡರ ಎನ್ನುವಂತ ವ್ಯಕ್ತಿ ಅವಿಭಾಜಿತ ಕುಟುಂಬದಲ್ಲಿ ವಾಸ ಮಾಡುತ್ತಿದ್ದಂತಹ ತನ್ನ ಮೊಮ್ಮಕ್ಕಳು ಮರಿ ಮಕ್ಕಳು ಸೇರಿದಂತೆ ಒಟ್ಟಾರೆ 17 ಮಂದಿಗೆ ಒಂದೇ ಸಮಯದಲ್ಲಿ ಮದುವೆ ಮಾಡುವ ಮೂಲಕ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಎಲ್ಲರಿಗೂ ಬೇರೆ ಬೇರೆ ಸಮಯದಲ್ಲಿ ಮದುವೆ ಮಾಡಿದರೆ ದುಬಾರಿ ಆಗುತ್ತದೆ ಎನ್ನುವ ಕಾರಣಕ್ಕಾಗಿ ಸುರ್ಜಾ ರಾಮ್ ಒಂದೇ ಸಮಯಕ್ಕೆ 17 ಜನರ ಮದುವೆಯನ್ನು ಮಾಡಿ ಮುಗಿಸಿ ಬಿಟ್ಟಿದ್ದಾರೆ.

ಒಂದೇ ಮದುವೆ ಪತ್ರಿಕೆಯಲ್ಲಿ ಎಲ್ಲರ ಮದುವೆಯ ಬಗ್ಗೆ ಮಾಹಿತಿಯನ್ನು ಹಾಕಿ ಏಪ್ರಿಲ್ ಒಂದರಂದು ಐದು ಜನ ಮೊಮ್ಮಕ್ಕಳನ್ನು ಮದುವೆ ಮಾಡಿಸಿದರೆ ಮಾರ್ನೆ ದಿನ 12 ಜನ ಮೊಮ್ಮಕ್ಕಳನ್ನು ಮದುವೆ ಮಾಡಿಸಿ ಒಟ್ಟಾರೆಯಾಗಿ ಎರಡೇ ದಿನದಲ್ಲಿ 17 ಮದುವೆಗಳನ್ನು ಮಾಡಿ ಮುಗಿಸಿದ್ದಾರೆ. ಈ ಮದುವೆಯನ್ನು ನೋಡಿರುವಂತಹ ಜನರು ಒಂದೇ ದಿನದಲ್ಲಿ ಈ ರೀತಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮದುವೆ ಮಾಡಿ ಮುಗಿಸಿರೋದನ್ನ ನಾವು ಎಲ್ಲಿಯೂ ಕೂಡ ನೋಡಿಲ್ಲ ಅನ್ನೋದಾಗಿ ಆಶ್ಚರ್ಯದಿಂದ ಮಾತನಾಡಿದ್ದಾರೆ. ಈ ರೀತಿಯ ಚಿತ್ರ ವಿಚಿತ್ರವಾದ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೇಳಿ ಬರುತ್ತಲೆ ಇರುತ್ತದೆ. ಅದರಲ್ಲೂ ವಿಶೇಷವಾಗಿ ಈ ರೀತಿಯ ಮದುವೆ ಸುದ್ದಿಗಳು ರಾಜಸ್ಥಾನದಲ್ಲಿ ಕೇಳಿ ಬರೋದು ಹೆಚ್ಚು.

Comments are closed.