Crop Insurance: ಬೆಳೆ ವಿಮೆಗಾಗಿ ಅಲ್ದಾಡೋದು ಬಿಟ್ ಬಿಡಿ; ನಿಮ್ ಸರ್ವೇ ನಂಬರ್ ಹಾಕಿ ಮೊಬೈಲ್ ನಲ್ಲಿಯೇ ನಿಮಗೂ ಹಣ ಮಂಜೂರಾಗಿದ್ಯಾ ಚೆಕ್ ಮಾಡಿ!

Crop Insurance: 2023 ನೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದರು ಕೂಡ ಸಾಕಷ್ಟು ನಷ್ಟ ರಾಜ್ಯದ ರೈತರಿಗೆ ಸಂಭವಿಸಿದೆ. ಇದೇ ಕಾರಣಕ್ಕಾಗಿ ಕೆಲವೊಂದು ವಿಮಾ ಕಂಪನಿಗಳು ಹಲವು ಜಿಲ್ಲೆಗಳ ರೈತರಿಗೆ ಅವರ ಖಾತೆಗೆ ನೇರವಾಗಿ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಇದಕ್ಕಾಗಿ ನೀವು ಹೆಚ್ಚಿನ ಪರದಾಟ ಮಾಡಬೇಕಾದ ಅಗತ್ಯ ಇರುವುದಿಲ್ಲ. ಕೇವಲ ನಿಮ್ಮ ಸರ್ವೆ ನಂಬರ್ ಅನ್ನು ಹಾಕುವ ಮೂಲಕ ನಿಮ್ಮ ಹೆಸರಿಗೆ ವಿಮೆ ಬಂದಿದ್ಯೋ ಇಲ್ವೋ ಅನ್ನೋದನ್ನ ತಿಳಿದುಕೊಳ್ಳಬಹುದು. ಕೇವಲ ಮೊಬೈಲ್ ಮೂಲಕವೇ ಸರ್ವೆ ನಂಬರ್ ಅನ್ನು ಹಾಕಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಸರ್ವೆ ನಂಬರ್ ಹಾಕಿ ಚೆಕ್ ಮಾಡುವ ವಿಧಾನ.

ಬೆಳೆ ವಿಮೆಯ ಅಧಿಕೃತ ವೆಬ್ಸೈಟ್ Crop Insurance ಆಗಿರುವಂತಹ ಸಂರಕ್ಷಣೆ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಅನ್ನು ನೋಡಬಹುದಾಗಿದೆ.

  1. ಅಧಿಕೃತ ವೆಬ್ಸೈಟ್ ಗೆ ಕ್ಲಿಪ್ ಮಾಡಿದ ನಂತರ ಅಲ್ಲಿ 2023 ಹಾಗೂ 24ನೇ ಸಾಲಿನ ವರ್ಷವನ್ನು ಆಯ್ಕೆ ಮಾಡಬೇಕು. ನಂತರ ಮುಂಗಾರು ಸಮಯವನ್ನು ಆಯ್ಕೆ ಮಾಡಿ Go ಬಟನ್ ಮೇಲೆ ಕ್ಲಿಕ್ ಮಾಡಬೇಕು. ರೈತರ ಕಾಲ ನಲ್ಲಿ ಕೊನೆಯಲ್ಲಿ ಕಾಣಿಸಿಕೊಳ್ಳುವಂತಹ crop insurance details on survey no ಆಯ್ಕೆ ಮೇಲೆ ನೀವು ಕ್ಲಿಕ್ ಮಾಡ ಬೇಕಾಗಿರುತ್ತದೆ.
  2. ಇದಾದ ನಂತರ ನಿಮ್ಮ ಹೋಬಳಿ ಗ್ರಾಮ ಹಾಗೂ ಸರ್ವೆ ನಂಬರ್ ಗಳಂತಹ ಕೇಳಲಾಗಿರುವ ಮಾಹಿತಿಗಳನ್ನು ನೀಡಿದ ನಂತರ ಸರ್ಚ್ ಬಟನ್ ಅನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಜಮೀನಿನ ಮೇಲೆ ನಿಮಗೆ ಮಾಡಲಾಗಿರುವಂತಹ ವಿಮೆಗೆ ಹಣ ಬಂದಿದ್ಯೋ ಇಲ್ಲವೋ ಅನ್ನೋದರ ಬಗ್ಗೆ ಸ್ಟೇಟಸ್ ಅನ್ನು ಸಂಪೂರ್ಣ ವಿವರವಾಗಿ ತೋರಿಸುತ್ತದೆ.

ಬೆಳೆಯ ಇನ್ಸೂರೆನ್ಸ್ ಅಪ್ಲಿಕೇಶನ್ ನಂಬರ್ ಹಾಕಿ ವಿಮೆಯ ಹಣದ ಮಾಹಿತಿ ಬಗ್ಗೆ ತಿಳಿಯುವ ವಿಧಾನ.

  1. ಇಲ್ಲಿ ಕೂಡ ನೀವು ಕ್ರಾಪ್ ಇನ್ಸೂರೆನ್ಸ್ ಸ್ಟೇಟಸ್ನ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಲ್ಲಿ 2023 ಹಾಗೂ 24 ನೇ ಸಾಲಿನ ಮುಂಗಾರು ಋತುವನ್ನು ಆಯ್ಕೆ ಮಾಡಬೇಕು. ಅದಾದ ನಂತರ Farmers ಕಲಂ ನಲ್ಲಿ ಕಾಣಿಸಿಕೊಳ್ಳುವ ಸ್ಟೇಟಸ್ ಚೆಕ್ ಬಟನ್ ಮೇಲೆ ನೀವು ಕ್ಲಿಕ್ ಮಾಡಬೇಕಾಗಿರುತ್ತದೆ.
  2. ಇಲ್ಲಿ ನಿಮ್ಮ ಬೆಳೆಯ ಹಣ ಜಮಾ ಆಗಿರುವಂತಹ ವಿವರವನ್ನು ತೋರಿಸಲಾಗುತ್ತದೆ. UTR ಡೀಟೇಲ್ಸ್ ಕೂಡ ಇದರಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಇದನ್ನು ನೀವು ಕನ್ಫರ್ಮ್ ಮಾಡಬಹುದಾಗಿದೆ. ಕೆಲವೊಮ್ಮೆ ಇದು ಸ್ವಲ್ಪ ದಿನಗಳ ನಂತರ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

Comments are closed.