Money Tips: ಮನೆಯಲ್ಲಿ ಹಣ ಬರಬೇಕು ಅಂದ್ರೆ ಈ ವಸ್ತುಗಳನ್ನ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಡಿ; ಹಣದ ಹೊಳೆಯೇ ಹರಿಯತ್ತೆ!

Money Tips: ಒಂದು ವೇಳೆ ಮನೆಯಲ್ಲಿ ಯಾವುದೆ ರೀತಿಯ ಸಮಸ್ಯೆಗಳು ಉಂಟಾಗುತ್ತಿದ್ದರೆ ಅಥವಾ ಹಣದ ಸಮಸ್ಯೆಗಳು ಕಂಡು ಬರುತ್ತಿದ್ದರೆ ಅದಕ್ಕೆ ಮನೆಯಲ್ಲಿ ವಾಸ್ತು ದೋಷ ಇದೆ ಎಂಬುದನ್ನು ನೀವು ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿರುತ್ತದೆ. ಹೀಗಾಗಿ ಮನೆಯಲ್ಲಿ ಈ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳುವ ಮೂಲಕ ನೀವು ನಿಮ್ಮ ಮನೆಯಲ್ಲಿ ಇರುವಂತಹ ದಾರಿದ್ರ್ಯ ಹಾಗೂ ನಕರಾತ್ಮಕ ಶಕ್ತಿಗಳ ಹರಿವನ್ನು ದೂರ ಮಾಡಬಹುದಾಗಿದೆ. ಹಾಗಿದ್ರೆ ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಆಮೆ

ವಾಸ್ತು ಶಾಸ್ತ್ರದ ಪ್ರಕಾರ ಇರಿಸುವಂತಹ ಆಮೆಯನ್ನು ನೀವು ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಇಟ್ಟರೆ ಮನೆಯಲ್ಲಿ ಇರುವಂತಹ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಹಾಗೂ ಕೆಟ್ಟ ಕಣ್ಣುಗಳು ಕೂಡ ನಿಮ್ಮನ್ನು ಸೋಕುವುದಿಲ್ಲ. ಮನೆಯಲ್ಲಿ ಸಾಕಷ್ಟು ಸಮೃದ್ಧಿ ಹಾಗೂ ಸಂಪತ್ತು ಕೂಡ ಕಂಡುಬರುತ್ತದೆ.

ಕ್ರಿಸ್ಟಲ್ ಪಿರಮಿಡ್

ಕ್ರಿಸ್ಟಲ್ ಪಿರಮಿಡ್ ಕೂಡ ವಾಸ್ತು ಶಾಸ್ತ್ರದ ಪ್ರಕಾರ ಅತ್ಯಂತ ಪ್ರಮುಖ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಮನೆಯಲ್ಲಿ ಇರುವಂತಹ ವಾಸ್ತುದೋಷವನ್ನು ದೂರ ಮಾಡಿಸಿಕೊಳ್ಳುವುದಕ್ಕೆ ಇದನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇರುವ ಮೂಲಕ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ಕೂಡ ವಾಸ್ತುಶಾಸ್ತ್ರ ಹೇಳುತ್ತದೆ. ಇದರ ಮೂಲಕ ಮನೆಯಲ್ಲಿ ಹಣದ ಹರಿವು ಕೂಡ ಹೆಚ್ಚಾಗಲಿದೆ. ಆದಾಯದ ಬೇರೆ ಬೇರೆ ಮೂಲಗಳು ಸೃಷ್ಟಿಯಾಗಲಿವೆ ಹಾಗೂ ಮನೆಯಲ್ಲಿ ಸಮೃದ್ಧಿ ಕೂಡ ಪ್ರಗತಿಯ ಪಥವನ್ನು ಕಾಣಲಿದೆ.

ಕಮಲದ ಬೀಜದ ಹಾರ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇರುವಂತಹ ವಾಸ್ತುದೋಷವನ್ನು ಹೋಗಲಾಡಿಸಲು ಮನೆಯಲ್ಲಿ ಕಮಲದ ಬೀಜದ ಹಾರವನ್ನು ಕೂಡ ಇಟ್ಟುಕೊಳ್ಳುವುದು ಪರಿಹಾರದಾಯಕ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದರಿಂದಲೂ ಕೂಡ ಮನೆಯ ವಾಸ್ತುದೋಷ ನಿವಾರಣೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಮಾತ್ರವಲ್ಲದೆ ಮನೆಯಲ್ಲಿ ಕುಟುಂಬಸ್ಥರ ನಡುವೆ ಆತ್ಮೀಯತೆ ಹೆಚ್ಚಾಗಲಿದೆ ಹಾಗೂ ಮನೆಯಲ್ಲಿ ಸಾಕಷ್ಟು ಪುಣ್ಯ ಕಾರ್ಯಗಳು ಕೂಡ ನಡೆಯಲಿವೆ.

ತೆಂಗಿನಕಾಯಿ

ಲಕ್ಷ್ಮೀದೇವಿ ವಾಸ ಆಗಿರುವಂತಹ ತೆಂಗಿನಕಾಯಿಯನ್ನು ನೀವು ದೇವರ ವಾಸಸ್ಥಾನದಲ್ಲಿ ಇಟ್ಟು ಪೂಜೆ ಮಾಡಿದರೆ ಅಥವಾ ಸರಿಯಾದ ದಿಕ್ಕಿನಲ್ಲಿ ಇಟ್ಟು ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಮನೆಯಲ್ಲಿರುವಂತಹ ಎಲ್ಲಾ ಕಷ್ಟಗಳು ಹಾಗೂ ದರಿದ್ರಗಳು ದೂರವಾಗುತ್ತವೆ. ಯಾವುದೇ ಕಾರಣಕ್ಕೂ ನೀವು ಇದನ್ನು ಇಟ್ಟ ಮೇಲೆ ನಕಾರಾತ್ಮಕ ಶಕ್ತಿಗಳ ಬಗ್ಗೆ ಚಿಂತೆ ಪಡಬೇಕಾದ ಅಗತ್ಯ ಇರುವುದಿಲ್ಲ. ಮನೆಯಲ್ಲಿ ಶಾಂತಿ ನೆಮ್ಮದಿ ಸುಖ ಧನ ಕನಕಗಳು ಹೆಚ್ಚಾಗಲಿವೆ.

ಈ ಮೇಲೆ ಹೇಳಲಾಗಿರುವಂತಹ ಪ್ರತಿಯೊಂದು ವಸ್ತುಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ನೀವು ಮನೆಯಲ್ಲಿ ಇಡುವುದರ ಮೂಲಕ ಇರುವಂತಹ ಪ್ರತಿಯೊಂದು ವಾಸು ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಹಾಗೂ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಎರಡು ಕೂಡ ಹೆಚ್ಚಾಗುತ್ತದೆ. ತಪ್ಪದೇ ಇವುಗಳನ್ನು ನಿಮ್ಮ ಮನೆಯಲ್ಲಿ ಆಚರಣೆ ಮಾಡಿ.

Comments are closed.