Summer Tips: ತುಂಬಾ ಬಿಸಿ ಅಂತ ಕಾರಿನಲ್ಲಿ ಎಸಿ ಹಾಕ್ಕೊಂಡೇ ಓಡ್ಸೋ ಅಭ್ಯಾಸ ಮಾಡ್ಕೊಂಡಿದಿರಾ? ಹಾಗಾದ್ರೆ ಒಂದು ಗಂಟೆ ಎಸಿ ಹಾಕಿ ಎಷ್ಟು ಪೆಟ್ರೋಲ್ ವೇಸ್ಟ್ ಮಾಡ್ತಿರಾ ತಿಳ್ಕೊಳ್ಳಿ!

Summer Tips: ಈಬಾರಿ ಸೆಕೆ ಯಾವ ರೀತಿಯಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಜನರನ್ನು ಕಾಡುತ್ತಿದೆ ಎನ್ನುವುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ. ಪ್ರತಿಯೊಬ್ಬರು ಕೂಡ ಬೆಂಕಿಯ ಮೇಲೆ ಕುಳಿತವರಂತೆ ಬೆವರುತ್ತಿದ್ದಾರೆ. ಫ್ಯಾನ್ ಗಳಿಂದ ಕೂಲ್ ಆಗಿ ಇರಕ್ಕೂ ಆಗ್ತಿಲ್ಲ. ಎಲ್ಲರೂ ಎಸಿ ಹಾಗೂ ಕೂಲರ್ ಇರಬೇಕು ಅನ್ನೋದಾಗಿಯೇ ಎಸಿ ಹಾಗೂ ಕೂಲರ್ಗಳನ್ನು ಖರೀದಿ ಮಾಡುವುದಕ್ಕೆ ಹೊರಟಿದ್ದಾರೆ. ಆದರೆ ಎಲ್ಲರಿಗೂ ಕೂಡ ಇಂತಹ ದುಬಾರಿ ವಸ್ತುಗಳನ್ನು ಖರೀದಿ ಮಾಡುವಂತಹ ಸಾಮರ್ಥ್ಯ ಇರೋದಿಲ್ಲ ಅನ್ನೋದನ್ನ ಒಪ್ಪಿಕೊಳ್ಳಬೇಕು. ಸಿನಿಮಾ ಹಾಗೂ ಮಾಲ್ಗಳಲ್ಲಿ ಕೂಡ ಏಸಿಯ ಬಳಕೆ ಸಾಮಾನ್ಯಕ್ಕಿಂತ ಹೆಚ್ಚಾಗಿ ಎ ಸಿ ಅನ್ನು ಬಳಕೆ ಮಾಡುತ್ತಿದ್ದಾರೆ.

ಇನ್ನು ದೂರ ಪ್ರಯಾಣ ಮಾಡುವಾಗ ಜನ ಹೊರಗೆ ಹೋಗಿ ಕೂತ್ಕೊಳ್ಳೋದಕ್ಕಿಂತ ತಮ್ಮ ಕಾರಿನಲ್ಲಿರುವಂತಹ ಎಸಿಯಲ್ಲಿ ಕುಳಿತುಕೊಂಡು ಮೈ ತಂಪು ಮಾಡಿಕೊಳ್ಳೋಣ ಎನ್ನುವಂತಹ ಭಾವನೆಯಲ್ಲಿ ಇರುತ್ತಾರೆ. ಆದರೆ ಇದರಿಂದ ಎಷ್ಟು ಪೆಟ್ರೋಲ್ ಖರ್ಚಾಗುತ್ತೆ ಗೊತ್ತಾ? ಗೊತ್ತಿಲ್ಲ ಅಂದ್ರೆ ಈ ಲೇಖನದಲ್ಲಿ ನೀವು ತಿಳಿದುಕೊಳ್ಳುತ್ತೀರಾ.

ಕಾರಿನಲ್ಲಿ ಬಳಕೆ ಮಾಡುವ ಎಸಿಯಿಂದ ಎಷ್ಟು ಪೆಟ್ರೋಲ್ ಖರ್ಚಾಗುತ್ತೆ?

ಕಾರಿನಲ್ಲಿ ನೀವು ತುಂಬಿರುವಂತಹ ಪೆಟ್ರೋಲ್ ಇಂಧನದಿಂದಲೇ ನಿಮ್ಮ ಎಸಿ ಕೂಡ ರನ್ ಆಗುವುದು. ಹೀಗಾಗಿ ಎಷ್ಟು ಸಮಯ ಎಸಿ ಹಾಕುವುದರಿಂದ ಎಷ್ಟು ಪೆಟ್ರೋಲ್ ಖಾಲಿ ಆಗುತ್ತೆ ಅನ್ನೋದನ್ನ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಇದರಲ್ಲಿ ಸಾಕಷ್ಟು ವಿಚಾರಗಳು ಕೂಡ ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಬೇಕಾಗಿರುತ್ತದೆ. ಎಂಜಿನ್ ಗಾತ್ರ ಕಾರಿನ ಕ್ಷಮತೆ ಸಾಕಷ್ಟು ವಿಚಾರಗಳು ಇಲ್ಲಿ ಗಣನೆಗೆ ಬರುತ್ತವೆ.

ಮಾಡಿರುವಂತಹ ರಿಸರ್ಚ್ ಗಳ ಪ್ರಕಾರ 1 ಗಂಟೆ ನೀವು ನಿಮ್ಮ ಕಾರಿನಲ್ಲಿ ಎಸಿ ಬಳಸಿಕೊಂಡರೆ 1.2 ಲೀಟರ್ ಪೆಟ್ರೋಲ್ ಖಾಲಿಯಾಗುತ್ತೆ. ಆಟೋಮೊಬೈಲ್ ಇಂಡಸ್ಟ್ರಿಯ ಎಕ್ಸ್ಪರ್ಟ್ ಗಳು ಹೇಳುವ ಪ್ರಕಾರ ಇದರಿಂದಾಗಿ ನಿಮ್ಮ ಕಾರಿನ ಮೈಲೇಜ್ ಐದರಿಂದ ಹತ್ತು ಪ್ರತಿಶತ ಕಡಿಮೆ ಆಗುತ್ತದೆ. ಎಸಿ ಕಂಪ್ರೆಸರ್ ಚಲಾವಣೆ ಮಾಡುವುದಕ್ಕೆ ಸಾಕಷ್ಟು ಪೆಟ್ರೋಲ್ ಖಾಲಿಯಾಗುತ್ತದೆ ಹೀಗಾಗಿ ನೀವು ಕಾರು ಓಡಿಸುತ್ತಿರಬೇಕಾದರೆ ಎಸಿಯನ್ನು ಚಲಾವಣೆ ಮಾಡಿದರೆ 20 ಪ್ರತಿಶತ ಮೈಲೇಜ್ ಕಡಿಮೆಯಾಗುತ್ತದೆ. ಹೀಗಾಗಿ ಕಾರಿನ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ನೀವು ಕಾರನ್ನು ಓಡಿಸುವ ಸಂದರ್ಭದಲ್ಲಿ ಕೇವಲ ಅಗತ್ಯ ಇದ್ದಾಗ ಮಾತ್ರ ಎಸಿ ಆನ್ ಮಾಡಿ ಹಾಗೂ ಉಳಿದ ಸಮಯದಲ್ಲಿ ಕಿಟಕಿಯಿಂದ ಬರುವಂತಹ ತಂಪು ಗಾಳಿಯನ್ನು ಬಳಸಿಕೊಳ್ಳಿ. ಇದರಿಂದಾಗಿ ನಿಮ್ಮ ಕಾರಿನ ಆರೋಗ್ಯ ಇನ್ನಷ್ಟು ಬಾಳಿಕೆ ಬರುತ್ತದೆ. ಎಸಿಯನ್ನು ಬಳಸಿಕೊಳ್ಳುವಂತಹ ಕಾರಿನ ಚಾಲಕರು ಈ ವಿಚಾರವನ್ನು ತಿಳಿದುಕೊಂಡು ಎಸಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

Comments are closed.