HSRP: ಗುಡ್ ನ್ಯೂಸ್, ಇಂಥವರು HSRP ನಂಬರ್ ಪ್ಲೇಟ್ ಅನ್ನು ಬುಕ್ ಮಾಡುವ ಅಗತ್ಯವೇ ಇಲ್ಲ! ಸರ್ಕಾರದ ಹೊಸ ಆದೇಶ!

HSRP: HSRP ನಂಬರ್ ಪ್ಲೇಟ್ ಅನ್ನು ಈಗಾಗಲೇ ಪ್ರತಿಯೊಬ್ರು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಲೇಬೇಕು ಇಲ್ಲವಾದಲ್ಲಿ ಅವರಿಗೆ ದೊಡ್ಡ ಪ್ರಮಾಣದಲ್ಲಿ ಫೈನ್ ಹಾಗೂ ಬೇರೆ ರೀತಿಯ ಕಾನೂನಾತ್ಮಕ ಶಿಕ್ಷೆಗಳನ್ನು ಎದುರಿಸುವಂತಹ ಸಾಧ್ಯತೆ ಕೂಡ ಇದೆ ಎನ್ನುವುದಾಗಿ ಸಾರಿಗೆ ಸಚಿವಾಲಯದಿಂದ ಸುದ್ದಿ ಈಗಾಗಲೇ ರಾಜ್ಯಾದ್ಯಂತ ಹರಡಿಕೊಂಡಿದೆ. ಆದರೆ ಈಗ ನಂಬರ್ ಪ್ಲೇಟ್ ವಿಚಾರದಲ್ಲಿ ಒಂದು ಹೊಸ ಆದೇಶ ಹೊರಬಂದಿದ್ದು ಅದನ್ನು ಕೇಳಿದರೆ ನೀವು ಕೂಡ ಆಶ್ಚರ್ಯಪಡುತ್ತೀರಾ.

ಇವರು HSRP ನಂಬರ್ ಪ್ಲೇಟ್ ಹಾಕಿಸಬೇಕಾಗಿಲ್ಲ!

2019ಕ್ಕಿಂತ ಮುಂಚೆ ಖರೀದಿ ಮಾಡಿರುವಂತಹ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಹಾಕಿಸಲೇಬೇಕು ಎನ್ನುವಂತಹ ನಿಯಮ ಸಾರಿಗೆ ಇಲಾಖೆಯಿಂದ ಹೊರಬಂದಿತ್ತು. ಆದರೆ ಇಂಥವರಿಗೆ ಈಗ HSRP ನಂಬರ್ ಪ್ಲೇಟ್ ಅನ್ನು ಈ ಸರ್ವರ್ ಸಮಸ್ಯೆ ನಡುವೆ ಕೂಡ ರಿಜಿಸ್ಟರ್ ಮಾಡಿಕೊಂಡು ಕಾದು ಅವುಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವಂತಹ ಪ್ರಮೇಯ ಇಲ್ಲ.

ಹೌದು ನಾವ್ ಮಾತಾಡ್ತಿರೋದು ಹೊಸದಾಗಿ ವಾಹನವನ್ನು ಖರೀದಿ ಮಾಡಿರುವಂತಹ ವ್ಯಕ್ತಿಗಳು ಮತ್ತೆ ಅಧಿಕೃತ ವೆಬ್ ಸೈಟಿಗೆ ಹೋಗಿ HSRP ನಂಬರ್ ಪ್ಲೇಟ್ ರಿಜಿಸ್ಟರ್ ಮಾಡಿಕೊಂಡು ಅದಕ್ಕಾಗಿ ಕಾಯಬೇಕಾದ ಅಗತ್ಯವಿಲ್ಲ. ಹೊಸದಾಗಿ ವಾಹನವನ್ನು ಖರೀದಿ ಮಾಡುವಂತಹ ಗ್ರಾಹಕರಿಗೆ ಆ ಶೋರೂಮ್ ನವರೇ HSRP ನಂಬರ್ ಪ್ಲೇಟ್ ಅನ್ನು ಹೊಸದಾಗಿ ವಾಹನ ನೀಡುವ ಸಂದರ್ಭದಲ್ಲಿಯೇ ಅಳವಡಿಸಿಕೊಡಬೇಕು ಎಂಬುದಾಗಿ ನಿಯಮ ಜಾರಿಯಾಗಿದೆ. ಹೀಗಾಗಿ ಹೊಸದಾಗಿ ವಾಹನವನ್ನು ಖರೀದಿ ಮಾಡುವವರು ಈ ಬಗ್ಗೆ ಚಿಂತೆ ಮಾಡಬೇಕಾದ ಅಗತ್ಯ ಇರುವುದಿಲ್ಲ.

HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ದಿನಾಂಕ ವಿಸ್ತರಣೆ!

HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಬೇಕು ಎನ್ನುವಂತಹ ದಿನಾಂಕವನ್ನು ಫೆಬ್ರವರಿ 17ಕ್ಕೆ ನಿಗದಿಪಡಿಸಲಾಗಿತ್ತು ಎನ್ನುವುದು ನಿಮಗೆಲ್ಲರಿಗೂ ತಿಳಿದಿದೆ. ಆದರೆ ಈಗಲೂ ಕೂಡ ಜನರು ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವುದು ಸಾಕಷ್ಟು ಬಾಕಿ ಇದ್ದು ಇದೇ ಕಾರಣಕ್ಕಾಗಿ ಸರ್ಕಾರ ಈ ಕೊನೆ ದಿನಾಂಕವನ್ನ ಮೇ 31ಕ್ಕೆ ವಿಸ್ತರಣೆ ಮಾಡಿದೆ. ಮೇ 31ರ ಒಳಗೆ ಪ್ರತಿಯೊಬ್ಬರು ಕೂಡ ಅಂದರೆ 2019ಕ್ಕಿಂತ ಮುಂಚೆ ವಾಹನವನ್ನು ಖರೀದಿ ಮಾಡಿರುವವರು ಅಧಿಕೃತ ವೆಬ್ ಸೈಟ್ ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಮೂಲಕ ನಂತರ HSRP ನಂಬರ್ ಪ್ಲೇಟ್ ಅನ್ನು ತಾವು ವಾಹನವನ್ನು ಖರೀದಿ ಮಾಡಿರುವ ಶೋರೂಮ್ ಮೂಲಕ ಪಡೆದುಕೊಂಡು ಅಳವಡಿಸಿಕೊಳ್ಳಬೇಕು.

ಮೇ 31ರ ಒಳಗೆ ನೀವು HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಹೋದಲ್ಲಿ ನೀವು ಟ್ರಾಫಿಕ್ ಪೊಲೀಸರ ಬಳಿ ಸಿಕ್ಕಿಹಾಕಿಕೊಂಡರೆ ದೊಡ್ಡ ಮಟ್ಟದಲ್ಲಿ ಫೈನ್ ಕಟ್ಟಬೇಕಾಗುತ್ತೆ ಹಾಗೂ ನಿಮ್ಮ ಲೈಸೆನ್ಸ್ ರದ್ದಾಗುವ ಸಾಧ್ಯತೆ ಕೂಡ ಇರುತ್ತದೆ. ಒಂದು ವೇಳೆ ನೀವು ರಿಜಿಸ್ಟರ್ ಮಾಡಿಕೊಂಡಿದ್ರು ಕೂಡ ನಂಬರ್ ಪ್ಲೇಟ್ ಬಂದಿಲ್ಲ ಅಂದ್ರೆ ಅದರ ರಸೀದಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಒಂದು ವೇಳೆ ಟ್ರಾಫಿಕ್ ಪೊಲೀಸರು ನಿಮ್ಮನ್ನು ನಿಲ್ಲಿಸಿದರೆ ಇದನ್ನು ತೋರಿಸಿ ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ.

Comments are closed.