Home Loan: ಹೋಂ ಲೋನ್ ಮಾಡಿ ಮನೆ ಕಟ್ಬೇಕಾ? ಹಾಗಾದ್ರೆ ಮೊದ್ಲು ಯಾವ ಬ್ಯಾಂಕ್ ಬೆಸ್ಟ್ ನೋಡಿ!

Home Loan: ಪ್ರತಿಯೊಬ್ಬರು ಕೂಡ ತಮ್ಮದೇ ಆದಂತಹ ಸ್ವಂತವಾದ ಮನೆಯನ್ನು ಹೊಂದಿರಬೇಕು ಅನ್ನುವ ಆಸೆ ಹೊಂದಿರುತ್ತಾರೆ. ಇನ್ನು ಹೋಂ ಲೋನ್ ಮೇಲೆ ಎಷ್ಟು ಬಡ್ಡಿ ಹಾಗೂ ಇಎಂಐ ಕಟ್ಟಬೇಕಾಗುತ್ತೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಆದರೆ ಇವತ್ತು ಹೇಳಲು ಹೊರಟಿರೋ ಈ ಮಾಹಿತಿ ಖಂಡಿತವಾಗಿ ಹೋಮ್ ಲೋನ್ ಪಡೆದು ಮನೆ ಕಟ್ಟಿಸಲು ಯೋಜನೆ ಹಾಕುತ್ತಿರುವವರಿಗೆ ಶುಭ ಸುದ್ದಿಯಾಗಿದೆ.

ಯಾಕೆಂದರೆ ಈಗ ನಾವು ಇವತ್ತಿನ ಈ ಲೇಖನದ ಮೂಲಕ ಹೇಳಲು ಹೊರಟಿರುವಂತಹ ಬ್ಯಾಂಕುಗಳು ನಿಮಗೆ ಕಡಿಮೆ ಬಡ್ಡಿ ಹಾಗೂ ಇಎಂಐ ನಲ್ಲಿ ಹೋಂ ಲೋನ್ ಗಳನ್ನು ನೀಡುತ್ತವೆ. ಒಂದು ವೇಳೆ ನೀವು ಕೂಡ ಮುಂದಿನ ಭವಿಷ್ಯದಲ್ಲಿ ಹೋಂ ಲೋನ್ ಪಡೆದು ಮನೆಯನ್ನು ಕಟ್ಟಿಸಬೇಕು ಎನ್ನುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ನಿಮಗೆ ಇವತ್ತಿನ ಈ ಲೇಖನದ ಮೂಲಕ ಹೇಳಲು ಹೊರಟಿರುವ ಮಾಹಿತಿಗಳು ಸಾಕಷ್ಟು ಉಪಯುಕ್ತಕಾರಿಯಾಗಲಿವೆ.

ಹೋಂ ಲೋನ್ ಗಳಿಗೆ ಈ ಬ್ಯಾಂಕುಗಳು ಬೆಸ್ಟ್

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ:- ಗ್ರಹ ಸಾಲಗಳನ್ನು ಪಡೆದುಕೊಳ್ಳಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಮಾಡಿಸಿದ ಬ್ಯಾಂಕ್ ಆಗಿದೆ. ಹೋಂ ಲೋನ್ ಮೇಲೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿಧಿಸುವಂತಹ ಬಡ್ಡಿದರ 8.35% ಆಗಿದೆ. 20 ವರ್ಷಗಳ ಅವಧಿಗೆ ನೀವು 75 ಲಕ್ಷ ರೂಪಾಯಿಗಳ ವರೆಗೆ ಹೋಂ ಲೋನ್ ಪಡೆದುಕೊಳ್ಳಬಹುದಾಗಿದೆ. ಈ ಸಾಲವನ್ನು ಪಡೆದುಕೊಂಡರೆ ನೀವು ಪ್ರತಿ ತಿಂಗಳೊಳಗೆ 63900ಗಳ ಕಂತನ್ನು ಕಟ್ಟಬೇಕಾಗುತ್ತದೆ.

ಕೆನರಾ ಬ್ಯಾಂಕ್:- ಭಾರತ ದೇಶದ ಅತ್ಯಂತ ಜನಪ್ರಿಯ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಕೆನರಾ ಬ್ಯಾಂಕ್ ಕೂಡ ಹೋಂ ಲೋನ್ ಪಡೆದುಕೊಳ್ಳುವುದಕ್ಕೆ ಉತ್ತಮ ಬ್ಯಾಂಕುಗಳಲ್ಲಿ ಒಂದಾಗಿದೆ. ಇಲ್ಲಿ ಹೋಂ ಲೋನ್ ಮೇಲೆ 8.5 ಪ್ರತಿಶತ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಇಲ್ಲಿ ಕೂಡ 20 ವರ್ಷಗಳ ಅವಧಿಗೆ 75 ಲಕ್ಷ ರೂಪಾಯಿಗಳ ಸಾಲವನ್ನು ಹೋಂ ಲೋನ್ ರೂಪದಲ್ಲಿ ನೀಡಲಾಗುತ್ತದೆ. ಪ್ರತಿ ತಿಂಗಳಿಗೆ 64,650 ರೂಪಾಯಿಗಳ ಕಂತನ್ನು ಕಟ್ಟಬೇಕಾಗಿರುತ್ತದೆ.

ಕೋಟಕ್ ಮಹೀಂದ್ರಾ ಬ್ಯಾಂಕ್:- 8.7 ಪ್ರತಿಶತ ಬಡ್ಡಿ ದರದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕಿನಲ್ಲಿ ಹೋಂ ಲೋನ್ ಸಾಲವನ್ನು ನೀಡಲಾಗುತ್ತದೆ. ಇಲ್ಲಿ ನೀವು ಕೂಡ 20 ವರ್ಷಗಳ ಅವಧಿಗೆ 75 ಲಕ್ಷ ರೂಪಾಯಿಗಳ ಹೋಂ ಲೋನ್ ಪಡೆದುಕೊಳ್ಳಬಹುದಾಗಿದ್ದು ಪ್ರತಿ ತಿಂಗಳಿಗೆ 64,550ಗಳ ಕಂತಿನ ಹಣವನ್ನು ಕಟ್ಟಬೇಕಾಗುತ್ತದೆ.

ಎಲ್ಲಕ್ಕಿಂತ ಗುಡ್ ನ್ಯೂಸ್ ಅಂದ್ರೆ ಈ ಬಾರಿಯೂ ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸತತ 7ನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಸ್ಥಿರವಾಗಿ ಇಟ್ಟಿದೆ. ಈ ಮೂಲಕ ಲೋನ್ ಬಡ್ಡಿ ದರದಲ್ಲಿ ಕೂಡ ಯಾವುದೇ ರೀತಿಯ ಏರಿಕೆ ಕಂಡು ಬಂದಿಲ್ಲ. ರೆಪೋ ದರವನ್ನು ಏರಿಕೆ ಮಾಡಿದರೆ ಮಾತ್ರ ಹೋಂ ಲೋನ್ ಬಡ್ಡಿ ದರದಲ್ಲಿ ಹಾಗೂ ಕಂತುಗಳಲ್ಲಿ ಏರಿಕೆ ಕಂಡು ಬರುತ್ತದೆ. ಇದು ಹೋಂ ಲೋನ್ ಪಡೆದುಕೊಳ್ಳುವಂತಹ ಹಾಗೂ ಪಡೆದುಕೊಂಡಿರುವಂತಹ ಗ್ರಾಹಕರಿಗೆ ಗುಡ್ ನ್ಯೂಸ್ ಆಗಿದೆ.

Comments are closed.