Tirumala Darshanam: ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ; ಟಿಕೆಟ್ ಇಲ್ಲದೆ ಒಂದೇ ಗಂಟೆಯಲ್ಲಿ ತಿರುಪತಿ ದರ್ಶನ ಮಾಡಿ; ಹೇಗೇ ಗೊತ್ತಾ?

Tirumala Darshanam: ತಿರುಪತಿ ತಿಮ್ಮಪ್ಪನ ದರ್ಶನ ಯಾರು ತಾನೆ ಮಾಡೋದಕ್ಕೆ ಇಷ್ಟಪಡುವುದಿಲ್ಲ ಹೇಳಿ. ಒಂದು ವೇಳೆ ನೀವು ಕೂಡ ಈ ಬೇಸಿಗೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನವನ್ನು ಯಾವುದೇ ಟಿಕೆಟ್ ಇಲ್ಲದೆ ಒಂದು ಗಂಟೆಯ ಒಳಗೆ ಯಾವ ರೀತಿಯಲ್ಲಿ ಮಾಡಬಹುದು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ಮಾಹಿತಿಯನ್ನು ನೀಡುವುದಕ್ಕೆ ಹೊರಟಿದ್ದೇವೆ.

ಟಿಕೆಟ್ ಇಲ್ಲದೆ ಒಂದು ಗಂಟೆ ಒಳಗೆ ತಿಮ್ಮಪ್ಪನ ದರ್ಶನ!

ವೈಕುಂಠಾಧಿಪತಿ ತಿರುಪತಿ ತಿಮ್ಮಪ್ಪನ ದರ್ಶನವನ್ನು ಮಾಡೋದಕ್ಕೆ ತಿರುಪತಿಯಲ್ಲಿ 3 ರಿಂದ 4 ಗಂಟೆಗಳ ಕಾಲ ಸರದಿ ಸಾಲಿನಲ್ಲಿ ಕಾಯಬೇಕಾಗಿರುತ್ತದೆ ಅನ್ನೋದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಅದೇ ಜನ ಹೆಚ್ಚಾಗಿರುವ ಸಂದರ್ಭದಲ್ಲಿ ಇದು ಒಂದರಿಂದ ಎರಡು ದಿನಗಳ ಕಾಲ ಸಮಯವನ್ನು ಕೂಡ ತೆಗೆದುಕೊಳ್ಳಬಹುದಾಗಿದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವಂತಹ ಭಕ್ತಾಭಿಮಾನಿಗಳಿಗೆ ಅಲ್ಲಿನ ದೇವಸ್ಥಾನದ ಆಡಳಿತ ಮಂಡಳಿ ಆಗಿರುವಂತಹ ಟಿ ಟಿ ಡಿ ಪ್ರತಿಯೊಂದು ಅವಶ್ಯ ಸೌಕರ್ಯಗಳು ಸರಿಯಾಗಿದೆಯೋ ಇಲ್ಲವೋ ಎನ್ನುವುದನ್ನು ಕೂಡ ಗಮನಿಸುತ್ತದೆ. ಕೇವಲ ಅವರ ಉಳಿದುಕೊಳ್ಳುವಿಕೆಯ ವಿಚಾರದಲ್ಲಿ ಮಾತ್ರವಲ್ಲದೆ ತಿಂಗಳಿಗೊಮ್ಮೆ ವಿಶೇಷ ಪ್ರವೇಶದರ್ಶನವನ್ನು ಕೂಡ ಟಿಟಿಡಿ ದೇವರ ಭಕ್ತ ಅಭಿಮಾನಿಗಳಿಗೆ ನೀಡುವ ಕೆಲಸವನ್ನು ಮಾಡುತ್ತದೆ.

ಈ ಮೂಲಕ 20,000ಕ್ಕೂ ಹೆಚ್ಚಿನ ಭಕ್ತಾಭಿಮಾನಿಗಳು ಯಾವುದೇ ಟಿಕೆಟ್ ಇಲ್ಲದೆ ಈ ರೀತಿಯಲ್ಲಿ ಶ್ರೀವಾರಿಯಾ ದರ್ಶನವನ್ನು ಮಾಡುತ್ತಾರೆ. SSD ಟೈಮ್ ಸ್ಲಾಟ್ ಟಿಕೆಟ್ ಗಳನ್ನು ಟಿಟಿಡಿ ಭಕ್ತ ಅಭಿಮಾನಿಗಳಿಗೆ ಸಿಗುವಂತೆ ಮಾಡುತ್ತದೆ. ಟಿಟಿಡಿ ಅಲಿ ಪಿರಿ ಮೆಟ್ಟಿಲುಗಳಲ್ಲಿ 10 ಸಾವಿರ ಟಿಕೆಟ್, ಶ್ರೀವಾರಿ ಮೆಟ್ಟಿಲುಗಳಲ್ಲಿ 5000 ಟಿಕೆಟ್ಗಳನ್ನು ನಿಗದಿಪಡಿಸುತ್ತದೆ. ಒಟ್ಟಾರಿಯಾಗಿ 30,000 ಟಿಕೆಟ್ಗಳನ್ನು ಇದಕ್ಕಾಗಿ ಪ್ರತಿದಿನ ಇರಿಸುತ್ತದೆ. ಇದಕ್ಕಾಗಿ ಟಿಟಿಡಿ ಲಕ್ಕಿ ಡಿಪ್ ಟಿಕೆಟ್ ಗಳನ್ನು ನಿಗದಿಪಡಿಸಿದೆ. ಈ ಲಕ್ಕಿಡಿಪ್ ಕೌಂಟರ್ ಗಳನ್ನು ನೀವು CRO ಕಚೇರಿಯಲ್ಲಿ ಕಾಣಬಹುದಾಗಿದೆ. ಶ್ರೀವಾರಿ ಕಲ್ಯಾಣೋತ್ಸವ ಸೇವೆಗಾಗಿ 150 ರಿಂದ 180 ಟಿಕೆಟ್ ಗಳನ್ನು ಮಾತ್ರ ನಿಗದಿಪಡಿಸಲಾಗಿದ್ದು ಈ ಟಿಕೆಟ್ಗಳನ್ನು ಮನೆಯವರಿಗೆ ಮಾತ್ರ ನೀಡಲಾಗುತ್ತದೆ. ಒಂದು ವೇಳೆ ಈ ಟಿಕೆಟ್ ಅನ್ನು ಗೆದ್ದರೆ ಒಂದು ಗಂಟೆ ಒಳಗೆ ದರ್ಶನ ಪೂರೈಕೆ ಆಗುತ್ತದೆ.

ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಳು ಮುಗಿದಿರುವ ಕಾರಣದಿಂದಾಗಿ ಸಾಮಾನ್ಯ ಭಕ್ತರಿಗಿಂತ ಹೆಚ್ಚಾಗಿ ಅವರ ಜೊತೆಗೆ ವಿದ್ಯಾರ್ಥಿಗಳು ಕೂಡ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಆಗಮಿಸುತ್ತಿರುವುದರಿಂದ ಭಕ್ತರ ನಡುವೆ ಸರತಿ ಸಾಲಿನಲ್ಲಿ ನೂಕು ನುಗ್ಗಲಾಟ ಕೂಡ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. ಒಂದು ವೇಳೆ ನೀವು ಕೂಡ ಹೋಗುವವರಿದ್ರೆ ಈ ಮೇಲೆ ಹೇಳಿರುವಂತಹ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು. ತಿರುಪತಿ ತಿಮ್ಮಪ್ಪನ ದರ್ಶನವನ್ನು ಮಾಡಬೇಕು ಎನ್ನುವಂತಹ ನಿಮ್ಮ ಕನಸು ಕೂಡ ಈ ಮೂಲಕ ಅತ್ಯಂತ ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ಪೂರೈಕೆ ಆಗಲಿದೆ.

Comments are closed.