Sonu Srinivas Gowda: “ಇಷ್ಟು ಚಿಕ್ ವಯಸ್ಸಿಗೆ ಜೈಲಿಗೆ ಹೋಗಿ ಏನೆಲ್ಲಾ ಅನುಭವಿಸಿದೆ, ಎಂಥೆಂತವ್ರನ್ನ ನೋಡ್ದೆ” ಸೋನು ಅಸಲಿ ಜೈಲಿನ್ ಕಥೆ ಇಲ್ಲಿದೆ!

Sonu Srinivas Gowda: ಟಿಕ್ ಟಾಕ್ ಮೂಲಕ ಜನಪ್ರಿಯತೆಯನ್ನು ಸಂಪಾದಿಸಿಕೊಂಡು ನಂತರ instagram ನಲ್ಲಿ reels ಗಳನ್ನು ಪೋಸ್ಟ್ ಮಾಡಿಕೊಂಡು ಜನಪ್ರಿಯತೆಯನ್ನು ಸಂಪಾದಿಸಿದ್ದ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಸೋನು ಶ್ರೀನಿವಾಸ್ ಗೌಡ ಸಾಕಷ್ಟು ವಿಚಾರಗಳಿಗಾಗಿ ಟ್ರೋಲ್ ಆಗಿದ್ದಾರೆ ಅನ್ನೋದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ ಇತ್ತೀಚಿಗಷ್ಟೇ ಅವರು ಜೈಲಿನ ಬಾಗಿಲನ್ನು ಕೂಡ ತಟ್ಟಿ ಬಂದಿರುವುದು ಸಾಕಷ್ಟು ಜನರಿಗೆ ತಿಳಿದಿಲ್ಲ ಹಾಗೂ ಇನ್ನೂ ಸಾಕಷ್ಟು ಜನರಿಗೆ ಇದರ ಬಗ್ಗೆ ಅವರು ಹಂಚಿಕೊಂಡಿರುವಂತಹ ಅಭಿಪ್ರಾಯಗಳ ಬಗ್ಗೆ ತಿಳಿದಿಲ್ಲ. ಬನ್ನಿ ಎಲ್ಲ ಮಾಹಿತಿಗಳನ್ನು ಇವತ್ತು ಒಂದೊಂದಾಗಿ ನೋಡುವ.

ಸೋನು ಶ್ರೀನಿವಾಸ ಗೌಡ ಅವರ ಜೈಲಿನ ಅನುಭವ

23 ವರ್ಷದ ಹುಡುಗಿಯಾಗಿರುವಂತಹ ಸೋನು ಶ್ರೀನಿವಾಸ ಗೌಡ ಕೆಲವು ಸಮಯಗಳ ಹಿಂದೆ ಎಷ್ಟು ವರ್ಷದ ಅನಾಥ ಹುಡುಗಿಯನ್ನು ದತ್ತು ತೆಗೆದುಕೊಂಡಿದ್ದರು. ಮಾಡಿದ್ದು ಒಳ್ಳೆ ಕೆಲಸವೆ ಆಗಿದ್ದರೂ ಕೂಡ ಇದು ಅಕ್ರಮವಾಗಿ ದತ್ತು ತೆಗೆದುಕೊಂಡಂತಹ ಪ್ರಕ್ರಿಯೆ ಆಗಿತ್ತು ಅನ್ನುವ ಕಾರಣಕ್ಕಾಗಿ ಸೋನು ಶ್ರೀನಿವಾಸ ಗೌಡ ಅವರನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಕಾರ್ಯಕ್ರಮದಲ್ಲಿ 15 ದಿನಗಳ ನ್ಯಾಯಾಂಗ ಬಂಧನವನ್ನು ಅನುಭವಿಸಿದ ನಂತರ ಏಪ್ರಿಲ್ 6ನೇ ತಾರೀಕಿನಂದು ಈಗ ಸೋನು ಶ್ರೀನಿವಾಸ ಗೌಡ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

ಜೈಲಿನಿಂದ ಸೋನು ಶ್ರೀನಿವಾಸ್ ಗೌಡ ಹೊರಗೆ ಬರುತ್ತಿದ್ದಂತೆ ಜೈಲಿನ ಅನುಭವ ಹೇಗಿತ್ತು ಅನ್ನೋದಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೇಳೋದಕ್ಕೆ ಪ್ರಾರಂಭ ಮಾಡಿದ್ರು. ಅದಕ್ಕೆ ಇತ್ತೀಚಿಗಷ್ಟೇ ಸೋನು ಶ್ರೀನಿವಾಸ ಗೌಡ ಅವರು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಇದರ ಬಗ್ಗೆ ಅನುಭವವನ್ನು ಹಂಚಿಕೊಂಡಿದ್ದಾರೆ. ಮೊದಲಿಗೆ ಲೀಗಲ್ ವಿಚಾರಣೆ ಮಾಡಿದಾಗ ನನಗೆ ಏನು ಅನ್ನಿಸಲಿಲ್ಲ ಆದರೆ ಯಾವಾಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ರೋ ಆಗ 23 24 ವರ್ಷಕ್ಕೆ ನನಗೆ ಇದು ಬೇಕಿತ್ತಾ ಅಂತ ಅನಿಸಿತು ಅನ್ನೋದಾಗಿ ಸೋನು ಶ್ರೀನಿವಾಸ ಗೌಡ ಹೇಳ್ಕೊಂಡಿದ್ದಾರೆ.

ಇಲ್ಲಿದ್ದಾಗ ನನ್ನ ಬಳಿ ಫೋನ್ ಎತ್ತು ಬೇಕಾದಾಗ ಯಾರು ಬಳಿ ಬೇಕಾದ್ರೂ ಮಾತನಾಡಬಹುದಿತ್ತು ಆದರೆ ಜೈಲಿಗೆ ಹೋದ ನಂತರ ಮೂರು ದಿನಕ್ಕೆ ಒಮ್ಮೆ ಮಾತ್ರ ಮೂರರಿಂದ ನಾಲ್ಕು ನಿಮಿಷ ಫೋನ್ ಮಾತನಾಡಲು ನೀಡುತ್ತಿದ್ದರು. ಅಲ್ಲಿ ಸಾಕಷ್ಟು ದೊಡ್ಡ ಮಟ್ಟದ ಅಪರಾಧಗಳನ್ನು ಮಾಡಿ ಹೋದವರಿದ್ದರು. ಅವರ ನಡುವೆ ನಾನು ಇದ್ದಿದ್ದು ನಿಜಕ್ಕೂ ಕೂಡ ಬೇಸರ ತಂದಿತ್ತು ಅನ್ನುವುದಾಗಿ ಸೋನು ಶ್ರೀನಿವಾಸ ಗೌಡ ಹೇಳಿದ್ದಾರೆ.

ವಿಶೇಷ ಧನ್ಯವಾದ ತಿಳಿಸಿದ ಸೋನು!

ಇಂತಹ ಕಷ್ಟದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತಂತಹ ಪ್ರತಿಯೊಂದು ಟ್ರೋಲ್ ಪೇಜ್ ಗಳಿಗೂ ಕೂಡ ಧನ್ಯವಾದ ಗಳು ಎಂದು ಸೋಮ ಶ್ರೀನಿವಾಸ ಗೌಡ ಟ್ರೊಲ್ ಪೇಜ್ ಗಳಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಕುಟುಂಬ ಹಾಗೂ ನಿಮ್ಮೆಲ್ಲರ ಬೆಂಬಲದಿಂದ ನಾನು ಬೇಗ ಜೈಲಿನಿಂದ ಮನೆಗೆ ಬಂದಿದ್ದೇನೆ ಇದಕ್ಕಾಗಿ ಥ್ಯಾಂಕ್ಯು ಅಂತ ಸೋಯಾ ಶ್ರೀನಿವಾಸ್ ಗೌಡ ಹೇಳಿದ್ದು ಇಷ್ಟೊಂದು ಚಿಕ್ಕ ವಯಸ್ಸಿನಲ್ಲೇ ಅರಿಯದ ಅಪರಾಧಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸಿರುವ ಅಂತಹ ಬೇಸರವನ್ನು ಈ ರೀತಿಯಲ್ಲಿ ಹೊರ ಹಾಕಿದ್ದಾರೆ.

Comments are closed.