Agri Land: ನಿಮ್ಮ ಜಮೀನು ದೊಡ್ದದಾಗಿರ್ಲಿ ಅಥವಾ ಚಿಕ್ಕದಾಗಿರ್ಲಿ ಈ ಕೆಲ್ಸ ತಕ್ಷಣ ಮಾಡಿ; ಇಲ್ಲಾಂದ್ರೆ ಜಮೀನನ್ನೇ ಕಳ್ಕೋಬೇಕಾಗಬಹುದು!

Agri Land: ಗ್ರಾಮೀಣ ಭಾಗದಲ್ಲಿ ನೀವು ನಮ್ಮ ದೇಶದಲ್ಲಿ ಹೆಚ್ಚಾಗಿ ರೈತರನ್ನು ಕಾಣಬಹುದಾಗಿದೆ. ಕೆಲವರ ಇತರ ದೊಡ್ಡ ಪ್ರಮಾಣದಲ್ಲಿ ಜಮೀನನ್ನು ಹೊಂದಿರುತ್ತಾರೆ ಹೀಗಾಗಿ ದೊಡ್ಡ ಮಟ್ಟದಲ್ಲಿ ಕೃಷಿಯನ್ನು ಕೂಡ ಮಾಡುತ್ತಾರೆ. ಇನ್ನು ಕೆಲವರು ಚಿಕ್ಕ ಪುಟ್ಟ ಜಮೀನಿನಲ್ಲಿ ಕೃಷಿಯನ್ನು ಮಾಡುತ್ತಾರೆ. ಜಮೀನು ಸ್ವಲ್ಪ ಇದ್ರು ಕೂಡ ಸರ್ಕಾರ ಹೇಳಿರುವಂತಹ ಈ ಪ್ರಕ್ರಿಯೆಯನ್ನು ಮಾಡಲೇಬೇಕು ಅನ್ನೋದಾಗಿ ಹೊಸ ನಿಯಮ ಜಾರಿಗೆ ಬಂದಿದ್ದು, ಪ್ರತಿಯೊಬ್ಬ ಚಿಕ್ಕಪುಟ್ಟ ರೈತರು ಕೂಡ ಈ ನಿಯಮದ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

ಚಿಕ್ಕ ಜಮೀನು ಇರುವವರು ಕೂಡ ಈ ರೀತಿ ಮಾಡಲೇಬೇಕು!

ಇಂದಿನ ದಿನಗಳಲ್ಲಿ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಪ್ರತಿಯೊಬ್ಬರೂ ಕೂಡ ಸರ್ಕಾರದ ಯಾವುದೇ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಅಥವಾ ಯೋಜನೆಗಳನ್ನು ಪಡೆದುಕೊಳ್ಳಬೇಕು ಅಂದ್ರೆ ಪ್ರಮುಖವಾಗಿ ಆಧಾರ್ ಕಾರ್ಡ್ ಹೊಂದಿರಬೇಕಾಗಿರುತ್ತದೆ. ಪಾನ್ ಕಾರ್ಡ್ ಬ್ಯಾಂಕ್ ಅಕೌಂಟ್ ರೇಷನ್ ಕಾರ್ಡ್ ಸೇರಿದಂತೆ ಪ್ರತಿಯೊಂದು ಸರ್ಕಾರಿ ದಾಖಲೆಗಳಲ್ಲಿ ಎಲ್ಲಕ್ಕಿಂತ ಪ್ರಮುಖವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು. ಈ ನಿಯಮ ಈಗ ಜಮೀನನ್ನು ಹೊಂದಿರುವಂತಹ ರೈತರ ಪಾಲಿಗೆ ಕೂಡ ಜಾರಿಗೆ ತರಲಾಗಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ನಿಯಮಗಳ ಪ್ರಕಾರ ಜಮೀನನ್ನು ಹೊಂದಿರುವಂತಹ ಪ್ರತಿಯೊಬ್ಬರು ರೈತರು ಕೂಡ ತಮ್ಮ ಜಮೀನನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಬೇಕು ಎನ್ನುವುದಾಗಿ ನಿಯಮವನ್ನು ಹೊರಡಿಸಲಾಗಿದೆ. ಒಂದು ವೇಳೆ ಕೃಷಿ ವಿಚಾರವಾಗಿ ಯಾವುದೇ ರೀತಿಯ ಯೋಜನೆಗಳು ಜಾರಿಗೆ ಬಂದರೆ ನಿಮ್ಮ ಜಮೀನು ಆಧಾರ್ ಕಾರ್ಡ್ ಗೆ ಲಿಂಕ್ ಆಗಿಲ್ಲದೆ ಹೋದಲ್ಲಿ ಆ ಸಂದರ್ಭದಲ್ಲಿ ನಿಮಗೆ ಯಾವುದೇ ಯೋಜನೆಗಳು ಸಿಗದೇ ಇರುವಂತಹ ಸಾಧ್ಯತೆ ಕೂಡ ಇರುತ್ತದೆ ಹೀಗಾಗಿ ಕೂಡಲು ನಿಮ್ಮ ಜಮೀನನ್ನು ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಮಾಡುವುದನ್ನು ಮರೆಯಬೇಡಿ. RTC ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಮೂಲಕ ಇದರ ಬಗ್ಗೆ ಅಕ್ರಮವಾಗಿ ಕೆಲಸ ಮಾಡುತ್ತಿರುವಂತಹ ಜನರನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ರೀತಿಯ ನಿಯಮವನ್ನು ಜಾರಿಗೆ ತಂದಿದೆ.

ಲಿಂಕ್ ಮಾಡುವಂತಹ ವಿಧಾನ ಹಾಗೂ ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು

https://landrecords.karnataka.gov.in/ ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ಕ್ಲಿಕ್ ಮಾಡಿದ ನಂತರ citizen registration ಎನ್ನುವಂತಹ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ. ಇಲ್ಲಿ ನಿಮ್ಮ ಇಮೇಲ್ ಮೊಬೈಲ್ ನಂಬರ್ ಜೊತೆಗೆ ಹೆಸರು ಮತ್ತು ಆಧಾರ್ ಕಾರ್ಡ್ ನಂಬರ್ ಅನ್ನು ಕೂಡ ನಮೂದಿಸ ಬೇಕಾಗಿರುತ್ತದೆ. ನಿಮ್ಮ ಮೊಬೈಲ್ ನಂಬರ್ ಗೆ ಬರುವಂತಹ ಓ ಟಿ ಪಿ ಸಂಖ್ಯೆಯನ್ನು ಸಬ್ಮಿಟ್ ಮಾಡಿದ ನಂತರ ಅಧಿಕೃತವಾಗಿ ನಿಮ್ಮ ಜಮೀನು, ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆ ಎಂಬುದಾಗಿ ಅರ್ಥವಾಗಿದೆ.

ಇನ್ನು ಈ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಬೇಕಾಗಿರುವಂತಹ ಡಾಕ್ಯುಮೆಂಟ್ಸ್ ಗಳ ಬಗ್ಗೆ ಮಾತನಾಡುವುದಾದರೆ,

  • RTC ಪತ್ರ
  • ಪಾಸ್ಪೋರ್ಟ್ ಸೈಜ್ ಫೋಟೋ
  • ನಿಮ್ಮ ಫೋನ್ ನಂಬರ್ ಹಾಗೂ ಇಮೇಲ್ ಅಡ್ರೆಸ್
  • ಆಧಾರ್ ಕಾರ್ಡ್
    ಪ್ರಮುಖವಾಗಿ ಬೇಕಾಗಿರುವಂತಹ ದಾಖಲೆಪತ್ರಗಳಾಗಿವೆ ಹಾಗೂ ಇವುಗಳ ಮೂಲಕ ನೀವು ನಿಮ್ಮ ಜಮೀನನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವಂತ ಪ್ರಕ್ರಿಯೆಯನ್ನು ಮಾಡಬಹುದಾಗಿದೆ.

Comments are closed.