Ration card: ರೇಷನ್ ಕಾರ್ಡ್ ಬಗ್ಗೆ ಸರ್ಕಾರದಿಂದ ಬಂತು ಹೊಸ ಅಪ್ಡೇಟ್; ಇವರಿಗೆ ಮಾತ್ರ ಸಿಗುತ್ತೆ ಹೊಸ ರೇಷನ್ ಕಾರ್ಡ್!

Ration card: ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಮಾಡಿರುವಂತಹ ಕೆಲವೊಂದು ಯೋಜನೆಗಳಲ್ಲಿ ರೇಷನ್ ಕಾರ್ಡ್ ಕೂಡ ಒಂದಾಗಿದೆ. ಇದರ ಮೂಲಕ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೂಡ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇವತ್ತಿಗೂ ಕೂಡ ಸಾಕಷ್ಟು ಜನರ ಹೆಸರಿನಲ್ಲಿ ರೇಷನ್ ಕಾರ್ಡ್ ಇಲ್ಲ ಅಥವಾ ರೇಷನ್ ಕಾರ್ಡ್ ಇರುವಂತಹ ಕುಟುಂಬಗಳಲ್ಲಿ ಕೆಲವೊಂದು ಕುಟುಂಬದ ಸದಸ್ಯರ ಮಾಹಿತಿಗಳು ಕೂಡ ಮಿಸ್ಟೇಕ್ ಆಗಿರುವುದು ಅಥವಾ ಬಿಟ್ಟು ಹೋಗಿರುವುದನ್ನು ಕೂಡ ನಾವು ಕಾಣಬಹುದಾಗಿದೆ.

ಅದರಲ್ಲೂ ವಿಶೇಷವಾಗಿ ಕರ್ನಾಟಕ ರಾಜ್ಯದ ಬಗ್ಗೆ ಮಾತನಾಡುವುದಾದರೆ ಸರ್ಕಾರ ಜಾರಿಗೆ ತಂದಿರುವಂತಹ ಸಾಕಷ್ಟು ಯೋಜನೆಗಳಲ್ಲಿ ರೇಷನ್ ಕಾರ್ಡ್ ಇರುವುದು ಅತ್ಯಂತ ಪ್ರಮುಖವಾಗಿದೆ. ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗೆ ರೇಷನ್ ಕಾರ್ಡ್ ಇರುವುದು ಅತ್ಯಂತ ಪ್ರಮುಖವಾಗಿರುತ್ತದೆ. ರೇಷನ್ ಕಾರ್ಡ್ ಬಗ್ಗೆ ಇತ್ತೀಚಿಗಷ್ಟೇ ಜಾರಿಗೆ ಬಂದಿರುವಂತಹ ಹೊಸ ಅಪ್ಡೇಟ್ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಿಮಗೆ ಮಾಹಿತಿಯನ್ನು ನೀಡುತ್ತೇವೆ.

ರೇಷನ್ ಕಾರ್ಡ್ ಅಪ್ಡೇಟ್!

ಆನ್ಲೈನ್ ಅಥವಾ ಆಫ್ಲೈನ್ ಮೂಲಕ ನೀವು ರೇಷನ್ ಕಾರ್ಡ್ ಅಪ್ಡೇಟ್ಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಒಂದು ವೇಳೆ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಇಲ್ಲದೆ ಹೋದಲ್ಲಿ ಉಚಿತವಾಗಿ ನೀವು ಇದನ್ನು ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.

NFSH.gov.in ಅಧಿಕೃತ ವೆಬ್ ಸೈಟ್ ಗೆ ಹೋಗಿ ನಿಮ್ಮ ತಾಲೂಕು ಹೋಬಳಿ ಸೇರಿದಂತೆ ಅಲ್ಲಿ ಕೇಳಿದ ಆಗುವಂತಹ ಪ್ರತಿಯೊಂದು ಮಾಹಿತಿಗಳನ್ನು ತುಂಬಿದ ನಂತರ ನಿಮ್ಮ ರೇಷನ್ ಕಾರ್ಡ್ ನಲ್ಲಿ ಎಷ್ಟು ಕುಟುಂಬದ ಸದಸ್ಯರು ಇದ್ದಾರೆ ಎನ್ನುವಂತಹ ಮಾಹಿತಿ ತಿಳಿದು ಬರುತ್ತದೆ. ಒಂದು ವೇಳೆ ಈ ಸಂದರ್ಭದಲ್ಲಿ ನಿಮ್ಮ ಹೆಸರು ಅಥವಾ ನಿಮ್ಮ ಕುಟುಂಬದಲ್ಲಿ ಯಾವುದೇ ಸದಸ್ಯರ ಹೆಸರು ಸೇರಿಸಬೇಕು ಎಂದಾದಲ್ಲಿ ನಾಗರಿಕ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ನೀವು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬಹುದಾಗಿದೆ.

ಇದಕ್ಕಾಗಿ ನೀವು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವಂತಹ https://ahara.kar.nic.in ಗೆ ಹೋಗಿ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ನಮೂದಿಸುವ ಮೂಲಕ ನಿಮಗೆ ಬೇಕಾಗಿರುವಂತಹ ಅಪ್ಡೇಟ್ಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಗ್ರಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಳಂತಹ ಸರ್ಕಾರಿ ಯೋಜನೆಗಳಿಗೆ ನಿಮ್ಮ ರೇಷನ್ ಕಾರ್ಡ್ ಸರಿಯಾಗಿ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಇಲ್ಲವಾದಲ್ಲಿ ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ. ಒಂದು ವೇಳೆ ನಿಮಗೆ ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಹಾಗೂ ಈ ಪ್ರಕ್ರಿಯೆಗಳನ್ನು ಸರಿಯಾದ ರೀತಿಯಲ್ಲಿ ನೀವು ಅನುಸರಿಸಬೇಕು ಎನ್ನುವಂತಹ ಇಚ್ಛೆ ಇದ್ದಲ್ಲಿ ಹತ್ತಿರದ ಸೇವಾ ಕೇಂದ್ರಗಳು ಅಥವಾ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಅಲ್ಲಿನ ತಜ್ಞರಿಂದ ಹೆಚ್ಚಿನ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.

Comments are closed.