Easement Act: ಅಕ್ಕ ಪಕ್ಕದ ಮನೆಯವರು ಜಮೀನಿಗೆ ಹೋಗೋದಕ್ಕೆ ದಾರಿ ಬಿಡುತ್ತಿಲ್ಲ ಅಂದ್ರೆ ಇಲ್ಲಿದೆ ನೋಡಿ ಹೊಸ ನಿಯಮ!

Easement Act: ವ್ಯವಸಾಯದಲ್ಲಿ ಗದ್ದೆ ಜಮೀನುಗಳಿಗೆ ಹೋಗಲು ದಾರಿ ಇಲ್ಲದೆ ಹೋದಲ್ಲಿ ರೈತರು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಕೆಲವೊಮ್ಮೆ ಅಕ್ಕಪಕ್ಕದ ಮನೆಯವರು ಅಲ್ಲೇ ಹತ್ತಿರದಲ್ಲಿರುವಂತಹ ಅವರ ಜಮೀನಿನ ಮೂಲಕ ಹಾದು ಹೋಗಬೇಕಾದರೆ ದಾರಿ ನೀಡದೆ ಇರುವಂತಹ ಸಾಧ್ಯತೆ ಕೂಡ ಕೆಲವೊಮ್ಮೆ ಗ್ರಾಮೀಣ ಭಾಗಗಳಲ್ಲಿ ಕಂಡು ಬರುತ್ತದೆ. ಒಂದು ವೇಳೆ ಗದ್ದೆಗೆ ಓಡಾಡಲು ದಾರಿ ಇಲ್ಲದೆ ಇದ್ದರೆ ಕಾನೂನಿನ ಪ್ರಕಾರ ಯಾವ ರೀತಿಯಲ್ಲಿ ಇದಕ್ಕೆ ಪರಿಹಾರ ಪಡೆದುಕೊಳ್ಳಬಹುದು ಎಂಬುದನ್ನು ಇವತ್ತಿನ ಲೇಖನದಲ್ಲಿ ಇಂದು ತಿಳಿದುಕೊಳ್ಳೋಣ.

ಈ ಸಮಸ್ಯೆಗೆ ಕಾನೂನು ಪರಿಹಾರ!

ನಿಮ್ಮ ಜಮೀನಿಗೆ ಹೋಗುವುದಕ್ಕೆ ಒಂದೆರಡು ಬಾರಿ ನಿಮ್ಮ ಪಕ್ಕದ ಮನೆಯವರ ಬಳಿ ಕೇಳಿಕೊಂಡಿದ್ದರು ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಅಂದರೆ ಕಾನೂನಾತ್ಮಕವಾಗಿ ನೀವು ಇದಕ್ಕೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. Easement Act ಎನ್ನುವಂತಹ ಕಾನೂನು ನಿಯಮದ ಪ್ರಕಾರ ಮುಂಭಾಗದಲ್ಲಿರುವಂತಹ ಜಮೀನಿನ ರೈತ ಹಿಂಭಾಗದ ಜಮೀನಿಗೆ ಹೋಗುವುದಕ್ಕೆ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಬೇಕು ಎಂಬುದಾಗಿದೆ.

Easement of Prescription ಕಾನೂನ್ನ ಅಡಿಯಲ್ಲಿ 15 ರಿಂದ 20 ವರ್ಷಗಳ ಕಾಲ ಒಂದುವೇಳೆ ಮತ್ತೊಂದು ಜಮೀನಿಗೆ ಹೋಗಬೇಕಾಗಿರುವಂತಹ ದಾರಿಯನ್ನು ಮುಚ್ಚಿ ನಾಟಿ ಮಾಡ್ತಾ ಇದ್ರೆ, ಹಾಗೂ ಮತ್ತೊಂದು ಜಮೀನಿಗೆ ಹೋಗುವುದಕ್ಕೆ ರೈತರಿಗೆ ಅವಕಾಶವನ್ನು ಕೂಡ ಮಾಡಿಕೊಡದೆ ಹೋದಲ್ಲಿ ಆಗ ಈ ಮೇಲೆ ಹೇಳಿರುವಂತಹ ಕಾನೂನು ನಿಯಮಗಳ ಪ್ರಕಾರ ಪ್ರಕರಣವನ್ನು ದಾಖಲಿಸುವ ಮೂಲಕ ರೈತರು ನ್ಯಾಯವನ್ನು ಕಾನೂನಾತ್ಮಕವಾಗಿ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ರೈತರು ತಮ್ಮ ಜಮೀನಿಗೆ ಹೋಗುವಂತಹ ಹಳೆಯ ದಾರಿಯನ್ನು ವಾಪಸ್ ಪಡೆದುಕೊಳ್ಳಬಹುದಾಗಿದೆ.

Easement of Custom ಕಾನೂನು ನಿಯಮದ ಮೂಲಕ ಒಂದು ವೇಳೆ ತಾತ ಮುತ್ತಾತನ ಕಾಲದಿಂದಲೂ ಕೂಡ ಆ ದಾರಿಯನ್ನು ಜಮೀನಿಗೆ ಹೋಗುವ ದಾರಿಯಾಗಿ ಬಳಸಿಕೊಂಡಿದ್ದು ಅದನ್ನು ಬೇರೆಯವರು ತಮ್ಮ ಮೋಸಕ್ಕೆ ಪಡೆದುಕೊಂಡಿದ್ದರೆ ಆ ಸಂದರ್ಭದಲ್ಲಿ ಕೂಡ ಈ ಮೇಲೆ ಹೇಳಿರುವಂತಹ ಕಾನೂನು ನಿಯಮವನ್ನು ಅನುಸರಿಸುವ ಮೂಲಕ ನ್ಯಾಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ರೈತರು ಬೇರೆ ಬೇರೆ ಪರಿಸ್ಥಿತಿಗಳಲ್ಲಿ ತಮ್ಮ ಜಮೀನಿಗೆ ಹೋಗುವ ದಾರಿಯನ್ನು ಬೇರೆಯವರು ಕಬ್ಜಾ ಮಾಡಿಕೊಂಡಿದ್ದರೆ ಕಾನೂನಾತ್ಮಕ ಹೋರಾಟದ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ಕೃಷಿ ಕೆಲಸ ಎನ್ನುವುದು ನಮ್ಮ ಭಾರತ ದೇಶದ ಅತ್ಯಂತ ಪ್ರಮುಖವಾದಂತಹ ಹಾಗೂ ಅವಶ್ಯಕತೆಗಳಲ್ಲಿ ಒಂದಾಗಿದ್ದು, ಆ ಸ್ಥಳದಲ್ಲಿ ರೈತರು ಈ ರೀತಿಯ ತೊಂದರೆಗೆ ಒಳಗಾಗುವುದು ನಿಜಕ್ಕೂ ಕೂಡ ಬೇಸರದ ವಿಚಾರವಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬ ರೈತನಿಗೂ ಕೂಡ ಈ ರೀತಿಯ ಬೇಸರ ತರುವಂತಹ ಘಟನೆಗಳು ಎದುರಾದಾಗ ಅದಕ್ಕಾಗಿಯೇ ಸಿದ್ಧಪಡಿಸಿರುವಂತಹ ಈ ಮೇಲೆ ಹೇಳಿರುವಂತಹ ಕಾನೂನಾತ್ಮಕ ಪ್ರಕ್ರಿಯೆಗಳ ಮೂಲಕ ತಮಗೆ ಅರ್ಹ ಆಗಿರುವಂತಹ ನ್ಯಾಯವನ್ನು ಅವರೇ ಪಡೆದುಕೊಳ್ಳಬಹುದಾಗಿದೆ. ಇದು ನಿಜಕ್ಕೂ ಕೂಡ ಪ್ರತಿಯೊಬ್ಬ ರೈತನಿಗೂ ಇಂತಹ ಸಮಸ್ಯೆಗಳು ಬಂದಾಗ ಈ ರೀತಿಯ ಕಾನೂನುಗಳು ನಮ್ಮ ನೆರವಿಗೆ ಇದೆ ಎಂಬುದಾಗಿ ಭರವಸೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Comments are closed.