Sandalwood: ಅಷ್ಟೆಲ್ಲಾ ಪಿಕ್ಚರ್ ಮಾಡಿದ್ರೂ ಅಣ್ಣಾವ್ರ ಜೊತೆಗೆ ಮಾತ್ರ ರವಿಚಂದ್ರನ್ ನಟಿಸದೆ ಇರೋದಕ್ಕೆ ಮುಖ್ಯ ಕಾರಣ ಏನಂತೆ ಗೊತ್ತಾ? ಕಾರಣ ತಿಳಿದು ಸಿನಿಪ್ರಿರರು ಕಂಗಾಲು!

Sandalwood: ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಕೊಡುಗೆ ಅಪಾರ ಎಂದು ಹೇಳಬಹುದಾಗಿದೆ ಯಾಕೆಂದರೆ ಒಬ್ಬ ನಾಯಕನಟನಾಗಿ ಮಾತ್ರವಲ್ಲದೆ ಅವರು ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಕೂಡ ಕನ್ನಡ ಚಿತ್ರರಂಗಕ್ಕೆ ಅಗಣಿತ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಅವರ ಸಿನಿಮಾದ ಹಾಡುಗಳು ಅಂದ್ರೆ ಇವತ್ತಿನ ಮಕ್ಕಳು ಕೂಡ ಎದ್ದು ನಿಂತು ಕುಣಿತಾರೆ. ಇವತ್ತಿಗೂ ಕೂಡ ಸಾಕಷ್ಟು ಪ್ರಮುಖ ಪಾತ್ರಗಳ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸನ್ನು ರಂಜಿಸುವುದಕ್ಕೆ ರವಿಮಾಮ ಸಿದ್ದರಾಗಿರುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಸುದೀಪ್ ದರ್ಶನ್ ಹಾಗೂ ಶಿವರಾಜ್ ಕುಮಾರ್ ಅವರಂತಹ ದಿಗ್ಗಜ ನಾಯಕ ನಟರ ಜೊತೆಗೂ ಕೂಡ ಜೊತೆಯಾಗಿ ತೆರೆ ಹಂಚಿಕೊಂಡಿರುವಂತಹ ರವಿಚಂದ್ರನ್ ರವರು ಇವತ್ತಿಗೂ ಕೂಡ ಆ ಒಬ್ಬ ಮಹಾನ್ ಕಲಾವಿದನ ಜೊತೆಗೆ ಕಾಣಿಸಿಕೊಂಡಿಲ್ಲ. ಹೌದು ನಾವ್ ಮಾತಾಡ್ತಿರೋದು ನಟಸಾರ್ವಭೌಮ ಡಾ ರಾಜಕುಮಾರ್ ಅವರ ಬಗ್ಗೆ. ತಮ್ಮ ಇಷ್ಟೊಂದು ವರ್ಷಗಳ ಕರಿಯರ್ ನಲ್ಲಿ ರಾಜಕುಮಾರ್ ಅವರ ಜೊತೆಗೆ ಒಮ್ಮೆ ಕೂಡ ರವಿಚಂದ್ರನ್ ರವರು ಕರೆ ಹಂಚಿಕೊಂಡಿಲ್ಲ. ಯಾಕೆ ಅನ್ವ ಪ್ರಶ್ನೆಗೆ ಉತ್ತರವನ್ನೇ ಕಂಡು ಹಿಡಿಯಲು ಇವತ್ತಿನ ಲೇಖನದಲ್ಲಿ ನಾವು ಹೊರಟಿರೋದು.

ಅಣ್ಣಾವ್ರ ಜೊತೆಗೆ ರವಿಮಾಮ ಯಾಕೆ ನಟಿಸಿಲ್ಲ?

ರವಿಚಂದ್ರನ್ ರವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದಿಗ್ಗಜ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದು ಅವರಲ್ಲಿ ವಿಷ್ಣುವರ್ಧನ್ ಕೂಡ ಒಬ್ಬರಾಗಿದ್ದಾರೆ. ಎಲ್ಲರೂ ಜೊತೆಗೂ ಕಾಣಿಸಿಕೊಂಡಿದ್ದ ರವಿಚಂದ್ರನ್ ಅವರು ನಾಯಕ ನಟನಾದ ಮೇಲೆ ರಾಜಕುಮಾರ್ ಅವರ ಜೊತೆಗೆ ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಸಾಕಷ್ಟು ಜನರಿಗೆ ತಿಳಿಯದೆ ಇರುವ ವಿಚಾರವೇನೆಂದರೆ ಬಾಲ ನಟನಾಗಿ ರವಿಚಂದ್ರನ್ ರವರು ರಾಜಕುಮಾರ್ ಅವರ ಜೊತೆಗೆ ಕಾಣಿಸಿಕೊಂಡಿದ್ದರು. ಇಷ್ಟೆಲ್ಲಾ ಅದೃಷ್ಟವನ್ನು ಪಡೆದುಕೊಂಡಿದ್ದ ಅವರು ನಾಯಕ ನಟನಾದ ಮೇಲೆ ಅಣ್ಣಾವ್ರ ಜೊತೆಗೆ ಅಭಿನಯಿಸಿ ಅಣ್ಣಾವ್ರ ಮನವನ್ನು ಗೆಲ್ಲುವಂತಹ ಅದೃಷ್ಟವನ್ನು ಹೊಂದಿರಲಿಲ್ಲ. ಇದಕ್ಕೆ ಕಾರಣ ಕೂಡ ವ್ಯಾಲಿಡ್ ಆಗಿದೆ.

ಹೌದು, ರವಿಚಂದ್ರನ್ ರವರು ನಾಯಕ ನಟನಾಗಿ ತಮ್ಮ ಸಿನಿಮಾ ಜೀವನದ ಉತ್ತುಂಗದ ಸಮಯದಲ್ಲಿ ಇರಬೇಕಾದರೆ ರಾಜಕುಮಾರ್ ಅವರು ಕೂಡ ಸಮಾನಾಂತರವಾಗಿ ಸಾಕಷ್ಟು ಸಿನಿಮಾಗಳಲ್ಲಿ ಸತತವಾಗಿ ನಟಿಸುತ್ತಿದ್ದರು. ಈ ಕಾರಣಗಳಿಂದಾಗಿ ಇಬ್ಬರೂ ಬ್ಯುಸಿ ಆಗಿದ್ದ ಕಾರಣದಿಂದಾಗಿ ಒಂದೇ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಿಚಾರದ ಬಗ್ಗೆ ರವಿಚಂದ್ರನ್ ಅವರಿಗೆ ಇವತ್ತು ಕೂಡ ಬೇಸರ ಇದೆ ಅಂತ ಹೇಳ್ಕೋತಾರೆ. ನಿಜಕ್ಕೂ ಕೂಡ ಈ ಇಬ್ಬರು ದಿಗ್ಗಜರು ಒಂದೇ ಸಿನಿಮಾದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರೆ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೊಸ ಇತಿಹಾಸವನ್ನೇ ಬರೆಯುತ್ತಿತ್ತು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇಬ್ರು ಕೂಡ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದಂತಹ ವಿಭಿನ್ನ ಹಾಗೂ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ.

Comments are closed.