Sandalwood: ಕನ್ನಡ ಮಣ್ಣಲ್ಲಿ ಮಣ್ಣಾದ ಕನ್ನಡದ ಕುಳ್ಳ ದ್ವಾರಕೀಶ್; ಅಂತದ್ದೇನಾಗಿತ್ತು ಅವ್ರಿಗೆ!

Sandalwood: ನಿಜಕ್ಕೂ ಕೂಡ ಇವತ್ತಿನ ದಿನ ಕನ್ನಡ ಚಿತ್ರರಂಗಕ್ಕೆ ಕರಾಳ ದಿನ ಎಂದು ಹೇಳಬಹುದಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ನಿರ್ಮಾಪಕ ಹಾಗೂ ನಾಯಕ ನಟ ದ್ವಾರಕೀಶ್ ಇವತ್ತು 90ನೇ ವಯಸ್ಸಿನಲ್ಲಿ ವಯೋ ಸಹಜ ಕಾಯಿಲೆಯಿಂದ ಮರಣ ಹೊಂದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರವಾದದ್ದು. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಯೋಸಹಜ ಅನಾರೋಗ್ಯಗಳಿಂದ ಬಳಲುತ್ತಿದ್ದ ದ್ವಾರಕೇಶ್ ರವರು ಇವತ್ತು ಬೆಳಗ್ಗೆ ಕಾಫಿ ಕುಡಿದು ಮಲಗಿದವರು ಮತ್ತೆ ಏಳಲಿಲ್ಲ.

ದ್ವಾರಕೀಶ್ ರವರ ಸಿನಿಮಾ ಕೊಡುಗೆ

ಆರಂಭದಲ್ಲಿ ದ್ವಾರಕೀಶ್ ರವರು ಭಾರತ್ ಆಟೋ ಸ್ಪೇರ್ಸ್ ಎನ್ನುವಂತಹ ಬಿಸಿನೆಸ್ ಅನ್ನು ಪ್ರಾರಂಭ ಮಾಡಿದ್ರು. ಅದಾದ ನಂತರ ಅವರಲ್ಲಿ ಸಿನಿಮಾದ ಬಗ್ಗೆ ಒಲವು ಹೆಚ್ಚಾಗಿದ್ದು 1963 ರಲ್ಲಿ ಸಿನಿಮಾದಲ್ಲಿ ನಟಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ನಿರ್ಮಾಣದ ವಿಚಾರಕ್ಕೆ ಬರೋದಾದ್ರೆ 1966ರಲ್ಲಿ ಮಮತೆಯ ಬಂಧನ ಎನ್ನುವಂತಹ ಸಿನಿಮಾವನ ಇನ್ನು ಇಬ್ಬರು ನಿರ್ಮಾಪಕರ ಜೊತೆಗೆ ಸೇರಿ ಸಹ ನಿರ್ಮಾಪಕರಾಗಿ ನಿರ್ಮಾಣ ಮಾಡುತ್ತಾರೆ. ಆದರ್ 1969ರಲ್ಲಿ ಮೊದಲ ಬಾರಿಗೆ ರಾಜಕುಮಾರ್ ಅವರು ನಾಯಕ ನಟನಾಗಿ ನಟಿಸಿರುವಂತಹ ಮೇಯರ್ ಮುತ್ತಣ್ಣ ಸಿನಿಮಾದಲ್ಲಿ ಸೋಲೋ ನಿರ್ಮಾಪಕರಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ.

1985ರಲ್ಲಿ ದ್ವಾರಕೀಶ್ ರವರು ಮೊದಲ ಬಾರಿಗೆ ನೀ ಬರೆದ ಕಾದಂಬರಿಯನ್ನುವಂತಹ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ತಮ್ಮ ನಿರ್ದೇಶಕರ ವೃತ್ತಿಯನ್ನು ಪ್ರಾರಂಭ ಮಾಡುತ್ತಾರೆ. 1961 ರಿಂದಲೂ ಕೂಡ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ದ್ವಾರಕೀಶ್ ರವರು ಕನ್ನಡ ಚಿತ್ರರಂಗ ಕಂಡಂತಹ ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ.

ಸಾಕಷ್ಟು ಸಿನಿಮಾಗಳನ್ನ ನಿರ್ಮಾಣ ಹಾಗೂ ನಿರ್ದೇಶನ ಮಾಡಿರುವಂತಹ ಕನ್ನಡ ಚಿತ್ರರಂಗದ ಅಪ್ರತಿಮ ಪ್ರತಿಭೆ ಆಗಿರುವಂತಹ ದ್ವಾರಕೀಶ್ ಹೃ-ದಯಘಾತದಿಂದ ಅನಿರೀಕ್ಷಿತವಾಗಿ ನಮ್ಮನ್ನೆಲ್ಲ ಅಗಲಿರುವುದು ಖಂಡಿತವಾಗಿ ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ತುಂಬಲಾರದ ನಷ್ಟವನ್ನು ತರಿಸಿದೆ. ಖಂಡಿತವಾಗಿ ಕನ್ನಡ ಚಿತ್ರರಂಗದಲ್ಲಿ ಅವರ ಸ್ಥಾನವನ್ನು ತುಂಬ ಬಲ್ಲಂತಹ ಮತ್ತೊಂದು ಪ್ರತಿಭೆ ಸಿಗುವುದು ಅಸಾಧ್ಯವೇ ಸರಿ. ಅವರ ಮಗ ಕೂಡ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ನಿರ್ಮಾಪಕರಾಗಿ ತೊಡಗಿಸಿಕೊಂಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ದ್ವಾರಕೀಶ್ ರವರು ಒಂದು ಸಿನಿಮಾದ ವಿಚಾರದ ಬಗ್ಗೆ ವಿವಾದದಲ್ಲಿ ಕಾಣಿಸಿಕೊಂಡಿದ್ದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಕನ್ನಡ ಚಿತ್ರರಂಗದಲ್ಲಿ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ರವರ ಸ್ನೇಹವನ್ನು ಕೂಡ ನಾವು ಶ್ರೇಷ್ಠ ಸ್ನೇಹಿತರ ಜೋಡಿಯಲ್ಲಿ ನೋಡಬಹುದಾಗಿದೆ. ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ಮಾಪಕರಾಗಿ ಹಾಗೂ ತಮ್ಮ ಹಾಸ್ಯಗಳ ಮೂಲಕ ಎಲ್ಲರನ್ನ ನಗಿಸಿರುವಂತಹ ಒಬ್ಬ ಪ್ರತಿಭಾನ್ವಿತ ನಟನಾಗಿ ಎಂದೆಂದಿಗೂ ಕೂಡ ದ್ವಾರಕೀಶ್ ರವರು ಕರ್ನಾಟಕದ ಕುಳ್ಳನಾಗಿ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಇರಲಿದ್ದಾರೆ. ಅವರನ್ನು ಕಳೆದುಕೊಂಡಿರುವಂತಹ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನೀಡಲಿ.

Comments are closed.