SBI Loan: SBI ನಿಂದ ಮಹಿಳೆಯರಿಗಾಗಿ ಭರ್ಜರಿ ಪ್ಲಾನ್, ಯಾವುದೇ ಅಡಮಾನವಿಲ್ಲದೇ ಸಿಗುತ್ತೆ 25 ಲಕ್ಷ ಸುಲಭ ಲೋನ್; ಇಂತವರಿಗೆ ಬಡ್ಡಿ ರಹಿತ ಸಾಲ!

SBI Loan: ಕೇಂದ್ರ ಸರ್ಕಾರ ಒಂದಲ್ಲ ಒಂದು ಯೋಜನೆಗಳ ಮೂಲಕ ನಮ್ಮ ಭಾರತ ದೇಶದಲ್ಲಿರುವಂತಹ ಮಹಿಳೆಯರನ್ನು ಪುರುಷರಷ್ಟೇ ಸಮಾಜದಲ್ಲಿ ಸಬಲರಾಗಬೇಕು ಎನ್ನುವ ನಿಟ್ಟಿನಲ್ಲಿ ಜಾರಿಗೆ ತರುತ್ತಿದೆ. ಅವುಗಳಲ್ಲಿ ಒಂದಾಗಿರುವ ಸ್ತ್ರೀಶಕ್ತಿ ಯೋಜನೆ ಬಗ್ಗೆ ಇವತ್ತಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಭಾರತ ದೇಶದ ಅತ್ಯಂತ ದೊಡ್ಡ ಸರಕಾರಿ ಬ್ಯಾಂಕ್ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಜೊತೆಗೆ ಸೇರಿಕೊಂಡು ಜಾರಿಗೆ ತರುತ್ತದೆ.

ಸ್ತ್ರೀಶಕ್ತಿ ಯೋಜನೆ

ಕೇಂದ್ರ ಸರ್ಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ಸೇರಿಕೊಂಡು ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ತಮ್ಮದೇ ಆದಂತಹ ಸ್ವಂತ ವ್ಯಾಪಾರವನ್ನು ಪ್ರಾರಂಭ ಮಾಡಬೇಕು ಎನ್ನುವಂತಹ ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ 25 ಲಕ್ಷ ರೂಪಾಯಿಗಳವರೆಗೆ ಲೋನ್ ಸೌಲಭ್ಯವನ್ನು ನೀಡುವಂತಹ ಯೋಜನೆ ಇದಾಗಿದೆ. ಯಾವುದೇ ವ್ಯಾಪಾರದಲ್ಲಿ ಅವರು 50 ಪ್ರತಿಶತಕ್ಕಿಂತ ಹೆಚ್ಚಿನ ಪಾಲುದಾರಿಕೆಯನ್ನು ಹೊಂದಿದ್ದರೆ ಈ ಯೋಜನೆಯನ್ನು ಪಡೆದುಕೊಳ್ಳಬಹುದು. 5 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಯಾವುದೇ ಗ್ಯಾರಂಟಿ ಇಲ್ಲದೆ ಪಡೆದುಕೊಳ್ಳಬಹುದಾಗಿದೆ ಹಾಗೂ ಐದು ಲಕ್ಷ ರೂಪಾಯಿಗಳಿಂದ 25 ಲಕ್ಷ ರೂಪಾಯಿಗಳ ನಡುವೆ ಸಾಲ ಪಡೆದುಕೊಳ್ಳುವುದಕ್ಕೆ ಗ್ಯಾರಂಟಿಯನ್ನು ಇಡಬೇಕಾಗಿದೆ.

ಈ ಯೋಜನೆಯ ವಿಶೇಷತೆಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾರಂಭ ಮಾಡಿರುವಂತಹ ಈ ಯೋಜನೆ ಅಡಿಯಲ್ಲಿ ಮಹಿಳೆಯರು 25 ಲಕ್ಷಗಳ ವರೆಗೆ ಸಾಲ ಸೌಲಭ್ಯವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಂಡು ತಮ್ಮದೇ ಆದಂತಹ ಉದ್ಯಮವನ್ನು ಪ್ರಾರಂಭ ಮಾಡಬಹುದಾಗಿದೆ. 2 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ 0.5% ಬಡ್ಡಿ ಹಾಗೂ 5 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳುವುದಕ್ಕೆ ಯಾವುದೇ ಗ್ಯಾರಂಟಿಯನ್ನು ಮಹಿಳೆಯರು ನೀಡಬೇಕಾಗಿಲ್ಲ.

ಈ ಯೋಜನೆ ಅಡಿಯಲ್ಲಿ ಮಹಿಳೆಯರು, ಡೈರಿ ವ್ಯಾಪಾರ, ಹಪ್ಪಳ ಸಂಡಿಗೆ ತಯಾರಿಕೆ, ಸೋಪ್ ತಯಾರಿಕೆ, ರಸಗೊಬ್ಬರ ಹಾಗೂ ಗುಡಿ ಕೈಗಾರಿಕೆಗಳಂತಹ ಉದ್ಯಮಗಳನ್ನು ಪ್ರಾರಂಭ ಮಾಡಬಹುದಾಗಿದೆ.

ಲೋನ್ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ಅರ್ಹತೆಗಳು ಹಾಗೂ ಡಾಕ್ಯುಮೆಂಟ್ಸ್ ಗಳು

  • ಪ್ರಮುಖವಾಗಿ ಅರ್ಜಿ ಸಲ್ಲಿಸುವವರು ಭಾರತದ ನಿವಾಸಿಗಳಾಗಿರಬೇಕು ಹಾಗೂ ಕನಿಷ್ಠಪಕ್ಷ ಅವರ ವಯಸ್ಸು 18 ವರ್ಷ ತುಂಬಿರಬೇಕು.
  • ಸಣ್ಣ ಪ್ರಮಾಣದ ಉದ್ಯಮವನ್ನು ಪ್ರಾರಂಭ ಮಾಡಿರುವಂತಹ ಮಹಿಳೆಯರು ಆ ಉದ್ಯಮದಲ್ಲಿ 50 ಪ್ರತಿಶತಕ್ಕಿಂತ ಹೆಚ್ಚಿನ ಪಾಲುದಾರಿಕೆಯನ್ನು ಹೊಂದಿರಬೇಕು.

ಬೇಕಾಗಿರುವಂತಹ ಡಾಕ್ಯುಮೆಂಟ್ಗಳ ಬಗ್ಗೆ ಮಾತನಾಡುವುದಾದರೆ,

  • ಆಧಾರ್ ಕಾರ್ಡ್ ಅಡ್ರಸ್ ಪ್ರೂಫ್ ಹಾಗೂ ಗುರುತಿನ ಚೀಟಿಯನ್ನು ಒದಗಿಸಬೇಕು.
  • ಕಂಪನಿಯ ಮಾಲೀಕತ್ವದ ಸರ್ಟಿಫಿಕೇಟ್ ಹಾಗೂ ಬ್ಯಾಂಕ್ ಸ್ಟೇಟ್ ಮೆಂಟ್ ಮತ್ತು ಎರಡು ವರ್ಷಗಳ ಐಟಿಆರ್ ಅನ್ನು ನೀಡಬೇಕು.
  • ಮೊಬೈಲ್ ನಂಬರ್ ಜೊತೆಗೆ ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ವ್ಯವಹಾರದ ಲಾಭ ಹಾಗೂ ನಷ್ಟಗಳನ್ನು ತಿಳಿಸುವಂತಹ ದಾಖಲೆ ಪತ್ರಗಳನ್ನು ಕೂಡ ಒದಗಿಸಬೇಕಾಗಿರುತ್ತದೆ. ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
  • ಪ್ರಮುಖವಾಗಿ ನೀವು ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕಿನ ಬ್ರಾಂಚಿಗೆ ಹೋಗಬೇಕಾಗಿರುತ್ತದೆ.
  • ಅಲ್ಲಿನ ಅಧಿಕಾರಿಗಳು ಯೋಜನೆ ಬಗ್ಗೆ ನಿಮ್ಮ ಬಳಿ ಕೆಲವೊಂದು ಪ್ರಶ್ನೆಗಳನ್ನು ಹಾಗೂ ವಿವರಗಳನ್ನು ಕೇಳುತ್ತಾರೆ ನಂತರ ಅರ್ಜಿ ಸಲ್ಲಿಸಲು ಫಾರ್ಮ್ ಅನ್ನು ನೀಡುತ್ತಾರೆ.
  • ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ಅರ್ಜಿ ಫಾರ್ಮ್ ನಲ್ಲಿ ತುಂಬಿಸಿದ ನಂತರ ನಿಮ್ಮ ಪಾಸ್ಪೋರ್ಟ್ ಸೈಜ್ನ ಫೋಟೋವನ್ನು ಸರಿಯಾದ ಜಾಗದಲ್ಲಿ ಲಗತ್ತಿಸಬೇಕಾಗಿದೆ.
  • ನಿಮ್ಮ ಅರ್ಜಿ ಪ್ರತಿಯನ್ನು ಸರಿಯಾದ ರೀತಿಯಲ್ಲಿ ಚೆಕ್ ಮಾಡಿದ ನಂತರ ಬ್ಯಾಂಕಿನ ಅಧಿಕಾರಿಗಳು ನಿಮ್ಮ ಲೋನ್ ಹಣವನ್ನು ಮಂಜೂರು ಮಾಡಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡ್ತಾರೆ.

Comments are closed.