Astrology: ಇದಪ್ಪ ಒಳ್ಳೆಯ ಟೈಮ್ ಅಂದ್ರೆ, ಮೀನ ರಾಶಿಯಲ್ಲಿ ಶುಕ್ರನ ಪಾದಾರ್ಪಣೆ. ಈ ರಾಶಿಯವರಿಗೆ ವಿಶೇಷ ರಾಜಯೋಗ!

Astrology: ಏಪ್ರಿಲ್ 24ರ ವರೆಗೆ ಶುಭಕಾರಕ ಆಗಿರುವಂತಹ ಶುಕ್ರ ಮೀನ ರಾಶಿಯಲ್ಲಿ ಇರುತ್ತಾನೆ ಹಾಗೂ ಏಪ್ರಿಲ್ 24ರ ನಂತರ ಮೇಷ ರಾಶಿಗೆ ಕಾಲಿಡಲಿದ್ದಾನೆ. ಮೀನ ರಾಶಿಯಲ್ಲಿ ಇರುವ ತನಕ ಮಾಳವ್ಯ ರಾಜಯೋಗ ನಿರ್ಮಾಣವಾಗಲಿದ್ದು 5 ರಾಶಿಯವರಿಗೆ ಅದೃಷ್ಟ ಹಾಗೂ ಉತ್ತಮ ಯೋಗ ನಿರ್ಮಾಣವಾಗಲಿದ್ದು ಆ ರಾಶಿಯವರು ಯಾರಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಧನು ರಾಶಿ(Sagittarius)

ಈ ಸಮಯ ಧನು ರಾಶಿಯವರಿಗೆ ಉತ್ತಮವಾಗಿದ್ದು ಯಾವುದೇ ಕೆಲಸ ಮಾಡಿದರೂ ಕೂಡ ಅದಕ್ಕೆ ಅವರಿಗೆ ಯಾವುದೇ ರೀತಿಯ ಶತ್ರು ಕಾಟ ಹಾಗೂ ಅಡೆತಡೆಗಳು ಕಂಡುಬರುವುದಿಲ್ಲ. ಸಾಕಷ್ಟು ಸಮಯಗಳಿಂದ ಕೆಲಸ ಇಲ್ಲದೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವಂತಹ ಧನುರಾಶಿಯವರಿಗೆ ಮನಸ್ಸಿಗೆ ಇಷ್ಟ ಆಗುವಂತಹ ಕೆಲಸ ಸಿಗಲಿದೆ. ಇನ್ನೊಂದು ವೇಳೆ ನೀವು ಪ್ರೀತಿ ಮಾಡ್ತಾ ಇದ್ರೆ ಅದರಲ್ಲಿ ಕೂಡ ಸಕಾರಾತ್ಮಕ ಬೆಳವಣಿಗೆಗಳು ಉಂಟಾಗಲಿವೆ.

ವೃಷಭ ರಾಶಿ(Taurus)

ಈ ಸಂದರ್ಭದಲ್ಲಿ ವೃಷಭ ರಾಶಿಯವರ ಜೀವನದಲ್ಲಿ ಆತ್ಮವಿಶ್ವಾಸ ಹಾಗೂ ಉತ್ಸಾಹ ಹೆಚ್ಚಾಗಲಿದ್ದು ಅವರಿಗೆ ಯಾವುದೇ ಕೆಲಸವನ್ನು ನೀಡಿದರೂ ಕೂಡ ಅದನ್ನು ಸರಿಯಾದ ರೀತಿಯಲ್ಲಿ ಮಾಡಿ ಮುಗಿಸುತ್ತಾರೆ. ಇವರು ಮಾಡುವಂತಹ ಕೆಲಸದಿಂದಾಗಿ ಸಮಾಜದಲ್ಲಿ ಇವರ ಮೇಲೆ ಜನರಿಗೆ ಇರುವಂತಹ ಪ್ರೀತಿ ಹಾಗೂ ಗೌರವಗಳು ಪ್ರತಿಷ್ಠೆಯ ರೂಪದಲ್ಲಿ ಹೆಚ್ಚಾಗಲಿದೆ. ಈ ಸಂದರ್ಭದಲ್ಲಿ ನಿಮ್ಮ ಕೈಕೆಳಗೆ ಇರುವಂತಹ ಯಾವುದೇ ವ್ಯಕ್ತಿಗಳನ್ನು ಕೂಡ ಅವಮಾನಿಸುವುದಕ್ಕೆ ಹೋಗಬೇಡಿ ಹಾಗೂ ಜೀವನದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡುವಂತಹ ಪ್ರೇರಪಣೆಯನ್ನು ಈ ಸಮಯದಲ್ಲಿ ನೀವು ಪಡೆದುಕೊಳ್ಳುತ್ತೀರಿ.

ತುಲಾ ರಾಶಿ(Libra)

ಅರ್ಧಕ್ಕೆ ನಿಂತಿರುವಂತಹ ಸಾಕಷ್ಟು ಕೆಲಸಗಳನ್ನು ತುಲಾ ರಾಶಿಯವರು ಈ ಸಂದರ್ಭದಲ್ಲಿ ಪೂರ್ಣಗೊಳಿಸುತ್ತಾರೆ. ಹಣಕಾಸಿನ ವಿಚಾರಕ್ಕೆ ಬಂದ್ರೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕಂದ್ರೆ ಒಂದಕ್ಕಿಂತ ಹೆಚ್ಚಿನ ಹಣಕಾಸಿನ ಮೂಲಗಳು ನಿಮಗೆ ಹರಿದು ಬರುತ್ತವೆ. ಒಂದು ವೇಳೆ ನೀವು ಸರ್ಕಾರಿ ಕೆಲಸದಲ್ಲಿದ್ರೆ ನಿಮಗೆ ಬೇಕಾದ ಜಾಗಕ್ಕೆ ಟ್ರಾನ್ಸ್ಫರ್ ಮಾಡಿಸಿಕೊಳ್ಳಬಹುದಾಗಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಲಿವೆ ಹಾಗೂ ನೀವು ಕೂಡ ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ಹೋಗಿ ಪುಣ್ಯ ಸಂಪಾದನೆಯನ್ನು ಮಾಡಲಿದ್ದೀರಿ.

ಮೀನ ರಾಶಿ(Picses)

ಮೀನ ರಾಶಿಯವರ ವೈಯಕ್ತಿಕ ಜೀವನದಲ್ಲಿ ಉದ್ಯೋಗ ಹಾಗೂ ಹಣ ಸಂಪಾದನೆಗಾಗಿ ಸಾಕಷ್ಟು ಮಾರ್ಗಗಳು ತೆರೆದುಕೊಳ್ಳಲಿವೆ. ಇನ್ನು ಪ್ರೀತಿಸುತ್ತಿರುವವರು ಕೂಡ ಮದುವೆ ಆಗೋದಕ್ಕೆ ಹೆತ್ತವರಿಂದ ಗ್ರೀನ್ ಸಿಗ್ನಲ್ ಅನ್ನು ಪಡೆದುಕೊಳ್ಳಲಿದ್ದಾರೆ. ವಿದೇಶಕ್ಕೆ ಹೋಗಬೇಕು ಅಲ್ಲಿ ವ್ಯಾಪಾರ ಹಾಗೂ ಕೆಲಸವನ್ನು ಮಾಡಬೇಕು ಎನ್ನುವಂತಹ ಮೀನ ರಾಶಿಯವರ ಕನಸು ನನಸಾಗಲಿದೆ. ಈ ಸಮಯದಲ್ಲಿ ಸಂತೋಷದ ಕ್ಷಣಗಳನ್ನು ನೀವು ಬೇರೆ ಬೇರೆ ರೂಪದಲ್ಲಿ ಅನುಭವಿಸಲಿದ್ದೀರಿ.

ಸಿಂಹ ರಾಶಿ(Leo)

ಆಸ್ತಿಪಾಲಿನ ವಿಚಾರದಲ್ಲಿ ಸಾಕಷ್ಟು ಸಮಯಗಳಿಂದ ನೀವು ಪಡುತ್ತಿರುವಂತಹ ಬಾಧೆ ಕೊನೆಗೊಳ್ಳಲಿದ್ದು ಪ್ರಕರಣದ ತೀರ್ಪು ನಿಮ್ಮ ಪರವಾಗಿ ಬರಲಿದೆ. ಕುಟುಂಬದ ಸದಸ್ಯರ ಜೊತೆಗೆ ಕೂಡ ನಿಮ್ಮ ಸಂಬಂಧ ಉತ್ತಮವಾಗಲಿದೆ. ವಿದೇಶದಲ್ಲಿ ವ್ಯಾಪಾರ ಮಾಡುವಂತಹ ಸಿಂಹ ರಾಶಿಯವರಿಗೆ ದೊಡ್ಡ ಮಟ್ಟದಲ್ಲಿ ಲಾಭ ಕಾದಿದೆ.

Comments are closed.