LIC Loan: ಅರ್ಜೆಂಟಾಗಿ ಹಣ ಬೇಕಿದ್ರೆ ಹೀಗ್ ಮಾಡಿ; EMI ಕಟ್ಟುವ ತಲೆಬಿಸಿನೇ ಇಲ್ಲ!

LIC Loan: ಸಾಮಾನ್ಯವಾಗಿ ಸಾಕಷ್ಟು ಜನರು ತಮಗೆ ಸಾಲ ಬೇಕು ಅಂತ ಅಂದ್ರೆ ಬ್ಯಾಂಕುಗಳಲ್ಲಿ ಪರ್ಸನಲ್ ಪಡೆದುಕೊಳ್ಳುವುದಕ್ಕೆ ಮೊರೆ ಹೋಗುತ್ತಾರೆ. ಇನ್ಮುಂದೆ ಈ ರೀತಿ ಬ್ಯಾಂಕುಗಳಿಗೆ ಹೋಗಿ ಪರ್ಸನಲ್ ಲೋನ್ ಪಡೆದುಕೊಳ್ಳಬೇಕಾದ ಅಗತ್ಯವಿಲ್ಲ ನಿಮ್ಮ ಎಲ್ಐಸಿ ಯೋಜನೆ ಯ ಮೂಲಕವೇ ಪಡೆದುಕೊಳ್ಳಬಹುದಾಗಿದೆ.

ಎಲ್ಐಸಿ ಪಾಲಿಸಿ ಲೋನ್

ಎಲ್ಐಸಿ ಪಾಲಿಸಿ ಅತ್ಯಂತ ಸೆಕ್ಯೂರ್ ಲೋನ್ ಆಗಿರುತ್ತದೆ ಹಾಗೂ ನೀವು ಮಾಡಿರುವಂತಹ ಪಾಲಿಸಿಯ ಮೇಲೆ ಈ ಲೋನ್ ಪಡೆದುಕೊಳ್ಳಬಹುದಾಗಿದೆ. ಮೂರರಿಂದ ಐದು ದಿನಗಳ ಒಳಗಾಗಿ ಈ ಲೋನ್ ಪಡೆದುಕೊಳ್ಳಬಹುದಾಗಿದೆ. ಈ ಸಲ ಪಡೆದ ನಂತರ ನೀವು ಇನ್ಸೂರೆನ್ಸ್ ನಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಬೇಕಾಗಿಲ್ಲ. ಪ್ರೊಸೆಸಿಂಗ್ ಚಾರ್ಜ್ ಕೂಡ ಇರೋದಿಲ್ಲ.

ಮರುಪಾವತಿ

ಎಲ್ಐಸಿಯ ವಿಮೆಯಲ್ಲಿ ನೀವು ಸಾಲವನ್ನು ಪಡೆದುಕೊಂಡರೆ ಅದರ ಆರು ತಿಂಗಳಿನಿಂದ ವಿಮೆ ಮುಕ್ತಾಯವಾಗುವವರೆಗೂ ಕೂಡ ನೀವು ಮರುಪಾವತಿ ಮಾಡೋದಕ್ಕೆ ಸಮಯಾವಧಿಯನ್ನು ನೀಡಲಾಗುತ್ತದೆ. ಹೀಗಾಗಿ ಪ್ರತಿ ತಿಂಗಳು ಹಣವನ್ನು ಕಟ್ಟಬೇಕಾದ ಅಗತ್ಯವಿಲ್ಲ. ಸಾಲ ಪಡೆದ ಆರು ತಿಂಗಳಿಗೆ ಪಾವತಿ ಮಾಡಿದ ನಂತರ ಒಂದು ತಿಂಗಳ ಬಡ್ಡಿಯನ್ನು ಕಟ್ಟ ಬೇಕಾಗಿರುತ್ತದೆ.

  • ಸಂಪೂರ್ಣ ಸಾಲವನ್ನು ನೀವು ಬಡ್ಡಿಯ ಜೊತೆಗೆ ಮರುಪಾವತಿ ಮಾಡಬಹುದಾಗಿದೆ.
  • ಇಲ್ಲವಾದಲ್ಲಿ ವಿಮ ಕ್ಲೇಮ್ ಮಾಡಿದ ನಂತರ ಅದರಲ್ಲಿರುವಂತಹ ಹಣದ ಮೂಲಕವೇ ಅಸಲನ್ನು ಪಾವತಿ ಮಾಡಬಹುದಾಗಿದೆ.
  • ಇಲ್ಲವಾದಲ್ಲಿ ಅಸಲು ಹಾಗೂ ಬಡ್ಡಿಯನ್ನು ವಾರ್ಷಿಕವಾಗಿ ಪ್ರತ್ಯೇಕವಾಗಿ ಪಾವತಿ ಮಾಡಬಹುದಾಗಿದೆ.

ಸಾಲದ ಬಡ್ಡಿದರ 10ರಿಂದ 12 ಪ್ರತಿಶತ ಇರುತ್ತದೆ. ನಿಮ್ಮ ವಿಮೆಯ 80 ರಿಂದ 90 ಪ್ರತಿಶತದ ವರೆಗೆ ಹಣವನ್ನು ಸಾಲ ರೂಪದಲ್ಲಿ ನೀವು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಸಾಲ ಪಡೆದುಕೊಂಡಿರುವಂತಹ ಮೊತ್ತ ಸರಂಡರ್ ಮೌಲ್ಯಗಿಂತ ಹೆಚ್ಚಾಗಿದ್ದರೆ ನಿಮ್ಮ ಪಾಲಿಸಿಯನ್ನು ಮುಗಿಸುವಂತಹ ಹಕ್ಕನ್ನು ಕಂಪನಿ ಹೊಂದಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.

ಎಲ್ಐಸಿ ಲೋನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಹತ್ತಿರದ ಎಲ್ಐಸಿ ಕಚೇರಿಗೆ KYC ದಾಖಲೆಗಳ ಜೊತೆಗೆ ಹೋಗಿ ಎಲ್ಐಸಿ ಅಧಿಕಾರಿಗಳು ಹೇಳುವ ರೀತಿಯಲ್ಲಿ ಪ್ರತಿಯೊಂದು ವಿವರಗಳನ್ನು ಸಬ್ಮಿಟ್ ಮಾಡಿದರೆ ಸಾಕು ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಿಂತ ಮುಂಚೆ ನೀವು ಇನ್ಸೂರೆನ್ಸ್ ಮೇಲೆ ಲೋನ್ ಪಡೆದುಕೊಳ್ಳಬಹುದಾ ಇಲ್ವಾ ಅನ್ನೋದನ್ನ ಪರೀಕ್ಷಿಸಿಕೊಳ್ಳಬೇಕಾಗಿರುತ್ತದೆ. ಇದಕ್ಕಾಗಿ ನೀವು ನಿಮ್ಮ ಜೊತೆಗೆ ಎಲ್ಐಸಿ ಕಚೇರಿಗೆ ಹೋಗುವ ಸಂದರ್ಭದಲ್ಲಿ KYC ದಾಖಲೆ ಪತ್ರಗಳನ್ನು ಚೆಕ್ ಮಾಡಿಸಿಕೊಳ್ಳಲು ಹಿಡಿದುಕೊಂಡು ಹೋಗಬೇಕಾಗಿರುತ್ತದೆ. ಇರುವಂತಹ ಎಲ್ಐಸಿ ಯೋಜನೆಯ ಮೂಲಕವೇ ನೀವು ಅದರ 80 ರಿಂದ 90 ಪ್ರತಿಶತ ಹಣವನ್ನು ಸಾಲರೂಪದಲ್ಲಿ ಪಡೆದುಕೊಳ್ಳುವ ಮೂಲಕ ನಿಮ್ಮ ಆರ್ಥಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದಾಗಿದೆ. ಪ್ರತಿ ತಿಂಗಳಿಗೆ ಕಂತಿನ ಹಣವನ್ನು ಕಟ್ಟಬೇಕಾದ ತಲುಪಿಸಿ ಕೂಡ ಇರೋದಿಲ್ಲ.

Comments are closed.