Bhagyalakshmi Serial: ಭಾಗ್ಯಂಗೆ ಬುದ್ಧಿ ಕಲ್ಸೊಕೆ ಶೆಫ್ ರೂಪಳನ್ ಕರ್ಕೊಂಡ್ ಬಂದ್ರೆ ರೂಪಾ ಮಾಡಿದ್ದೆನು ಗೊತ್ತಾ? ತಾಂಡವ್ಗೆ ಫುಲ್ ಶಾಕ್!

Bhagyalakshmi Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಈಗ ಸೂರ್ಯವಂಶಿ ಮನೆಯಲ್ಲಿ ಯುಗಾದಿ ಹಬ್ಬದ ಸಂಚಿಕೆ ನಡೆಯುತ್ತದೆ. ಈಗಾಗಲೇ ಭಾಗ್ಯ ಮನೆಯಿಂದ ಹೊರ ಹೋಗಬೇಕು ಎಂಬುದಾಗಿ ಹಠ ಹಿಡಿದಿದ್ದ ತಾಂಡವ್ ವಿರುದ್ಧ ಕುಸುಮ ಹಾಗೂ ಮನೆಯವರು ತಿರುಗಿ ಬಿದ್ದಿದ್ದು ಮನೆಯನ್ನು ಮಧ್ಯದಲ್ಲಿ ಗೆರೆ ಎಳೆಯುವ ಮೂಲಕ ಎರಡು ಭಾಗವಾಗಿ ಮಾಡಿದ್ದಾರೆ. ಎಷ್ಟೇ ಖರ್ಚಾದ್ರು ಪರ್ವಾಗಿಲ್ಲ ಅಂತ ಸೆಲೆಬ್ರಿಟಿಷೇಟ್ ಆಗಿರುವ ರೂಪ ಅವರನ್ನ ಯುಗಾದಿ ಅಡಿಗೆ ಮಾಡೋದಕ್ಕೆ ತಾಂಡವ್ ಮನೆಗೆ ಕರೆಸಿಕೊಂಡಿದ್ದಾನೆ. ಆದರೆ ರೂಪಾಳಿಗೂ ಕೂಡ ತಾಂಡವ್ ಬೇಕು ಅಂತಾನೆ ಭಾಗ್ಯಳನ್ನ ಮನೆಯಿಂದ ಹೊರಹಾಕಬೇಕು ಎಂಬುದಾಗಿ ಈ ರೀತಿ ಮಾಡ್ತಿದ್ದಾನೆ ಅಂತ ತಿಳಿದು ಬಂದಿದೆ. ಇದನ್ನ ಕುಸುಮ ಬಳಿ ಕೂಡ ಚರ್ಚಿಸಿ, ಕ್ಷಮೆ ಕೇಳಿದ್ದು ನಾನು ನಿಮ್ಮ ಪರವಾಗಿ ಇದ್ದೇನೆ ಎಂಬುದಾಗಿ ಹೇಳಿದ್ದಾಳೆ.

ತಾಂಡವ್ ಶ್ರೇಷ್ಠ ಮದುವೆ ದಿನಾಂಕ!

ಶ್ರೇಷ್ಠ ತಂದೆ ತಾಂಡವ್ ಗೆ ಕರೆ ಮಾಡಿ ನನ್ನ ಮಗಳ ಮನೆಯಿಂದ ನಿಮ್ಮ ತಾಯಿಯನ್ನು ಆದಷ್ಟು ಬೇಗ ಹೊರಹಾಕಿ ಎಂಬುದಾಗಿ ಕೇಳುತ್ತಾನೆ. ಮದುವೆ ದಿನಾಂಕ ಫಿಕ್ಸ್ ಆಗಿದೆ ನನ್ನ ಮಗಳು ಬೇಕು ಅಂತ ಇದ್ರೆ ಬಂದು ಮದುವೆ ಮಾಡಿಕೋ ಅನ್ನೋದಾಗಿ ಕೂಡ ಹೇಳ್ತಾರೆ. ಈ ಮದುವೆ ನಾಟಕ ಮುಗಿದ್ರೆ ಸಾಕು ಅಂತ ತಾಂಡವ ಈ ಸಂದರ್ಭದಲ್ಲಿ ಅಂದುಕೊಳ್ಳುತ್ತಾನೆ. ಅದಕ್ಕಿಂತ ಮುಂಚೆ ಊಟ ಮಾಡಬೇಕು ಅಂತ ನೆನಪಾಗಿ ರೂಪಾಳಿಗೆ ಅಡಿಗೆ ಮಾಡಿದ್ರೆ ಊಟಕ್ಕೆ ಬಡಿಸಿ ಎಂದು ಕೇಳಿದಾಗ ಅಡಿಗೆ ಮಾಡೋದು ಅಷ್ಟೇ ನಾನು ಕೆಲಸ ಊಟಕ್ಕೆ ಬೇಕಾದರೆ ನೀವೇ ಬಡಿಸಿಕೊಳ್ಳಿ ಅಂತ ಹೇಳುತ್ತಾಳೆ.

ಇದೇ ಸಂದರ್ಭದಲ್ಲಿ ಎದುರಿಗೆ ಮನೆಯವರು ಊಟಕ್ಕೆ ಕುಳಿತಿರುವುದನ್ನು ನೋಡಿ ತಾಂಡವ್ ಹಬ್ಬ ಅಂದ್ರೆ 5 ರಿಂದ 6 ಐಟಂ ಆದ್ರೂ ಇರಬೇಕು ನಾನಂತೂ ರುಚಿಯಾದ ಅಡುಗೆಯನ್ನು ಊಟ ಮಾಡ್ತೀನಿ ಅನ್ನೋದಾಗಿ ಡೈನಿಂಗ್ ಟೇಬಲ್ ಮೇಲೆ ಕುಳಿತುಕೊಳ್ಳುತ್ತಾನೆ. ಆದರೆ ಈ ಸಂದರ್ಭದಲ್ಲಿ ರೂಪ ಹಬ್ಬಕ್ಕಾಗಿ ಮಾಡಿರುವ ಅಡಿಗೆಯನ್ನು ಹಾಳು ಮಾಡಿರ್ತಾಳೆ. ಅದಕ್ಕೆ ಕೋಪಗೊಂಡು ಏನು ಈ ರೀತಿ ಅಡುಗೆ ಮಾಡಿದ್ದಾರೆ ಎಂಬುದಾಗಿ ತಾಂಡವ್ ಕೇಳಿದಾಗ ನಾವು ಯೂಟ್ಯೂಬ್ ನಲ್ಲಿ ಇದೇ ರೀತಿ ಮಾಡೋದು ನೋಡೋ ಜನ್ರಿಗೆ ಬಣ್ಣ ಗೊತ್ತಾಗುತ್ತೆ ರುಚಿ ಗೊತ್ತಾಗುತ್ತಾ ಅನ್ನೋದಾಗಿ ಹೇಳ್ತಾಳೆ.

ತಾಂಡವ್ ಗೆ ರೂಪ ತಿರುಗೇಟು!

ಅಡುಗೆ ಹಾಳಾಗಿರೋದನ್ನ ನೋಡಿ ತಾಂಡವ್ ಕೋಪದಿಂದ ನಿಮ್ಮ ಮನೆಯಲ್ಲಿ ಕೂಡ ನೀವು ಇದನ್ನೇ ತಿಂತಿರಾ ಅಂತ ಕೇಳಿದಾಗ ರೂಪ, ಇಲ್ಲ ನಾವು ಅಡಿಗೆ ಮಾಡುವುದಕ್ಕಂತಾನೆ ಅಡುಗೆ ಭಟ್ಟರನ್ನು ಇಟ್ಕೊಂಡಿದ್ದೇವೆ ಎಂದು ಹೇಳ್ತಾಳೆ. ಇವತ್ತು ಕೂಡ ಹಬ್ಬದ ಊಟಕ್ಕೆ ಪಕ್ಕದ ಮನೆಯವರು ನನ್ನ ಊಟಕ್ಕೆ ಕರೆದಿದ್ದಾರೆ ಅಂತ ಹೇಳಿ ಭಾಗ್ಯ ಹಾಗೂ ಮನೆ ಅವರು ಕುಳಿತಿದ್ದ ಸಾಲಿನಲ್ಲಿ ಹೋಗಿ ಕುಳಿತು ಊಟಕ್ಕೆ ಸಿದ್ಧವಾಗುತ್ತಾಳೆ. ಈಗ ತಾಂಡವ್ ಹಬ್ಬದ ದಿನ ಮನೆಯವರ ಜೊತೆಗೆ ಕೂತ್ಕೊಂಡು ಊಟ ಮಾಡ್ತಾನ ಇಲ್ಲ ಉಪವಾಸ ಇರ್ತಾನ ಅನ್ನೋದನ್ನ ಕಾದು ನೋಡಬೇಕು.

Comments are closed.