Sandalwood: ಶಶಿಕುಮಾರ್ ಅವರ ಕಷ್ಟದ ಸಂದರ್ಭದಲ್ಲಿ ಅವರ ಬೆನ್ನ ಹಿಂದೆ ನಿಂತಿದ್ದೇ ಇವರು; ಅವರನ್ನೇ ವಿವಾಹವಾಗಿದ್ದಕ್ಕೂ ಒಂದು ಕಾರಣ ಇತ್ತು ಗೊತ್ತಾ?

Sandalwood: ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸೂಪರ್ ಆಗಿ ಡ್ಯಾನ್ಸ್ ಮಾಡೋದಕ್ಕೆ ಹಾಗೂ ನೋಡೋದಕ್ಕೆ ಕೂಡ ಚಾಕಲೇಟ್ ಹೀರೋ ತರ ಕಾಣ್ತಾ ಇದ್ದ ಸೂಪರ್ ಸ್ಟಾರ್ ಅಂದ್ರೆ ಅದು ನಮ್ಮೆಲ್ಲರ ನೆಚ್ಚಿನ ಸುಪ್ರೀಂ ಸ್ಟಾರ್ ಶಶಿಕುಮಾರ್. 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರೇಕ್ಷಕರ ಫೇವರೆಟ್ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಸಾಕಷ್ಟು ಬೇರೆ ಬೇರೆ ಭಾಷೆಗಳಿಂದಲೂ ಕೂಡ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದಿದ್ವು. ಆದರೆ ಯಾರ ಕಣ್ಣು ಬಿತ್ತೋ ಏನೋ ಅಪ-ಘಾತದ ನಂತರ ಅವರ ಸಿನಿಮಾ ಜೀವನವೇ ಸಂಪೂರ್ಣವಾಗಿ ಹಾಳಾಗಿ ಹೋಯಿತು.

ಶಶಿಕುಮಾರ್ ಜೀವನದ ದುರಂತ!

ಈ ಅ-ಪಘಾತದಲ್ಲಿ ಶಶಿಕುಮಾರ್ ಅವರ ಮುಖವೇ ಸಂಪೂರ್ಣವಾಗಿ ಹಾಳಾಗಿ ಹೋಗಿತ್ತು. ಅವರು ಬದುಕಿ ಬಂದಿದ್ದೇ ಹೆಚ್ಚು ಅಂತ ಹೇಳಬಹುದು. ಒಂದು ಕಾಲದಲ್ಲಿ ಅಷ್ಟೊಂದು ಚಂದದ ರಾಜಕುಮಾರನ ಹಾಗೆ ಇದ್ದ ಶಶಿಕುಮಾರ್ ಸಂಪೂರ್ಣವಾಗಿ ಬದ್ಲಾಗಿ ಹೋದರು. ತಮ್ಮ ಸಿನಿಮಾ ಜೀವನದ ಉತ್ತುಂಗದಲ್ಲಿದ್ದ ಶಶಿಕುಮಾರ್ ಅವರು ತಮ್ಮ ಚಂದದ ಮುಖಕ್ಕೆ ಹೆಸರುವಾಸಿಯಾಗಿದ್ರು. ಆದರೆ ಆ ಸಮಯದಲ್ಲಿ ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿ ನಡೆದಿರುವಂತಹ ಈ ಘಟನೆ ಅವರ ಜೀವನದಲ್ಲಿ ದೊಡ್ಡ ಬಿರುಗಾಳಿಯನ್ನು ತಂದಿತ್ತು ಅಂದ್ರೂ ಕೂಡ ತಪ್ಪಾಗಲ್ಲ.

ಈ ಸಮಯದಲ್ಲಿ ಅವರ ಬೆನ್ನ ಹಿಂದೆ ನಿಂತಿದ್ದು ಪತ್ನಿ!

ಈ ರೀತಿ ಜೀವನದಲ್ಲಿ ಅನಾಹುತ ಆಗಿದ್ದ ಸಂದರ್ಭದಲ್ಲಿ ಅವರ ಪತ್ನಿ ಶಶಿಕುಮಾರ್ ಅವರ ಬೆಂಬಲಕ್ಕೆ ನಿಲ್ತಾರೆ ಹಾಗೂ ಶಶಿಕುಮಾರ್ ಅವರ ಮುಖಕ್ಕೆ 10 ಕೋಟಿ ರೂಪಾಯಿಗಳ ವರೆಗೆ ಖರ್ಚು ಮಾಡಿ ಪ್ಲಾಸ್ಟಿಕ್ ಸರ್ಜರಿಯನ್ನು ಹಾಕಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೂಡ ಅವರ ಪತ್ನಿನೇ ಅವರ ದೊಡ್ಡ ಬೆಂಬಲವಾಗಿ ನಿಂತಿದ್ದು. ಹೌದು ನಾವ್ ಮಾತಾಡ್ತಾ ಇರೋದು ಶಶಿಕುಮಾರ್ ಅವರ ಪತ್ನಿ ಸರಸ್ವತಿ ಅವರ ಬಗ್ಗೆ.

ಸಾಕಷ್ಟು ಜನರಿಗೆ ಇವರ ಬಗ್ಗೆ ತಿಳಿದಿರಲು ಸಾಧ್ಯವಿಲ್ಲ. ಕಾಲೇಜು ಸಮಯ ದಿಂದಲೇ ಇವರಿಬ್ಬರ ನಡುವೆ ಪ್ರೀತಿ ಮೂಡಿ ಇಬ್ಬರು ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಆಗಿದ್ದರು. ಅಪ-ಘಾತ ಆಗಿದ್ದ ಸಂದರ್ಭದಲ್ಲಿ ಹಣದ ವಿಚಾರದಿಂದ ಹಿಡಿದು ಶಶಿಕುಮಾರ್ ಅವರ ಮಾನಸಿಕ ಪರಿಸ್ಥಿತಿ ಸರಿಯಾಗಿ ಇಟ್ಟುಕೊಳ್ಳುವಲ್ಲಿ ಕೂಡ ಸರ್ವ ರೀತಿಯಲ್ಲಿ ಸರಸ್ವತಿ ಅವರೇ ತಮ್ಮ ಗಂಡನ ಸಹಾಯಕ್ಕೆ ನಿಂತಿದ್ದು. ಇಂದು ಶಶಿಕುಮಾರ್ ಅವರು ನಮ್ಮ ನಡುವೆ ಈ ರೀತಿ ನಗಾಡಿಕೊಂಡು ಇದ್ದಾರೆ ಎಂದರೆ ಅದಕ್ಕೆ ಅವರ ಪತ್ನಿಯೇ ದೊಡ್ಡ ಕಾರಣ. ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಅವನ ಹೆಂಡತಿ ಇರುತ್ತಾಳೆ ಅಥವಾ ಯಾವುದಾದರೂ ಹೆಣ್ಣು ಇರುತಾಳೆ ಅನ್ನುವಂತಹ ಮಾತನ್ನ ನಾವು ಶಶಿಕುಮಾರ್ ಅವರ ಜೀವನದ ಉದಾಹರಣೆಯ ಮೂಲಕ ಒಪ್ಪಿಕೊಳ್ಳಬಹುದಾಗಿದೆ.

Comments are closed.