Astrology: ಶುಕ್ರನ ಅಸ್ತದಿಂದಾಗಿ ಈ ರಾಶಿ ಅವರಿಗೆ ಲಾಭವೋ ಲಾಭ!

Astrology: ಸೌಂದರ್ಯ ಹಾಗೂ ಸಮೃದ್ಧಿಯ ಸಂಕೇತ ಆಗಿರುವಂತಹ ಶುಕ್ರ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 28ರ ಬೆಳಿಗ್ಗೆ 7.27ಕ್ಕೆ ಮೇಷ ರಾಶಿಯಲ್ಲಿ ಮುಳುಗಲಿದ್ದಾನೆ. ಈ ಸಂದರ್ಭದಲ್ಲಿ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಶುಭ ಫಲಿತಾಂಶವನ್ನು ನೀಡಲಿದ್ದು ಆ ಶುಭ ಫಲಿತಾಂಶವನ್ನು ಪಡೆಯಲಿರುವ ಅದೃಷ್ಟವಂತ ಮೂರು ರಾಶಿಗಳು ಯಾವುವು ಎನ್ನುವಂತಹ ಮಾಹಿತಿಯನ್ನು ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ನೀಡಲಿದ್ದೇವೆ.

ಮೇಷ ರಾಶಿ(Aries)

ಮೇಷ ರಾಶಿಯಲ್ಲಿ ಶುಕ್ರ ಮುಳುಗಲಿದ್ದು ಹೀಗಾಗಿ ಮೇಷ ರಾಶಿಯವರಿಗೆ ಕೂಡ ಇದರ ಪರಿಣಾಮ ಸಕಾರಾತ್ಮಕವಾಗಿಯೇ ಬೀರಲಿದೆ. ಕೆಲಸದ ಕ್ಷೇತ್ರದಲ್ಲಿ ನಿಮಗೆ ಸ್ವಲ್ಪಮಟ್ಟಿಗೆ ಒತ್ತಡ ಹೆಚ್ಚಾಗಬಹುದು ಆದರೆ ಕೈ ತುಂಬಾ ಹಣವನ್ನು ಸಂಪಾದನೆ ಮಾಡಲಿದ್ದೀರಿ. ಉದ್ಯೋಗದಲ್ಲಿ ಪ್ರಮೋಷನ್ ಸಿಗುವಂತಹ ಸಾಧ್ಯತೆ ಕೂಡ ಇರುತ್ತದೆ ಹಾಗೂ ಸಂಬಳದ ಹೆಚ್ಚಳ ಕೂಡ ನಡೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ಹೊಸ ಡೀಲ್ಗಳನ್ನು ಪಡೆದುಕೊಳ್ಳುವ ಅವಕಾಶ ಕೂಡ ಇದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆ ಅಥವಾ ತೊಂದರೆಗೆ ಒಳಗಾಗಬಾರದು ಎಂದರೆ ಮನೆಯಲ್ಲಿ ಹೋಮ ಹವನಗಳಂತ ಪೂಜಾ ಕಾರ್ಯಕ್ರಮಗಳನ್ನು ಮಾಡಿದರೆ ಅದರಿಂದ ಸಿಗುವಂತಹ ಪುಣ್ಯ ಫಲದಿಂದ ಕೂಡ ನಕಾರಾತ್ಮಕ ಶಕ್ತಿಗಳಿಂದ ದೂರ ಇರಬಹುದಾಗಿದೆ.

ವೃಷಭ ರಾಶಿ(Taurus)

ಉದ್ಯೋಗ ಕ್ಷೇತ್ರದಲ್ಲಿ ವೃಷಭ ರಾಶಿಯವರು ಲಾಭವನ್ನು ಪಡೆದುಕೊಳ್ಳುತ್ತಾರೆ. ಈಗಾಗಲೇ ವ್ಯಾಪಾರ ಮಾಡುತ್ತಿರುವವರು ತಮ್ಮ ವ್ಯಾಪಾರವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡುವಂತಹ ಅವಕಾಶವನ್ನು ಕೂಡ ಹೊಂದಿರುತ್ತಾರೆ. ಆರೋಗ್ಯ ಸಮಸ್ಯೆ ಪರಿಹಾರವಾಗಲಿದೆ. ಲವ್ ಲೈಫ್ ನಲ್ಲಿ ಮತ್ತೆ ಮಧುರತೆ ಕಂಡು ಬರಲಿದೆ. ದಾಂಪತ್ಯ ಜೀವನದಲ್ಲಿ ಜೀವನ ಸಂಗಾತಿಯ ಜೊತೆಗೆ ಇರುವಂತಹ ಸಮಸ್ಯೆಗಳು ನಿವಾರಣೆ ಆಗಲಿದೆ. ವೃಷಭ ರಾಶಿಯವರು ದೊಡ್ಡಮಟ್ಟದ ವ್ಯಾಪಾರ ಮಾಡುವುದಕ್ಕೆ ಹೂಡಿಕೆ ಮಾಡಬಹುದಾಗಿದೆ.

ಮಿಥುನ ರಾಶಿ(Gemini)

ಮಿಥುನ ರಾಶಿಯವರ ಸಾಕಷ್ಟು ವರ್ಷಗಳ ವಿದೇಶಕ್ಕೆ ಹೋಗಿ ಕೆಲಸ ಮಾಡಬೇಕು ಎನ್ನುವಂತಹ ಕನಸು ಈಡೇರಲಿದೆ. ಉದ್ಯೋಗ ಕ್ಷೇತ್ರದಲ್ಲಿ ನೀವು ಮಾಡುತ್ತಿರುವಂತಹ ಕೆಲಸವನ್ನು ನಿಮ್ಮ ಸಹೋದ್ಯೋಗಿಗಳು ಹಾಗೂ ನಿಮ್ಮ ವರಿಷ್ಠ ಅಧಿಕಾರಿಗಳು ಮೆಚ್ಚಲಿದ್ದಾರೆ ಹಾಗೂ ನಿಮಗೆ ಇದರಿಂದಾಗಿ ಇನ್ನಷ್ಟು ಹೆಚ್ಚಿನ ಲಾಭ ಸಿಗಲಿದೆ. ಕಂಕಣ ಭಾಗ್ಯ ನಿಮ್ಮ ಪಾಲಿಗೆ ಒಲಿದು ಬರಲಿದೆ ಹಾಗೂ ಮನೆಯಲಿ ಶುಭಕಾರ್ಯಗಳು ಕೂಡ ನಡೆಯಲಿವೆ. ಮಾಡುವಂತ ಪ್ರತಿಯೊಂದು ಕೆಲಸದಲ್ಲಿ ಕೂಡ ನಿಮ್ಮ ಮನೆ ಹಾಗೂ ಸ್ನೇಹಿತರಿಂದ ಸಂಪೂರ್ಣ ಸಹಕಾರ ದೊರಕಲಿದೆ. ವಿಷ್ಣು ಸಹಸ್ರ ನಾಮವನ್ನು ಪ್ರತಿದಿನ ಪಠಣೆ ಮಾಡುವ ಮೂಲಕ ನಿಮ್ಮ ಜೀವನದಲ್ಲಿ ಇರುವಂತಹ ಪ್ರತಿಯೊಂದು ನೆಗೆಟಿವ್ ಎನರ್ಜಿಗಳನ್ನು ದೂರ ಹಾಕಬಹುದಾಗಿದೆ. ಮನೆಯಲ್ಲಿ ಕುಟುಂಬಸ್ಥರ ಜೊತೆಗೆ ಶಾಂತಿ ನೆಮ್ಮದಿ ನೆಲೆಸಲಿದ್ದು ಆರ್ಥಿಕ ವಿಚಾರದಲ್ಲಿ ಕೂಡ ಮಿಥುನ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ತುಂಬಿರಲಿದೆ. ಸಮಾಜದಲ್ಲಿ ಜನರ ನಡುವೆ ನಿಮ್ಮ ಬಗ್ಗೆ ಇರುವಂತಹ ಪ್ರತಿಷ್ಠೆ ಗೌರವಗಳು ಕೂಡ ಹೆಚ್ಚಾಗಲಿದ್ದಾವೆ.

Comments are closed.