Goddess Lakshmi: ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಸದಾ ನೆಲೆಸಿರ್ಬೇಕು ಅಂದ್ರೆ ಮೊದ್ಲು ಈ ವಸ್ತುಗಳನ್ನ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ; ಪೂಜೆ ಮಾಡ್ತೇ ಇದ್ರೂ ನಗುತ್ತಾ ನಿಮ್ಮ ಮನೆಗೆ ಪ್ರವೇಶ ಮಾಡುತ್ತಾಳೆ!

Goddess Lakshmi: ಯಾವುದೇ ಮನೆ ಆಗಿರಲಿ ಅಥವಾ ಕೆಲಸ ಮಾಡುವಂತಹ ಕಚೇರಿ ಆಗಿರಲಿ ಎಲ್ಲವು ಸರಿಯಾಗಬೇಕು ಅಂದ್ರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಕ್ರಮಗಳನ್ನು ಪಾಲಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ. ಇನ್ನು ಮನೆಯಲ್ಲಿ ಯಾವುದೇ ರೀತಿಯ ವಾಸ್ತುದೋಷ ಕಾಣಬಾರದು ಎಂಬುದಾಗಿದ್ದರೆ ಮನೆಯ ದ್ವಾರದ ಮುಂಭಾಗದಲ್ಲಿ ಕೆಲವೊಂದು ವಸ್ತುಗಳನ್ನು ನೀವು ತೂಗು ಹಾಕುವುದರಿಂದಾಗಿ ಮನೆಯಲ್ಲಿರುವಂತಹ ವಾಸ್ತುದೋಷವನ್ನು ನಿವಾರಣೆ ಮಾಡಬಹುದಾಗಿದೆ. ಹಾಗಿದ್ದರೆ ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

  1. ಒಂದು ವೇಳೆ ನಿಮ್ಮ ಮನೆಯಲ್ಲಿ ವಾಸ್ತುದೋಷ ಇದ್ರೆ ಮನೆಯ ಮುಂಭಾಗದಲ್ಲಿ ಎರಡು ಬದಿಯಲ್ಲಿ ಕೂಡ ಸ್ವಸ್ತಿಕ್ ಚಿಹ್ನೆಯನ್ನು ಚಿತ್ರಿಸುವುದು ವಾಸ್ತು ಶಾಸ್ತ್ರದ ಪ್ರಕಾರ ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯ ವಾಸ್ತುದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ನೀವು ಕೂಡ ನಿಮ್ಮ ಮನೆಯ ಮುಂಭಾಗದಲ್ಲಿ ಎರಡು ಬದಿಯಲ್ಲಿ ಈ ರೀತಿ ಸ್ವಸ್ತಿಕ್ ಚಿಹ್ನೆಯನ್ನು ಚಿತ್ರಿಸುವುದು ಒಳ್ಳೆಯದು.
  2. ವಾಸ್ತು ಶಾಸ್ತ್ರದ ಪ್ರಕಾರ ಕವಡೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬುದಾಗಿ ಪರಿಗಣಿಸಲಾಗುತ್ತದೆ. ನಿಮ್ಮ ಮನೆಯ ಮುಂಭಾಗದಲ್ಲಿ 5 ಅಥವಾ 9 ಕವಡೆಗಳನ್ನು ನೇತು ಹಾಕಿದ್ರೆ ಮನೆಯಲ್ಲಿರುವಂತಹ ಎಲ್ಲ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇದರಿಂದಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಕೂಡ ಉಂಟಾಗುತ್ತದೆ. ಈ ಮೂಲಕ ಕೂಡ ನೀವು ನಿಮ್ಮ ಮನೆಯಲ್ಲಿ ಲಕ್ಷ್ಮಿಯ ಆಹ್ವಾನ ಮಾಡಿಕೊಳ್ಳಬಹುದಾಗಿದೆ.
  3. ವಾಸ್ತು ಶಾಸ್ತ್ರದ ಪ್ರಕಾರ ಕುದುರೆಯ ಲಾಳವನ್ನು ಕೂಡ ಅತ್ಯಂತ ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದನ್ನು ಕೂಡ ಮನೆಯಲ್ಲಿ ಧನ ಆಗಮನ ಆಗುವುದಕ್ಕೆ ಪ್ರಮುಖ ಶುಭಸೂಚಕ ವಸ್ತು ಎಂಬುದಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಕುದುರೆಯ ಲಾಳವನ್ನು ಮನೆಯ ಮುಖ್ಯ ದ್ವಾರಕ್ಕೆ ಅಳವಡಿಸುವುದರ ಮೂಲಕ ನೀವು ಮನೆಗೆ ಲಕ್ಷ್ಮಿಯ ಆಗಮನವನ್ನು ಸ್ವಾಗತಿಸಬಹುದಾಗಿದೆ. ಇದು ಕೂಡ ಅತ್ಯಂತ ಶುಭ ಪರಿಣಾಮವನ್ನು ತರುವಂತಹ ವಸ್ತುವಾಗಿದೆ.
  4. ಮನೆಯಲ್ಲಿ ಸಮೃದ್ಧಿ ಶಾಂತಿ ಹಾಗೂ ಸಕಾರಾತ್ಮಕ ಶಕ್ತಿಗಳು ನೆಲೆಸಬೇಕೆ ಎನ್ನುವಂತಹ ಆಸೆ ಇದ್ರೆ ನೀವು ವಾಸ್ತು ಶಾಸ್ತ್ರದ ಪ್ರಕಾರವಾಗಿ ಶ್ರೀ ಯಂತ್ರಲಕ್ಷ್ಮಿಯನ್ನ ಮನೆಯ ಮುಖ್ಯದ್ವಾರಕ್ಕೆ ಅಂಟಿಸಬೇಕಾಗಿರುತ್ತದೆ. ಇದರಿಂದಾಗಿ ಕೂಡ ಮನೆಯಲ್ಲಿ ಧನದ ಹರಿವು ಹಾಗೂ ಸಮೃದ್ಧತೆ ಎನ್ನುವುದು ನೆಲಸುತ್ತದೆ. ಮನೆಯಲ್ಲಿ ಕುಟುಂಬಸ್ಥರ ನಡುವೆ ಕೂಡ ಸಾಕಷ್ಟು ಸೌಹಾರ್ದತೆ ನೆಲಸಲಿದೆ.
  5. ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿಯ ಹೆಜ್ಜೆ ಗುರುತು ನಿಮ್ಮ ಮಾಹಿತಿ ಮುಖ್ಯ ದ್ವಾರಕ್ಕೆ ಇರಿಸುವುದರಿಂದ ಇದರಿಂದಲೂ ಕೂಡ ಶುಭ ಲಾಭವನ್ನು ಸಂಪಾದನೆ ಮಾಡಬಹುದಾಗಿದೆ. ಈ ಎಲ್ಲ ವಸ್ತುಗಳನ್ನು ನೀವು ಪ್ರಮುಖವಾಗಿ ನಿಮ್ಮ ಮನೆಯ ಮುಖ್ಯದ್ವಾರಕ್ಕೆ ಅಳವಡಿಸಬೇಕಾಗಿರುತ್ತದೆ. ಇದರಿಂದಾಗಿ ನಿಮಗೆ ಅಪರಿಮಿತ ಸಂಪತ್ತಿನ ಲಾಭವಾಗಲಿದೆ. ಹೀಗಾಗಿ ನೀವು ಕೂಡ ನಿಮ್ಮ ನೀಡಿ ಜೀವನದಲ್ಲಿ ಇದನ್ನು ಪಾಲಿಸುವ ಮೂಲಕ ಸಕಾರಾತ್ಮಕ ಪರಿಣಾಮಗಳನ್ನು ಪಡೆದುಕೊಳ್ಳಬಹುದಾಗಿದೆ.

Comments are closed.