Traffic Rules: HSRP ಜೊತೆಗೆ ಈ ದಾಖಲೆ ಕೂಡ ನಿಮ್ಮ ವಾಹನದಲ್ಲಿ ಕಡ್ಡಾಯವಾಗಿ ಇರಲೇಬೇಕು; ಇಲ್ಲವಾದ್ರೆ ಬೀಳುತ್ತೆ ಫೈನ್!

Traffic Rules: ಈಗಾಗಲೇ ದೇಶದ ಸಾಕಷ್ಟು ಕಡೆಗಳಲ್ಲಿ ಕೇಂದ್ರ ಸರ್ಕಾರದಿಂದ ಜಾರಿಗೆ ತಂದಿರುವ HSRP ನಂಬರ್ ಪ್ಲೇಟ್ ಅನ್ನು ಪ್ರತಿಯೊಬ್ಬ ವಾಹನದ ಮಾಲೀಕರು ಕೂಡ ಹೊಂದಿರಬೇಕು ಎನ್ನುವಂತಹ ನಿಯಮ ನಿಮಗೆಲ್ಲರಿಗೂ ಗೊತ್ತೇ ಇದೆ. 2019ನೇ ಇಸವಿಯ ಒಳಗೆ ಖರೀದಿ ಮಾಡಿರುವಂತಹ ವಾಹನಗಳಿಗೆ ಅಧಿಕೃತ ಸಾರಿಗೆ ಇಲಾಖೆಯ ವೆಬ್ ಸೈಟ್ ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಮೂಲಕ HSRP ನಂಬರ್ ಪ್ಲೇಟ್ ಅನ್ನು ತಮ್ಮ ಶೋರೂಮ್ ನಿಂದಲೇ ಪಡೆದುಕೊಳ್ಳಬಹುದಾಗಿದೆ.

HSRP ನಂಬರ್ ಪ್ಲೇಟ್ ಜೊತೆಗೆ ಇದು ಕೂಡ ಬೇಕೇ ಬೇಕು!

HSRP ನಂಬರ್ ಪ್ಲೇಟ್ ನ ಪ್ರಾಮುಖ್ಯತೆ ಎಷ್ಟಿದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಅದರ ಜೊತೆಗೆ ಕೆಲವೊಂದು ಡಾಕ್ಯೂಮೆಂಟ್ಸ್ಗಳು ಕೂಡ ಕಾರಲ್ಲಿ ಇರಬೇಕಾಗಿರೋದು ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಈಗ ಕೂಡ HSRP ಸೆಕ್ಯೂರಿಟಿ ನಂಬರ್ ಪ್ಲೇಟ್ ಜೊತೆಗೆ ಕೋಡೆಡ್ ಸ್ಟಿಕರ್ಗಳನ್ನು ಹೊಂದುವುದು ಕೂಡ ಅತ್ಯಂತ ಅಗತ್ಯವಾಗಿರುತ್ತದೆ. ಇವೆಲ್ಲದರ ಜೊತೆಗೆ ಈಗ ನಾವು ಹೇಳೋ ಹೊರಟಿರುವಂತಹ ಡಾಕ್ಯುಮೆಂಟ್ಗಳು ಕೂಡ ನಿಮ್ಮ ಬಳಿ ಇರಬೇಕಾಗಿರೋದು ಅತ್ಯಂತ ಪ್ರಮುಖವಾಗಿದೆ.

HSRP ನಂಬರ್ ಪ್ಲೇಟ್ ಅನ್ನು ನೀವು ಹೊಸದಾಗಿ ವಾಹನ ಖರೀದಿ ಮಾಡಿದ್ರೆ ನೀವು ರಿಜಿಸ್ಟರ್ ಮಾಡಿ ನಂತರ ಹಾಕಿಸಿಕೊಳ್ಳಬೇಕಾಗಿಲ್ಲ ಯಾಕಂದ್ರೆ ಶೋರೂಮ್ ನವರ ಹೊಸದಾಗಿ ವಾಹನವನ್ನು ಡೆಲಿವರಿ ಮಾಡುವ ಸಂದರ್ಭದಲ್ಲಿ HSRP ನಂಬರ್ ಪ್ಲೇಟ್ ಜೊತೆಗೆನೇ ವಾಹನವನ್ನು ನೀಡ್ತಾರೆ. ಈ ನಂಬರ್ ಪ್ಲೇಟ್ ಜೊತೆಗೆ ಒಂದು ವೇಳೆ ನಿಮ್ಮ ವಾಹನ ಹಳೆಯದಾಗಿದ್ದರೆ ನಿಮ್ಮ ಕಾರಿನ ಫಿಟ್ನೆಸ್ ಚೆನ್ನಾಗಿದೆ ಎಂದು ಸಾಬೀತು ಪಡಿಸುವುದಕ್ಕಾಗಿ ಕಾರಿನ ಫಿಟ್ನೆಸ್ ಪ್ರಮಾಣ ಪತ್ರ ಬೇಕಾಗಿರುತ್ತದೆ. ಹೌದು ನಿಮ್ಮ ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲ ಅಂದ್ರೆ ಹಾಗೂ ನಿಮ್ಮ ವಾಹನಕ್ಕೆ 15 ವರ್ಷಗಳಿಗಿಂತಲೂ ಹೆಚ್ಚಿನ ಸಮಯ ಆಗಿದೆ ಅಂದರೆ ಆ ಸಂದರ್ಭದಲ್ಲಿ ನೀವು ದಂಡವನ್ನು ಕಟ್ಟಬೇಕಾಗಿರುತ್ತದೆ ಹಾಗೂ ನಿಮ್ಮ ವಾಹನವನ್ನು ಸರ್ಕಾರದವರೇ ಸ್ಕ್ರಾಪ್ ಗೆ ಹಾಕಿ ವಾಹನವನ್ನು ಗುಜರಿ ಮಾಡಿಬಿಡುತ್ತಾರೆ ಹಾಗೂ ಅದಕ್ಕೆ ಸರಿಸಮಾನವಾಗಿರುವಂತಹ ಮೌಲ್ಯದ ಹಣವನ್ನು ನಿಮಗೆ ನೀಡಿಬಿಡ್ತಾರೆ.

ಹೀಗಾಗಿ ವಾಹನಕ್ಕೆ ಫಿಟ್ನೆ ಸರ್ಟಿಫಿಕೇಟ್ ಮಾಡಿಸಿಕೊಳ್ಳಬೇಕಾಗಿರುವುದು ಅನಿವಾರ್ಯ ಆಗಿರುತ್ತದೆ. ಕಾರುಗಳಲ್ಲಿ ಮ್ಯಾನ್ ವಾಲ್ಗೆ 400 ಹಾಗೂ ಆಟೋಮ್ಯಾಟಿಕ್‌ಗೆ 600. ಬಿಚಕರ್ ವಾಹನಗಳಲ್ಲಿ ಮ್ಯಾನುವಲ್ ವಾಹನಕ್ಕೆ 200 ಹಾಗೂ ಆಟೋಮ್ಯಾಟಿಕ್ 400. ನವೀಕರಣ ಮಾಡಿಸುವುದಕ್ಕೆ 200 ರೂಪಾಯಿ ನೀಡಬೇಕಾಗಿರುತ್ತೆ.

RTO ಸಂಸ್ಥೆ ಈ ನಿಯಮವನ್ನು ಜಾರಿಗೆ ತಂದಿದ್ದು ಇದರಿಂದಾಗಿ ಸರಿಯಾದ ವಾಹನಗಳು ರೋಡ್ ಮೇಲೆ ಓಡಾಡಬೇಕು ಎನ್ನುವುದು ಪ್ರಮುಖ ಉದ್ದೇಶವಾಗಿದೆ. ಹಾಗೂ ಹಳೆಯ ವಾಹನಗಳ ಮೂಲಕ ಪರಿಸರ ಇನ್ನಷ್ಟು ಮಾಲಿನ್ಯ ಆಗದೆ ಇರುವ ನಿಟ್ಟಿನಲ್ಲಿ ತಡೆಗಟ್ಟುವುದಕ್ಕಾಗಿ ಈ ರೀತಿ ಮಾಡಲಾಗಿದೆ.

Comments are closed.