Film: ಅಂದಿನ ಕಾಲದ ನಂ.ಒನ್ ನಟಿ ಭವ್ಯ ಎಲ್ರ ಜೊತೆಗೆ ನಟಿಸಿದ್ರೂ ರಾಜಕುಮಾರ್ ಅವರ ಜೊತೆಗೆ ಮಾತ್ರ ನಟಿಸದೆ ಇದ್ದಿದ್ಯಾಕೆ; ಬಯಲಾಯ್ತು ಅಸಲಿ ಕಾರಣ!

Film: ಅಂದಿನ ಕಾಲದಲ್ಲಿ ನಾಯಕ ನಟಿಯರು ಕೇವಲ ಸೌಂದರ್ಯದ ವಿಚಾರದಲ್ಲಿ ಮಾತ್ರವಲ್ಲದೆ ನಮ್ಮ ಕನ್ನಡ ಚಿತ್ರರಂಗದಲ್ಲಿ ನಟನೆಯ ವಿಚಾರದಲ್ಲಿ ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದಕ್ಕೆ ಯಶಸ್ವಿಯಾಗುತ್ತಿದ್ದರು. ಅಂತಹ ಪ್ರತಿಭಾನ್ವಿತ ಸೌಂದರ್ಯವತಿ ನಟಿಯರಲ್ಲಿ ನಟಿ ಭವ್ಯ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದ ದಿಗ್ಗಜ ನಟರಾಗಿರುವಂತಹ ಅಂಬರೀಶ್ ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ಅವರಂತಹ ಖ್ಯಾತ ನಾಯಕ ನಟರ ಜೊತೆಗೆ ತೆರೆಯ ಮೇಲೆ ಕಾಣಿಸಿಕೊಂಡು ಸೈ ಅನಿಸಿಕೊಂಡಿದ್ದರು. ಇಷ್ಟೊಂದು ದೊಡ್ಡ ಮಟ್ಟದ ನಾಯಕನಟದೊಂದಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದ ನಟಿ ಭವ್ಯ ಅವರು ಕನ್ನಡ ಚಿತ್ರರಂಗದ ಕುಲತಿಲಕ ನಟಸಾರ್ವಭೌಮ ಡಾ ರಾಜಕುಮಾರ್ ಅವರ ಜೊತೆಗೆ ಯಾಕೆ ನಾಯಕಿಯಾಗಿ ಕಾಣಿಸಿಕೊಂಡಿಲ್ಲ ಅನ್ನೋ ಒಂದು ಕೊರಗು ಖಂಡಿತವಾಗಿ ಪ್ರತಿಯೊಬ್ಬರಲ್ಲೂ ಇದೆ. ಅದಕ್ಕೆ ಕಾರಣ ಏನು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಅಣ್ಣಾವ್ರ ಜೊತೆಗೆ ನಟಿ ಭವ್ಯ ಯಾಕೆ ಕಾಣಿಸಿಕೊಳ್ಳಲಿಲ್ಲ?

ಕನ್ನಡ ಚಿತ್ರರಂಗದ ಒಂದು ಕಾಲದ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿ ಭವ್ಯ ಅವರ ಹೆಸರು ಖಂಡಿತವಾಗಿ ಕೇಳಿ ಬರುತ್ತದೆ. ಸಿನಿಮಾದಲ್ಲಿ ಅವರು ಇದ್ದಾರೆ ಅಂದ್ರೆ ಥಿಯೇಟರ್ ಗಳಿಗೆ ಪಡ್ಡೆ ಹುಡುಗರ ದಂಡೆ ಹೋಗುತ್ತಿತ್ತು. ಅಷ್ಟರ ಮಟ್ಟಿಗೆ ಅಂದಿನ ಕಾಲದಲ್ಲಿ ಅವರು ಜನಪ್ರಿಯತೆಯನ್ನು ಹೊಂದಿದ್ದರು. ಆದರೆ ರಾಜಕುಮಾರ್ ಅವರ ಜೊತೆಗೆ ನಟಿಸಬೇಕು ಎಂದಾಗಲಿಲ್ಲ ಭವ್ಯ ಅವರಿಗೆ ಒಂದಲ್ಲ ಒಂದು ಆಡೆ-ತಡೆಗಳು ಎದುರಾಗುತ್ತಿತ್ತು ಎನ್ನುವುದಾಗಿ ಅವರು ಹೇಳಿಕೊಂಡಿದ್ದಾರೆ.

ಭವ್ಯ ಅವರ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಅವರಿಗೆ 20 ವರ್ಷ ವಯಸ್ಸಾಗಿದ್ರೆ ಅದಾಗಲೇ ಚಿತ್ರರಂಗದಲ್ಲಿ ತಮ್ಮದೇ ಆದಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಪಡೆದುಕೊಂಡು ಕನ್ನಡ ಚಿತ್ರರಂಗದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದ ರಾಜಕುಮಾರ್ ಅವರಿಗೆ 50 ವರ್ಷ ವಯಸ್ಸಾಗಿತ್ತು. ಹೀಗಾಗಿ ಇವರಿಬ್ಬರ ನಡುವೆ ಸಾಕಷ್ಟು ದೊಡ್ಡ ಮಟ್ಟದ ವಯಸ್ಸಿನ ಅಂತರವಿತ್ತು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಇವರಿಬ್ಬರೂ ಒಂದೇ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದರೆ ಜನರು ಬೇರೆ ರೀತಿ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದಾಗಿ ರಾಜಕುಮಾರ್ ಅವರ ಪತ್ನಿ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿಯಾಗಿರುವ ಪಾರ್ವತಮ್ಮ ರಾಜಕುಮಾರ್ ಅವರು ಭಾವಿಸಿದ್ರಂತೆ. ಹೀಗಾಗಿ ನಟನೆ ಮಾಡುವಂತಹ ಅವಕಾಶ ಇದ್ದರೂ ಕೂಡ ಭವ್ಯ ಅವರು ಅದನ್ನ ಕಳೆದುಕೊಳ್ಳಬೇಕಾಗಿ ಬಂತು.

ಆ ಸಮಯದಲ್ಲಿ ರಾಜಕುಮಾರ್ ಅವರು ಐತಿಹಾಸಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಹಾಗೂ ನಟಿ ಭವ್ಯ ಅವರು ಮಾಡರ್ನ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು ಹೀಗಾಗಿ, ಈ ಕಾಂಬಿನೇಷನ್ ಕೂಡ ಅಷ್ಟೊಂದು ಚೆನ್ನಾಗಿ ಸರಿ ಬರುತ್ತಿರಲಿಲ್ಲ. ಇಬ್ಬರ ಪಾತ್ರೆಗಳ ಹೊಂದಾಣಿಕೆ ಸರಿ ಆಗ್ತಿರಲಿಲ್ಲ ಅನ್ನೋದು ಕೂಡ ಮತ್ತೊಂದು ಪ್ರಮುಖ ಕಾರಣವಾಗಿದೆ ಅನ್ನೋದಾಗಿ ಬಲ್ಲವರು ಹೇಳ್ತಾರೆ.

Comments are closed.