Shukra Yoga: ಶುಕ್ರನಿಂದ ಪ್ರಾರಂಭವಾಗಲಿದೆ ರಾಜಯೋಗ ಈ ರಾಶಿಯವರಿಗೆ ಅದೃಷ್ಟ ಅದೃಷ್ಟ!

Shukra Yoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ ಕಾರಕ ಆಗಿರುವಂತಹ ಶುಕ್ರ ಮೀನ ರಾಶಿಯಲ್ಲಿ ಏಪ್ರಿಲ್ 24ರ ವರೆಗೆ ಮುಂದುವರೆಯಲಿದ್ದಾನೆ. ಈ ಸಂದರ್ಭದಲ್ಲಿ ರಾಹುವಿನ ಜೊತೆಗೆ ಸಂಯೋಗ ಕೂಡ ಆಗಿ ಸಾಕಷ್ಟು ವಿಶೇಷವಾದ ರಾಜಯೋಗಗಳು ಕೂಡ ನಿರ್ಮಾಣವಾಗಲಿದೆ. ಇದರಿಂದಾಗಿ ಈ ಸಂದರ್ಭದಲ್ಲಿ ಕೆಲವೊಂದು ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದ್ದು ರಾಶಿಗಳು ಯಾವುವು ಹಾಗೂ ಅವರ ಜೀವನದ ಮೇಲೆ ಈ ರಾಜಯೋಗಗಳು ಬೀರುವ ಪರಿಣಾಮಗಳು ಏನು ಎಂಬುದನ್ನು ತಿಳಿಯೋಣ ಬನ್ನಿ.

ಮಿಥುನ ರಾಶಿ(Gemini)

ಮಾಲವ್ಯ ರಾಜಯೋಗದಿಂದಾಗಿ ಮಿಥುನ ರಾಶಿಯವರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಣದ ಲಾಭ ಸಿಗಲಿದೆ. ಉದ್ಯೋಗ ಹಾಗೂ ವ್ಯಾಪಾರ ಎರಡು ಕ್ಷೇತ್ರಗಳಲ್ಲಿ ಕೂಡ ಮಿಥುನ ರಾಶಿಯವರಿಗೆ ಅಂದುಕೊಂಡ ರೀತಿಯಲ್ಲಿ ನಿರೀಕ್ಷಿತ ಫಲಿತಾಂಶಗಳು ಸಿಗಲಿವೆ. ಅನಿರೀಕ್ಷಿತವಾಗಿ ಬೇರೆ ಬೇರೆ ಮೂಲೆಗಳಿಂದ ಧನ ಲಾಭವಾಗಲಿದೆ. ಮಿಥುನ ರಾಶಿಯವರಿಗೆ ಈ ಸಂದರ್ಭ ಸಾಕಷ್ಟು ಶುಭದಾಯಕವಾಗಿ ಪರಿಣಮಿಸಲಿದೆ.

ಕರ್ಕ ರಾಶಿ(Cancer)

ಹೊಸ ಕೆಲಸಕ್ಕಾಗಿ ಅದರಲ್ಲೂ ವಿಶೇಷವಾಗಿ ಸರ್ಕಾರಿ ನೌಕರಿಗಾಗಿ ಕರ್ಕ ರಾಶಿಯವರು ಪ್ರಯತ್ನ ಪಡುತ್ತಿದ್ದರೆ ಗುಡ್ ನ್ಯೂಸ್ ಕೇಳಿ ಬರಲಿದೆ. ತಾವು ಇಷ್ಟಪಡುವಂತಹ ಕೆಲಸದಲ್ಲಿ ಅವರು ಕೈ ತುಂಬ ಸಂಬಳ ಪಡೆಯುವಂತಹ ಅವಕಾಶವನ್ನು ಪಡೆಯಲಿದ್ದು ತಮ್ಮ ಉದ್ಯೋಗದಲ್ಲಿ ಪ್ರಗತಿಯನ್ನು ಹೊಂದಲಿದ್ದಾರೆ. ಸಾಕಷ್ಟು ಅವಕಾಶಗಳು ಕರ್ಕ ರಾಶಿ ಅವರಿಗೆ ಜೀವನದಲ್ಲಿ ಸಾಧನೆ ಮಾಡುವುದಕ್ಕೆ ಸಿಗಲಿವೆ. ಹಣದ ಸಮಸ್ಯೆ ಯಾವುದೇ ರೀತಿಯಲ್ಲಿ ಕಂಡು ಬರುವುದಿಲ್ಲ.

ಸಿಂಹ ರಾಶಿ(Leo)

ಮಾಡುವಂತಹ ಕೆಲಸದಲ್ಲಿ ಅದೃಷ್ಟದ ಸಹಾಯದಿಂದಾಗಿ ಎಲ್ಲಾ ಕಾರ್ಯಗಳು ಸುಲಭವಾಗಿ ನಡೆಯಲಿವೆ. ಮದುವೆಯಾಗಿ ಸಾಕಷ್ಟು ವರ್ಷಗಳಿಂದ ಮಕ್ಕಳಿಗೆ ಪರಿತಪಿಸುತ್ತಿರುವಂತಹ ದಂಪತಿಗಳಿಗೆ ಸಂತಾನ ಭಾಗ್ಯ ಆಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಇರುವಂತಹ ಸಿಂಹ ರಾಶಿಯವರಿಗೆ ಕೆಲಸದಲ್ಲಿ ಪ್ರಮೋಷನ್ಸ್ ಸೇರಿದಂತೆ ಸಂಬಳದಲ್ಲಿ ಹೆಚ್ಚಳ ಆಗುವಂತಹ ಸಾಧ್ಯತೆವಾಗಿದೆ. ಒಟ್ಟಾರೆಯಾಗಿ ಈ ಸಮಯ ಕೈಗೆ ಹಣ ಸಿಗುವಂತಹ ಸಮಯ. ವೇಗವಾದ ಬೆಳವಣಿಗೆಯನ್ನು ಜೀವನದಲ್ಲಿ ಸಾಧಿಸಲಿದ್ದೀರಿ.

ಕನ್ಯಾ ರಾಶಿ(Virgo)

ಒಂದು ವೇಳೆ ಕನ್ಯಾ ರಾಶಿಯವರು ಪಾರ್ಟ್ನರ್ಶಿಪ್ ವ್ಯಾಪಾರವನ್ನು ಮಾಡಬೇಕು ಎಂದಾದಲ್ಲಿ ಈ ಸಂದರ್ಭದಲ್ಲಿ ಪ್ರಾರಂಭ ಮಾಡಬಹುದಾಗಿದೆ ಕೈತುಂಬ ಲಾಭವನ್ನು ಸಂಪಾದನೆ ಮಾಡಲಿದ್ದಾರೆ. ಸಾಕಷ್ಟು ಸಮಯಗಳಿಂದ ನಿಮಗೆ ಸಿಗಬೇಕಾಗಿದ್ದ ಪಿತ್ರಾರ್ಜಿತ ಆಸ್ತಿ ಸಿಗಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿ ಇರುವಂತಹ ನಿರುದ್ಯೋಗಿಗಳಿಗೆ ಅವರ ಮನಸ್ಸಿಗೆ ಇಷ್ಟ ಆಗುವ ಕೆಲಸ ಸಿಗಲಿದೆ.

ಧನು ರಾಶಿ(Sagittarius)

ಮಾಲವ್ಯ ರಾಜಯೋಗದಿಂದಾಗಿ ಧನುರಾಶಿಯವರು ಮಾಡುವಂತಹ ಕೆಲಸದಿಂದಾಗಿ ಸಮಾಜದಲ್ಲಿ ಅವರ ಮೇಲೆ ಇರುವಂತಹ ಜನರ ಗೌರವ ಹಾಗೂ ಪ್ರೀತಿಯ ಎರಡು ಕೂಡ ಹೆಚ್ಚಾಗಲಿದೆ. ಜನನಾಯಕರ ರೀತಿಯಲ್ಲಿ ಕಾಣಿಸಿಕೊಳ್ಳುವಂತಹ ಇವರು ರಾಜಕೀಯ ಕ್ಷೇತ್ರದಲ್ಲಿ ಕೂಡ ತಮ್ಮದೇ ಆದಂತಹ ವರ್ಚಸ್ಸನ್ನು ಹೊಂದಲಿದ್ದಾರೆ. ದೊಡ್ಡ ಕಂಪನಿಗಳಲ್ಲಿ ಇರುವಂತಹ ಧನುರಾಶಿಯವರಿಗೆ ಅವರ ನಿರೀಕ್ಷೆಗೂ ಮೀರಿದ ಪ್ರಮೋಷನ್ ಸಿಗಲಿದೆ. ನೀವು ತೆಗೆದುಕೊಳ್ಳುವಂತಹ ಪ್ರತಿಯೊಂದು ನಿರ್ಧಾರಗಳು ನಿಮ್ಮ ಸ್ನೇಹಿತರು ಹಾಗೂ ಪೋಷಕರಿಂದ ಬೆಂಬಲಿಸಲ್ಪಡುತ್ತದೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ವಿಜಯ ಶತಸಿದ್ದ.

Comments are closed.