Astrology: 12 ವರ್ಷಗಳ ನಂತರ ಕಾಣಿಸಿಕೊಂಡ ಗಜಲಕ್ಷ್ಮಿ ರಾಜಯೋಗ. ಈ ಮೂರು ರಾಶಿಯವರ ಮನೆಗೆ ಖುದ್ದಾಗಿ ಬರಲಿದ್ದಾಳೆ ಲಕ್ಷ್ಮಿದೇವಿ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ ಕಾರಕ ಗ್ರಹ ಆಗಿರುವಂತಹ ಶುಕ್ರ ಮೇಷ ರಾಶಿಗೆ ಕಾಲಿಟ್ಟಿದ್ದಾನೆ. ಇದು ನಡೆಯುತ್ತಿರುವುದು ಏಪ್ರಿಲ್ 24ರಂದು. ಗುರು ಕೂಡ ಮೇಷ ರಾಶಿಯಲ್ಲಿ ಇರುವುದರಿಂದಾಗಿ ಇದು ಗಜಲಕ್ಷ್ಮಿ ರಾಜಯೋಗವನ್ನು ನಿರ್ಮಾಣ ಮಾಡಲಿದೆ ಹಾಗೂ ಮೇ ಒಂದರವರೆಗೆ ಇರಲಿದೆ. ಇದರಿಂದಾಗಿ ಅದೃಷ್ಟವನ್ನು ಪಡೆದಿರುವಂತಹ ಅದೃಷ್ಟವಂತ ಮೂರು ರಾಶಿಯವರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ(Aries)

ಮೇಷ ರಾಶಿಯಲ್ಲಿ ಗಜಲಕ್ಷ್ಮಿ ರಾಜಯೋಗ ಪ್ರಾರಂಭ ಆಗಿರುವುದರಿಂದಾಗಿ ಇವರಿಗೆ ಇದರ ಲಾಭ ಬೇರೆ ರಾಶಿಯವರಿಗಿಂತ ಹೆಚ್ಚಾಗಲಿವೆ. ಇವರು ಕೆಲಸ ಮಾಡುವಂತಹ ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಯಶಸ್ವಿ ಇವರ ಕಾಲ ಬುಡದಲ್ಲಿ ಬಂದು ಬೀಳಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಇರುವವರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಜನರ ನಡುವೆ ನಿಮ್ಮ ಗೌರವ ಹೆಚ್ಚಾಗಲಿದೆ. ಸಾಕಷ್ಟು ಸಮಯಗಳ ನಂತರ ಕುಟುಂಬದ ಜೊತೆಗೆ ಸಂತೋಷದ ಸಮಯವನ್ನು ಕಳೆಯಲು ನಿಮಗೆ ಅವಕಾಶ ದೊರೆಯುತ್ತದೆ. ಒಟ್ಟಾರೆಯಾಗಿ ಈ ಸಮಯ ಎನ್ನುವುದು ನಿಮಗೆ ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ನೀಡುವಂತದ್ದು ಆಗಿದೆ.

ಮಕರ ರಾಶಿ(Capricorn)

ಮಕರ ರಾಶಿಯವರು ಈ ಸಂದರ್ಭದಲ್ಲಿ ಸಾಕಷ್ಟು ಭೌತಿಕ ಸುಖಗಳನ್ನು ಪಡೆದುಕೊಳ್ಳಲಿದ್ದಾರೆ. ಮಾಡುವಂತ ಪ್ರತಿಯೊಂದು ಕೆಲಸಗಳಲ್ಲಿ ಕಾಲಿಡುವಂತಹ ಪ್ರತಿಯೊಂದು ಕ್ಷೇತ್ರಗಳಲ್ಲಿ ಯಶಸ್ಸನ್ನೇ ಪಡೆದುಕೊಳ್ಳಲಿದ್ದಾರೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡು ಬರಲಿದೆ ಹಾಗೂ ಕೆಲಸದಲ್ಲಿ ಕೂಡ ನಿಮಗೆ ಪ್ರಮೋಷನ್ ಹಾಗೂ ಸಂಬಳ ಹೆಚ್ಚಳಗಳಂತಹ ಖುಷಿ ಕೊಡುವಂತಹ ವಿಚಾರಗಳನ್ನು ಕಳೆದುಕೊಳ್ಳುವಿರಿ. ಅನಿರೀಕ್ಷಿತವಾಗಿ ನಿಮ್ಮ ಜೀವನದಲ್ಲಿ ಧನ ಲಾಭ ಉಂಟಾಗಲಿದ್ದು ಇದು ನಿಮ್ಮ ಸಂತೋಷವನ್ನು ಇನ್ನಷ್ಟು ಹೆಚ್ಚಿಸಲಿದೆ. ಕುಟುಂಬದಲ್ಲಿ ನಿಮಗಿರುವಂತಹ ಜವಾಬ್ದಾರಿಗಳು ನಿಮ್ಮಿಂದ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ನಿಮ್ಮನ್ನು ನೀವು ಕೆಲಸದಲ್ಲಿ ಇನ್ನಷ್ಟು ಹೆಚ್ಚಾಗಿ ತೊಡಗಿಸಿಕೊಳ್ಳಿ ಖಂಡಿತವಾಗಿ ಜೀವನದಲ್ಲಿ ಅದರಲ್ಲೂ ವಿಶೇಷವಾಗಿ ಉದ್ಯೋಗ ಕ್ಷೇತ್ರದಲ್ಲಿ ಎಲ್ಲರಿಗಿಂತ ಉನ್ನತ ಸ್ಥಾನವನ್ನು ಪಡೆಯಲಿದ್ದೀರಿ.

ಕುಂಭ ರಾಶಿ(Aquarius)

ಕುಂಭ ರಾಶಿಯವರು ಈ ಸಂದರ್ಭದಲ್ಲಿ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸವಾಲುಗಳು ಅಥವಾ ಚಾಲೆಂಜ್ ಗಳು ಬಂದರೂ ಕೂಡ ಅವುಗಳನ್ನು ಮೆಟ್ಟಿನಿಂತು ಗೆಲುವನ್ನು ಸಾಧಿಸುತ್ತಾರೆ. ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಅದೃಷ್ಟಲಕ್ಷ್ಮಿಯ ಬೆಂಬಲ ಅವರಿಗೆ ಇರಲಿದೆ. ನೀವು ಮಾಡುವಂತಹ ಕಠಿಣ ಪರಿಶ್ರಮಕ್ಕೆ ತಪ್ಪದೆ ಪ್ರತಿಫಲ ದೊರಕುವುದರಲ್ಲಿ ಯಾವುದೇ ಅನುಮಾನವಿಲ್ಲ. ವ್ಯಾಪಾರ ಕ್ಷೇತ್ರದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದ ಲಾಭ ಉಂಟಾಗಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದ್ದು ಇದರಿಂದಾಗಿ ನಿಮಗೆ ಪುಣ್ಯ ಪ್ರತಿಪಾದನೆ ಸಿಗಲಿದೆ. ಈ ಸಂದರ್ಭದಲ್ಲಿ ಗಜಲಕ್ಷ್ಮಿರಾಜ ಯೋಗ ಎನ್ನುವುದು ಕುಂಭ ರಾಶಿಯವರ ಸಾಕಷ್ಟು ಜೀವನದ ನಿರ್ಧಾರಗಳಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುವಂತಹ ಕೆಲಸವನ್ನು ಮಾಡುತ್ತದೆ. ಲಕ್ಷ್ಮಿ ಆಶೀರ್ವಾದದಿಂದಾಗಿ ಜೀವನದಲ್ಲಿ ಹಣ ಮಾತ್ರವಲ್ಲದೆ ನೆಮ್ಮದಿ ಕೂಡ ನಿಮ್ಮದಾಗಲಿದೆ.

Comments are closed.