Tractor: ಇನ್ಮುಂದೆ ಟ್ರ್ಯಾಕ್ಟರ್ ಖರೀದಿ ಮಾಡೋದಕ್ಕೆ ರೈತರು ಕಷ್ಟ ಪಡಬೇಕಾಗಿಲ್ಲ; ಸರ್ಕಾರದಿಂದ ಬಂತು ನೋಡಿ ಗುಡ್ ನ್ಯೂಸ್!

Tractor: ಭಾರತದ ಬೆನ್ನೆಲುಬು ಆಗಿರುವಂತಹ ಕೃಷಿ ಕ್ಷೇತ್ರವನ್ನು ಇನ್ನಷ್ಟು ಅಡ್ವಾನ್ಸ್ ತಂತ್ರಜ್ಞಾನದ ಜೊತೆಗೆ ಮುಂದುವರಿಸಬೇಕು ಅಂದ್ರೆ ರೈತರಿಗೆ ಕೆಲವೊಂದು ಯೋಜನೆಗಳನ್ನು ನೀಡುವ ಮೂಲಕ ಅವರನ್ನು ಸಶಕ್ತ ಗೊಳಿಸಬೇಕಾಗಿರುತ್ತದೆ. ಇದೇ ಕಾರಣಕ್ಕಾಗಿ ರೈತರಿಗೆ ಕೃಷಿ ಉಪಕರಣಕ್ಕಾಗಿ ಹಣದ ಬಗ್ಗೆ ವಿಚಾರ ಮಾಡಬೇಕಾದ ಪ್ರಮೇಯ ಇನ್ಮುಂದೆ ಬರುವುದಿಲ್ಲ ಯಾಕೆಂದರೆ ಅಂತಹ ಯೋಜನೆಯ ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಪ್ರಧಾನ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ

ಟ್ರ್ಯಾಕ್ಟರ್ ಖರೀದಿ ಮಾಡೋದಕ್ಕೆ ರೈತರಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ. ಆ ಸಂದರ್ಭದಲ್ಲಿ ಹಣ ಇರೋದಿಲ್ಲ ಹಾಗೂ ಸಾಲವನ್ನು ಕೂಡ ಅಷ್ಟೊಂದು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ ಅನ್ನೋದು ರೈತರಿಗೆ ತಿಳಿದಿರುವಂತಹ ವಿಚಾರವಾಗಿದೆ. ಇದನ್ನು ಪರಿಗಣನೆಗೆ ತೆಗೆದುಕೊಂಡು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಟ್ರ್ಯಾಕ್ಟರ್ ಯೋಜನೆಯ ಜಾರಿಗೆ ತಂದಿದೆ. ಟ್ರ್ಯಾಕ್ಟರ್ ಖರೀದಿ ಮಾಡುವ ಸಂದರ್ಭದಲ್ಲಿ ನಮ್ಮ ಭಾರತ ದೇಶದ ರೈತರಿಗೆ 50 ಪ್ರತಿಶತ ರಿಯಾಯಿತಿ ಸಿಗಲಿದೆ. ರೈತರು ಟ್ರಾಕ್ಟರ್ ಖರೀದಿ ಮಾಡುವ ಸಂದರ್ಭದಲ್ಲಿ ಕೇವಲ ಆ ಟ್ರ್ಯಾಕ್ಟರ್ ನ ಬೆಲೆಯ ಅರ್ಧ ಹಣವನ್ನು ಮಾತ್ರ ನೀಡಿದರೆ ಸಾಕು. ಉಳಿದ ಅರ್ಧ ಹಣವನ್ನು ಸರ್ಕಾರವೇ ಟ್ರ್ಯಾಕ್ಟರ್ ಗೆ ನೀಡುತ್ತದೆ.

ನಿಯಮ ಹಾಗೂ ಟ್ರ್ಯಾಕ್ಟರ್ ಖರೀದಿಗೆ ಬೇಕಾಗಿರುವ ಡಾಕ್ಯುಮೆಂಟ್

ಪ್ರಧಾನ ಮಂತ್ರಿ ಟ್ರ್ಯಾಕ್ಟರ್ ಯೋಜನೆಯಲ್ಲಿ ನೀವು 50 ಪ್ರತಿಶತ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಬೇಕು ಎನ್ನುವಂತಹ ಆಸೆ ಇದ್ರೆ ಪ್ರಮುಖವಾಗಿ ನೀವು ಭಾರತೀಯ ರೈತರಾಗಿರಬೇಕು. 18 ರಿಂದ 60 ವರ್ಷದ ನಡುವೆ ಇರುವಂತಹ ರೈತರಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡುವಂತಹ ಅವಕಾಶ ಸಿಗುತ್ತೆ. ಕೃಷಿ ಮಾಡುವಂತಹ ರೈತರ ಕೃಷಿ ಭೂಮಿ ಅವರ ಹೆಸರಿನಲ್ಲಿ ಇರಬೇಕಾಗಿರುತ್ತದೆ.

ಇನ್ನು ಬೇಕಾಗಿರುವ ಡಾಕ್ಯುಮೆಂಟ್ಗಳ ಬಗ್ಗೆ ಮಾತನಾಡುವುದಾದರೆ,

  • ಪ್ರಮುಖವಾಗಿ ಆಧಾರ್ ಕಾರ್ಡ್ ಜೊತೆಗೆ ನಿಮ್ಮ ಬ್ಯಾಂಕ್ ಡಿಟೇಲ್ಸ್ ಸ್ಪಷ್ಟಪಡಿಸುವಂತಹ ಬ್ಯಾಂಕ್ ದಾಖಲೆಗಳು ಇರಬೇಕು.
  • ಪ್ಯಾನ್ ಕಾರ್ಡ್ ಹಾಗೂ ವೋಟರ್ ಐಡಿ ನೀಡಬೇಕಾಗಿರುತ್ತದೆ
  • ನಿಮ್ಮ ಭೂಮಿಯ ರೆಕಾರ್ಡುಗಳು ಸೇರಿದಂತೆ ನಿಮ್ಮ ಕೃಷಿ ಭೂಮಿಗೆ ಸಂಬಂಧಪಟ್ಟಂತಹ ಕೆಲವೊಂದು ಅಗತ್ಯ ಸರ್ಕಾರಿ ದಾಖಲೆ ಪತ್ರಗಳನ್ನು ಈ ಸಂದರ್ಭದಲ್ಲಿ ಒದಗಿಸಬೇಕಾಗುತ್ತದೆ.

ಈ ಮೇಲೆ ಹೇಳಿರುವಂತಹ ದಾಖಲೆ ಪತ್ರಗಳು ಹಾಗೂ ಅರ್ಹತೆಗಳು ನಿಮಗೂ ಕೂಡ ಇದ್ದರೆ ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ನೀವು ಅರ್ಜಿಯನ್ನು ಸಲ್ಲಿಸಿ, ಅರ್ಧ ಬೆಲೆಯಲ್ಲಿ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಬಹುದಾಗಿದೆ. www.pmkisan.gov.in ಈ ಅಧಿಕೃತ ವೆಬ್ ಸೈಟ್ ಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ದೇಶದ ರೈತರಿಗೆ ಸಹಾಯ ಮಾಡುವಂತಹ ಈ ಯೋಜನೆ ನಮ್ಮ ರಾಜ್ಯ ಹಾಗೂ ದೇಶದ ಪ್ರತಿಯೊಂದು ಮೂಲೆಯ ರೈತರನ್ನು ತಲುಪ ಬೇಕಾಗಿರುತ್ತದೆ.

Comments are closed.