Rent House: ಬಾಡಿಗೆ ಮನೆ ಬೇಕಾಗಿರುವವರಿಗೆ ಗುಡ್ ನ್ಯೂಸ್; ದಿಢೀರನೆ ಇಳಿಕೆಯಾದ ಮನೆ ಬಾಡಿಗೆ!

Rent House: ತಮ್ಮ ಊರಿನಿಂದ ಹೊರಗೆ ಕೆಲಸ ಆಯ್ತು ಅಂದ್ರೆ ಪ್ರತಿಯೊಬ್ಬರೂ ಕೂಡ ಆ ಊರಿಗೆ ಹೋದಾಗ ಮಾಡೋ ಮೊದಲನೇ ಕೆಲಸ ಇರೋದಕ್ಕೆ ಬಾಡಿಗೆ ಮನೆನ ಹುಡುಕೋದು. ಸಾಕಷ್ಟು ಬಾರಿ ಬ್ಯಾಚುಲರ್ಗಳಿಗೆ ಬೇರೆ ಕಡೆ ಹೋದಾಗ ಮನೆ ಬಾಡಿಗೆ ಸಿಗೋದಿಲ್ಲ ಸಿಕ್ಕರೆ ಕಡಿಮೆ ಬೆಲೆಗೆ ಸಿಗುವುದಿಲ್ಲ. ಆದರೆ ಇನ್ಮುಂದೆ ಕೆಲಸಕ್ಕಾಗಿ ಬೇರೆ ಊರಿಗೆ ಹೋಗುವಂತಹ ಯುವಜನತೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕಂದ್ರೆ ಕಡಿಮೆ ಬೆಲೆಯಲ್ಲಿ ಬಾಡಿಗೆ ಮನೆಗಳು ಸಿಗುತ್ತವೆ.

ಕಡಿಮೆ ಬಾಡಿಗೆಗೆ ಮನೆಗಳು ಸಿಗುತ್ತವೆ!

ಸಾಕಷ್ಟು ಬಾರಿ ಪ್ರಮುಖವಾಗಿ ಕೆಲಸ ಸಿಕ್ಕೋದೇ ನಮ್ಮ ಕರ್ನಾಟಕ ರಾಜ್ಯದ ರಾಜಧಾನಿ ಹಾಗೂ ಐಟಿ ಹಬ್ ಆಗಿರುವಂತಹ ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ಮೊದಲ ನಿಮಗೆಲ್ಲ ಗೊತ್ತಿರೋ ಹಾಗೆ ಲಾಕ್ಡೌನ್ ಟೈಮಲ್ಲಿ ರೂಮ್ಗಳಿಗೆ ಬಾಡಿಗೆ ಕಡಿಮೆಯಾಗಿತ್ತು. ಆ ಸಂದರ್ಭದಲ್ಲಿ ಅಡ್ವಾನ್ಸ್ ಹಣವನ್ನು ಪಡೆದುಕೊಳ್ಳುವಂತಹ ಮೊತ್ತ ಕೂಡ ಕಡಿಮೆಯಾಗಿತ್ತು ಅನ್ನೋದನ್ನ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಸಮಯ ಸರಿಯುತ್ತಿದ್ದಂತೆ ಮತ್ತೆ ಬಾಡಿಗೆ ಮನೆಗಳಿಗೆ ಬಾಡಿಗೆ ಬೆಂಗಳೂರಿನಲ್ಲಿ ಹೆಚ್ಚಾಗಿ ತೊಡಗಿದವು. ಅಡ್ವಾನ್ಸ್ ಹಣ ಕೂಡ ಹೆಚ್ಚಾಗಿ ಕೊಡಬೇಕಾಗಿತ್ತು. ಫ್ಯಾಮಿಲಿಗಾದ್ರೆ ಇದು ಸರಿ ಹೋಗುತ್ತೆ ಆದರೆ ಕೆಲಸಕ್ಕಾಗಿ ಬರುವಂತಹ ಯುವಜನತೆಗೆ ನಿಜಕ್ಕೂ ಕೂಡ ಇದು ಸಾಕಷ್ಟು ಕಷ್ಟಕರವಾಗಿ ಪರಿಣಮಿಸಲಿದೆ. ಹೀಗಾಗಿ ಕೆಲವೊಂದು ಏರಿಯಾ ಗಳಿಂದ ಜನರು ಅತಿಯಾದ ಅಡ್ವಾನ್ಸ್ ಹಾಗೂ ಬಾಡಿಗೆ ಕಾರಣದಿಂದಾಗಿ ಬಾಡಿಗೆ ಮನೆ ಬಿಟ್ಟು ಹೋಗುತ್ತಿದ್ದಾರೆ. ಅಂತವರಿಗೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಪರಿಹಾರವನ್ನು ನೀಡುವ ಹೊರಟಿದ್ದೇವೆ.

ಯಾವುದೇ ಕಂಪನಿಗಳು ಮನೆಯಲ್ಲಿ ಕುಳಿತುಕೊಂಡು ಕೆಲಸ ಮಾಡುವಂತಹ ಅವಕಾಶ ನೀಡುತ್ತಿಲ್ಲ ಹೀಗಾಗಿ ಬೆಂಗಳೂರಿನ ಆಫೀಸಿಗೆ ಬರಲೇಬೇಕಾಗುತ್ತದೆ. ಸಾಕಷ್ಟು ಕಡೆಗಳಲ್ಲಿ ಬರಗಾಲದ ಕಾರಣದಿಂದಾಗಿ ನೀರಿನ ಸಮಸ್ಯೆ ಕೂಡ ಎದ್ದು ಕಾಣುತ್ತಿದೆ. ನೀರಿನ ಸಮಸ್ಯೆ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಬಾಡಿಗೆ ಮನೆಗಳು ಹಾಗೂ ಅಪಾರ್ಟ್ಮೆಂಟ್ ಗಳು ಕೂಡ ಖಾಲಿಯಾಗುತ್ತಿವೆ. ಅಪಾರ್ಟ್ಮೆಂಟ್ ಗಳಲ್ಲಿ ಕೂಡ ನೀರಿನ ವೆಚ್ಚದ ಕಾರಣದಿಂದಾಗಿ ಐದರಿಂದ ಆರು ಸಾವಿರ ರೂಪಾಯಿಗಳ ಹೆಚ್ಚಿನ ಮೈನ್ಟೈನ್ಸ್ ಖರ್ಚನ್ನು ನೀಡಬೇಕಾಗಿರುತ್ತದೆ.

ಬಾಡಿಗೆ ಕಡಿಮೆ ಆಗಿರುವುದು ಎಲ್ಲಿ?

ಈ ಕೆಳಗಿನ ಹೇಳಲು ಹೊರಟಿರುವಂತಹ ಏರಿಯಾ ಗಳಲ್ಲಿ ಕನಿಷ್ಠಪಕ್ಷ 15 ರಿಂದ 20 ಪ್ರತಿಶತ ಬಾಡಿಗೆ ದರದಲ್ಲಿ ಇಳಿಕೆಯಾಗಿದೆ. ಫ್ರೇಝರ್ ಟೌನ್, ಟಾಕ್ಸ್ ಟೌನ್, ಲಿಂಗರಾಜಪುರ, ಇಂದಿರಾ ನಗರ, ಬಾಣಸ್ವಾಡಿ, ವೈಟ್ ಫೀಲ್ಡ್ ಗಳಂತಹ ಪ್ರದೇಶಗಳಲ್ಲಿ ಬಾಡಿಗೆ ಮನೆ ಹಾಗೂ ಅಪಾರ್ಟ್ಮೆಂಟ್ ಗಳ ದರ ಇಳಿಕೆ ಆಗಿದೆ ಎಂಬುದಾಗಿ ತಿಳಿದುಬಂದಿದೆ.

Comments are closed.