Solar: ಸೋಲಾರ್ ರೂಫ್ ಟಾಪ್ ಅಳವಡಿಕೆ ಮತ್ತಷ್ಟು ಸುಲಭ; ನಿಮ್ಮ ಮನೆ ಮೇಲೂ ಅಳ್ವಡಿಸಿಕೊಳ್ಳಿ!

Solar: ಇತ್ತೀಚಿನ ದಿನಗಳಲ್ಲಿ ಸೋಲಾರ್ ರೂಫ್ ಟಾಪ್ ಯೋಜನೆಯ ಮೂಲಕ ಮನೆಯ ಮೇಲೆ ಸೋಲಾರ್ ಪ್ಯಾನಲ್ ಅನ್ನು ಅಳವಡಿಸುವಂತಹ ಕೆಲಸ ನಡೆಯುತ್ತಿದ್ದು ಅದರಲ್ಲೂ ವಿಶೇಷವಾಗಿ ಮೈಸೂರಿನಲ್ಲಿ ಈ ರೀತಿಯ ಪ್ರಕ್ರಿಯೆಗಳನ್ನು ಹೇಗೆ ಮಾಡೋದು ಅನ್ನೋದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಯೋದಕ್ಕೆ ಹೊರಟಿದ್ದು ನೀವು ಕೂಡ ಇದರಲ್ಲಿ ಆಸಕ್ತಿ ಇದ್ದರೆ ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ ನೀವು ಕೂಡ ಪ್ರಯತ್ನಿಸಬಹುದಾಗಿದೆ.

ಸೋಲಾರ್ ರೂಫ್ ಸಿಸ್ಟಮ್ ಅನ್ನು ಅಳವಡಿಕೆ ಮಾಡುವುದು ಹೀಗೆ!

ಸೋಲಾರ್ ರೂಫ್ ಟಾಪ್ ಯೋಜನೆ ಅಡಿಯಲ್ಲಿ ನೀವು ಸೋಲಾರ್ ಸಿಸ್ಟಮ್ ಅನ್ನು ಅಳವಡಿಸುವುದಕ್ಕಿಂತ ಮುಂಚೆ ಅಲ್ಲಿಗೆ ಸಂಬಂಧಪಟ್ಟಂತಹ ಎಸ್ಕಾಂಗಳಿಂದ 25 ವರ್ಷಗಳ ಅಗ್ರಿಮೆಂಟ್ ಅನ್ನು ನೀವು ಮಾಡಿಸಿಕೊಳ್ಳಬೇಕಾಗಿರುತ್ತದೆ. ಸ್ವಂತ ಮನೆಯಲ್ಲಿ ಹಾಕಿಸಿಕೊಳ್ಳುವುದಕ್ಕೆ ಅಷ್ಟೊಂದು ಕಷ್ಟಪಡಬೇಕಾದ ಅಗತ್ಯವಿಲ್ಲ ಆದರೆ ಬಾಡಿಗೆ ಮನೆಯಲ್ಲಿ ಇದನ್ನು ಅಳವಡಿಸುವ ಸಂದರ್ಭದಲ್ಲಿ ನೀವು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಎಲ್ಲಕ್ಕಿಂತ ಪ್ರಮುಖವಾಗಿ ಈ ಸಂದರ್ಭದಲ್ಲಿ ನೀವು ಮಾಡುವಂತಹ ಹಣದ ಖರ್ಚಿನ ಬಗ್ಗೆ ಕೂಡ ಗಮನವಹಿಸಬೇಕಾಗಿರುತ್ತದೆ. ಇದಕ್ಕಾಗಿ ನೀವು ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳವರೆಗೆ ದುಬಾರಿ ವೆಚ್ಚದಲ್ಲಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಹೀಗಾಗಿ ಬಾಡಿಗೆ ಮನೆಯವರು ಇದನ್ನು ಅಳವಡಿಸಿಕೊಳ್ಳುವುದು ಸ್ವಲ್ಪಮಟ್ಟಿಗೆ ಕಷ್ಟ ಸಾಧ್ಯವೇ ಸರಿ ಎಂದು ಹೇಳಬಹುದು.

ಬಾಡಿಗೆ ಮನೆ ಇರುವವರು ಏನು ಮಾಡಬೇಕು?

ಬಾಡಿಗೆ ಮನೆಯವರಿಗಾಗಿ ಕೇವಲ 20 ರಿಂದ 30 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಿಕೊಳ್ಳುವ ಅಂತಹ ಉಪಾಯವನ್ನು ಕೂಡ ಈ ಸಂದರ್ಭದಲ್ಲಿ ನೀಡಲಾಗಿದೆ. ಈ ಮೂಲಕ ಬಾಡಿಗೆ ಮನೆಯವರು ಒಂದು ಮನೆಯನ್ನು ಬಿಟ್ಟು ಇನ್ನೊಂದು ಮನೆಗೆ ಹೋಗುವಾಗ ಅವುಗಳನ್ನು ತಮ್ಮ ಜೊತೆಗೇನೆ ತೆಗೆದುಕೊಂಡು ಹೋಗಬಹುದಾಗಿದೆ. ಮನೆಯಲ್ಲಿರುವಂತಹ ಯುಪಿಎಸ್ ಬ್ಯಾಟರಿಗಳಿಗೆ ಪ್ರೂಫ್ ಸ್ಟಾಪ್ ಮೇಲೆ ಅಳವಡಿಸುವಂತಹ ಗ್ರಿಡ್ ಮಾದರಿಯ ಸೋಲಾರ್ ಪ್ಯಾನಲ್ ಗಳನ್ನು ಕನೆಕ್ಟ್ ಮಾಡಬೇಕಾಗಿದೆ. ಈ ಸಂದರ್ಭದಲ್ಲಿ ನೀವು ನಿಮಗೆ ಸಂಬಂಧಪಟ್ಟಂತಹ ಎಸ್ಕಾಂಗಳಿಂದ ಪಡೆದುಕೊಳ್ಳುವಂತಹ ಕನೆಕ್ಷನ್ ಅನ್ನು ಕೂಡ ಕಡಿತಗೊಳಿಸಬಹುದಾಗಿದೆ.

ಸಾಮಾನ್ಯ ವಿದ್ಯುತ್ ಬಳಕೆಗಿಂತ ಸೋಲಾರ್ ರೂಫ್ ಟಾಪ್ ಪ್ಯಾನಲ್ ಅನ್ನು ಹಾಕಿಸಿಕೊಳ್ಳುವುದು ಅತ್ಯಂತ ಕಡಿಮೆ ಮೇಂಟೆನೆನ್ಸ್ ಕರ್ಚಿನಲ್ಲಿ ಕೂಡ ನಿಮಗೆ ಲಾಭದಾಯಕವಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ಒಮ್ಮೆ ಖರ್ಚು ಮಾಡಿ ಹಾಕಿಸಿದರೆ ಸಾಕು, ಸಾಮಾನ್ಯ ವಿದ್ಯುತ್ ಇಲ್ಲದೆ ಹೋದಲ್ಲಿ ಕೂಡ ನಿಮಗೆ ಉತ್ತಮ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡುವಂತಹ ಹಾಗೂ ಅಗತ್ಯ ಕೆಲಸಗಳನ್ನು ತಡೆರಹಿತ ವಿದ್ಯುತ್ ನಲ್ಲಿ ಕೂಡ ಬಳಸಿಕೊಳ್ಳಬಹುದಾಗಿದೆ. ಸೋಲಾರ್ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಪರಿಸರ ಸ್ನೇಹಿ ವಿದ್ಯುತ್ ಅನ್ನು ಕೂಡ ನೀವು ಬಳಸಿಕೊಂಡ ರೀತಿಯಲ್ಲಿ ಆಗುತ್ತದೆ. ಈ ಮೂಲಕ ಅತ್ಯಂತ ಕಡಿಮೆ ಖರ್ಚಿನಲ್ಲಿ ಪರಿಸರ ಸ್ನೇಹ ವಿದ್ಯುತ್ ಬಳಕೆಯನ್ನು ನೀವು ಮಾಡಿದಂತಾಗುತ್ತದೆ.

Comments are closed.