Inherited Property: ಪಿತ್ರಾರ್ಜಿತ ಆಸ್ತಿಯನ್ನು ನೀವು ಖರೀದಿ ಮಾಡೋಕೆ ಹೊರಟಿದ್ದೀರಾ? ಹಾಗಿದ್ದರೆ ಇದನ್ನ ತಪ್ಪದೆ ಚೆಕ್ ಮಾಡಿ.

Inherited Property: ಆಸ್ತಿಯ ವಿಚಾರಕ್ಕೆ ಬಂದ್ರೆ ಪ್ರತಿಯೊಬ್ಬರೂ ಎಷ್ಟೇ ಹುಷಾರಾಗಿದ್ದರೂ ಕೂಡ ಸಾಕಷ್ಟು ಬಾರಿ ಮೋಸ ಹೋಗುವುದನ್ನ ನಾವು ನೋಡಿರುತ್ತೇವೆ. ಯಾವುದೇ ವರ್ಗದ ಆಸ್ತಿ ಇರಲಿ ಅಥವಾ ಅದನ್ನು ಮಾರಾಟ ಮಾಡುವುದಿರಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಕರಣಗಳಲ್ಲಿ ಮೋಸದಾಟಗಳು ಹೆಚ್ಚಾಗಿ ಕಂಡುಬರುತ್ತಿವೆ. ಹೀಗಾಗಿ ವಿಶೇಷವಾಗಿ ಆಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ ಕೆಲವೊಂದು ಪ್ರಮುಖ ವಿಚಾರಗಳನ್ನು ನೀವು ಗಮನಿಸಬೇಕಾಗುತ್ತದೆ. ಸ್ವಲ್ಪಮಟ್ಟಿಗೆ ಇದರಲ್ಲಿ ಯಾಮಾರಿದ್ರೂ ಕೂಡ ಖಂಡಿತವಾಗಿ ನೀವು ಸಾಕಷ್ಟು ದೊಡ್ಡ ಮಟ್ಟದ ಹಣದ ನಷ್ಟವನ್ನು ಕಂಡುಕೊಳ್ಳಬೇಕಾಗುತ್ತದೆ ಅನ್ನೋದು ಎಚ್ಚರಿಕೆಯಿಂದ ನೆನಪಿರಲಿ. ಹಾಗಿದ್ರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಪಿತ್ರಾರ್ಜಿತ ಆಸ್ತಿಯನ್ನು ಖರೀದಿಸುವಾಗ ಈ ವಿಚಾರದ ಬಗ್ಗೆ ಗಮನ ಇರಲಿ!

ಪಿತ್ರಾರ್ಜಿತ ಆಸ್ತಿ ಅಂದ್ರೆ ವಂಶ ಪಾರಂಪರಿಕವಾಗಿ ಒಬ್ಬರ ಆಸ್ತಿ ಅವರ ಮಕ್ಕಳಿಂದ ಮಕ್ಕಳಿಗೆ ವರ್ಗಾವಣೆ ಆಗುವಂತಹ ಕ್ರಮವಾಗಿದೆ ಎಂಬುದನ್ನ ಒಂದೇ ವಾಕ್ಯದಲ್ಲಿ ಹೇಳಬಹುದಾಗಿದೆ. ಇನ್ನು ಇಂತಹ ಆಸ್ತಿಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಕೂಡ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಹೊಂದಿರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಪಿತ್ರಾರ್ಜಿತ ಆಸ್ತಿಯನ್ನು ಒಂದು ತಾಲೂಕು ನಿಂದ ಇನ್ನೊಂದು ಸಲ ಮಾರಿಗೆ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಕೂಡ ಕೆಲವೊಂದು ಪ್ರಮುಖ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಅಗತ್ಯವಾಗಿರುತ್ತದೆ.

ಈ ದಾಖಲೆಗಳನ್ನು ಪ್ರಮುಖವಾಗಿ ಪರಿಶೀಲಿಸಿ!

ಒಂದು ಆಸ್ತಿ ಪಿತ್ರಾರ್ಜಿತ ಆಸ್ತಿ ಆಗಿರುವ ಸಂದರ್ಭದಲ್ಲಿ ಅದನ್ನು ಮಾರಾಟ ಮಾಡುವಂತಹ ಹಕ್ಕು ಇದ್ಯೋ ಇಲ್ವೋ ಅನ್ನೋದನ್ನ ನೀವು ಕೆಲವೊಂದು ಪ್ರಮುಖ ದಾಖಲೆಗಳನ್ನು ಗಮನಿಸುವ ಮೂಲಕ ಅರ್ಥಮಾಡಿಕೊಳ್ಳಬಹುದಾಗಿದೆ. ಅವುಗಳ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ ಬನ್ನಿ.

  • ಖರೀದಿಸಿರುವಂತಹ ಪಿತ್ರಾರ್ಜಿತ ಆಸ್ತಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ವಿವಾದಗಳನ್ನು ತನ್ನ ಮೈಮೇಲೆ ಎಳೆದುಕೊಂಡರು ಕೂಡ ಅದನ್ನ ಖರೀದಿಸಿದವರಿಗೆ ಈ ವಿಚಾರವನ್ನು ಬಗೆಹರಿಸುವುದಕ್ಕೆ ಮಾರಾಟಗಾರರು ಸಿದ್ದರಾಗಿರಬೇಕು ಅನ್ನೋದನ್ನ ಖಾತ್ರಿಪಡಿಸಿಕೊಳ್ಳಿ.
  • ಆಸ್ತಿ ಖರೀದಿಸುವುದಕ್ಕಿಂತ ಮುಂಚೆ ಆಸ್ತಿಯ ಮೇಲೆ ಯಾರಿಗೆಲ್ಲ ಹಕ್ಕಿದೆ ಅನ್ನೋದನ್ನ ಪ್ರಮಾಣ ಪತ್ರದ ಮೂಲಕ ಕೇಳಿ ಪಡೆದುಕೊಳ್ಳಿ. ಇನ್ನು ಆಸ್ತಿಯ ಮೂಲ ಪತ್ರವನ್ನು ಪ್ರಮುಖವಾಗಿ ಕೇಳಿ ಪಡೆದುಕೊಳ್ಳಿ ಹಾಗೂ ಅದರ ಮೇಲೆ ಸಾಲವನ್ನು ಒಂದು ವೇಳೆ ಪಡೆದುಕೊಂಡಿದ್ದರೆ ಅಥವಾ ಪಡೆದುಕೊಂಡು ತೀರಿಸಿದ್ದಾರೋ ಇಲ್ಲವೋ ಅನ್ನುವಂತಹ ಮಾಹಿತಿ ನಿಮಗೆ ಖಚಿತ ಪಡಿಸಿಕೊಳ್ಳಿ.
  • ಎಲ್ಲದಕ್ಕಿಂತ ಪ್ರಮುಖವಾಗಿ ಯಾರು ನಿಮಗೆ ಈ ಜಮೀನನ್ನು ಅಥವಾ ಪ್ರಾಪರ್ಟಿಯನ್ನು ಮಾರಾಟ ಮಾಡುತ್ತಿದ್ದಾರೋ ಅವರ ಹೆಸರಿಗೆ ಹಕ್ಕು ಪತ್ರವನ್ನು ಬರೆಸಲಾಗಿದೆಯೋ ಇಲ್ಲವೋ ಅನ್ನೋದನ್ನ ಪ್ರಮುಖವಾಗಿ ಕೇಳಿ ಪಡೆದುಕೊಂಡು ಕನ್ಫರ್ಮ್ ಮಾಡಿಕೊಳ್ಳಿ.

ಪಿತ್ರಾರ್ಜಿತ ಆಸ್ತಿಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಇವಿಷ್ಟು ವಿಚಾರಗಳನ್ನು ಪ್ರಮುಖವಾಗಿ ನೀವು ಖರೀದಿಸುವುದಕ್ಕಿಂತ ಮುಂಚೆ ಕನ್ಫರ್ಮ್ ಮಾಡಿಕೊಳ್ಳಿ. ನಂತರ ಒಮ್ಮೆ ಖರೀದಿಸಿದ ಮೇಲೆ ಅದರಿಂದ ಉಂಟಾಗುವಂತಹ ವಿವಾದಗಳಿಂದ ನೀವು ಸಾಕಷ್ಟು ಕಡೆ ಓಡಾಡಬೇಕಾಗಿ ಬರಬಹುದು ಹಾಗೂ ಆರ್ಥಿಕ ಸಮಸ್ಯೆಯನ್ನು ಕೂಡ ಅದು ತಂದು ಕೊಡಬಹುದು.

Comments are closed.