Rent House Rules: ಬಾಡಿಗೆಗೆ ಮನೆ ಕೊಟ್ಟು ಹಣ ಗಳಿಸುತ್ತಿದ್ದೀರಾ? ಹಾಗಾದ್ರೆ ಜಾರಿಗೆ ಬಂದ ಈ ಹೊಸ ರೂಲ್ಸ್ ತಿಳ್ಕೊಳ್ಳಲೇಬೇಕು !

Rent House Rules: ನಮ್ಮಲ್ಲಿ ಬೇರೆ ಬೇರೆ ರೀತಿಯ ವ್ಯಾಪಾರ ಕೆಲಸಗಳನ್ನು ಮಾಡಿಕೊಂಡು ಆದಾಯ ಗಳಿಸುವವರಿದ್ದಾರೆ. ಅವರಲ್ಲಿ ಮನೆಯನ್ನು ಕಟ್ಟಿ ಅದನ್ನ ಬಾಡಿಗೆಗೆ ನೀಡಿ ಆದಾಯವನ್ನು ಅಂದರೆ ಬಾಡಿಗೆ ಹಣವನ್ನು ಪಡೆದುಕೊಳ್ಳುವಂತಹ ವರ್ಗದ ಜನರು ಕೂಡ ಇದ್ದಾರೆ. ಈ ರೀತಿ ಪಡೆದುಕೊಳ್ಳುವಂತಹ ಆದಾಯ ಇನ್ಕಮ್ ಟ್ಯಾಕ್ಸ್ ವ್ಯಾಪ್ತಿಯ ಅಡಿಯಲ್ಲಿ ಬರುತ್ತದಾ ಇಲ್ವಾ ಅನ್ನೋದನ್ನ ತಿಳಿದುಕೊಳ್ಳಬೇಕಾಗಿರುವುದು ಕೂಡ ಪ್ರಮುಖವಾಗಿರುತ್ತದೆ. ಹಾಗಿದ್ರೆ ಬನ್ನಿ ಇವತ್ತಿನ ಲೇಖನದ ಅಡಿಯಲ್ಲಿ ನಾವು ಬಾಡಿಗೆ ಮನೆಯಿಂದ ಪಡೆದುಕೊಳ್ಳುವಂತಹ ಆದಾಯದ ಮೇಲೆ ಇರುವ ಟ್ಯಾಕ್ಸ್ ನಿಯಮಗಳು ಏನು ಅನ್ನೋದನ್ನ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಮನೆ ಬಾಡಿಗೆಯ ಟ್ಯಾಕ್ಸ್ ನಿಯಮಗಳು!

ಬಾಡಿದಾರರು ರೆಂಟ್ ಕಟ್ಟುವ ಸಂದರ್ಭದಲ್ಲಿ ಕಟ್ಟುವಂತಹ ಹಣದ ಮೇಲೆ 30% ಟ್ಯಾಕ್ಸ್ ರಿಯಾಯಿತಿಯನ್ನು ಪಡೆದುಕೊಳ್ಳುತ್ತಾರೆ. ಉದಾಹರಣೆಗೆ ವಾರ್ಷಿಕವಾಗಿ ನೀವು 10 ಲಕ್ಷ ರೂಪಾಯಿಗಳನ್ನು ಬಾಡಿಗೆ ರೂಪದಲ್ಲಿ ಕಟ್ತಾ ಇದ್ರೆ 3 ಲಕ್ಷ ರೂಪಾಯಿಗಳ ಟ್ಯಾಕ್ಸ್ ಅನ್ನು ಕಟ್ಟಬೇಕಾದ ಅಗತ್ಯವಿಲ್ಲ ಕೇವಲ 7 ಲಕ್ಷ ಕಟ್ಟಿದ್ರೆ ಮಾತ್ರ ಸಾಕು ಎಂದು ಸುಲಭ ರೂಪದಲ್ಲಿ ತಿಳಿದುಕೊಳ್ಳಬಹುದು. ಇದು ಬಾಡಿಗೆ ಮನೆಯ ಮೇಲೆ ಸಿಗುವಂತಹ ರೆಂಟ್ ನ ಮೇಲೆ ಇರುವಂತಹ ಟ್ಯಾಕ್ಸ್ ನಿಯಮಗಳಾಗಿವೆ.

House renovation!

ಒಂದು ವೇಳೆ ಬಾಡಿಗೆದಾರರು ಇರುವ ಸಂದರ್ಭದಲ್ಲಿ ನಿಮ್ಮ ಬಾಡಿಗೆ ಮನೆಯ ನವೀಕರಣವನ್ನು ಮಾಡುವುದಕ್ಕೆ ನೀವು ಸ್ವಲ್ಪ ಮಟ್ಟಿಗೆ ಹಣವನ್ನು ಖರ್ಚು ಮಾಡಿದ್ದೀರಿ ಎಂಬುದಾಗಿ ಭಾವಿಸಿ. ಆ ಸಂದರ್ಭದಲ್ಲಿ ಟ್ಯಾಕ್ಸ್ ಮೇಲೆ ರಿಯಾಯಿತಿ ಸಿಗುತ್ತಾ ಎಂಬುದಾಗಿ ನೀವು ಭಾವಿಸಿದರೆ ಸಿಗೋದಿಲ್ಲ ಅನ್ನೋದನ್ನ ನೀವು ಉತ್ತರ ರೂಪದಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಈ ರೀತಿಯಾಗಿ ಖರ್ಚುಗಳು 30% ಗಿಂತ ಹೆಚ್ಚಾಗಿ ಆಗಿದ್ದರೆ ಆ ಸಂದರ್ಭದಲ್ಲಿ ನೀವು ಟ್ಯಾಕ್ಸ್ ಬೆನಿಫಿಟ್ ಅನ್ನು ಯಾವುದೇ ರೀತಿಯಲ್ಲೂ ಕೂಡ ನಿರೀಕ್ಷೆ ಮಾಡುವ ಹಾಗಿಲ್ಲ. ಆದರೆ ಇದೇ ಬಾಡಿಗೆ ಮನೆಯನ್ನು ನೀವು ಒಂದು ವೇಳೆ ಮಾರಾಟ ಮಾಡುವುದಕ್ಕೆ ಹೊರಟ್ರೆ ಆ ಸಂದರ್ಭದಲ್ಲಿ ಇದನ್ನ capital gains tax ವಿಭಾಗದ ಅಡಿಯಲ್ಲಿ ಸೇರಿಸಿ ಹಣವನ್ನು ಅದರ ಮೇಲೆ ಪಡೆದುಕೊಳ್ಳಬಹುದಾಗಿದೆ.

ಉದಾಹರಣೆ ರೂಪದಲ್ಲಿ ಹೇಳುವುದಾದರೆ ಒಂದು ವೇಳೆ ನೀವು ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಮನೆಯನ್ನು ಕಟ್ಟಿ, ನಂತರ ಅದನ್ನು 20 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಮನೆಯನ್ನ ರೆನೋವೇಷನ್ ಮಾಡಿದ್ರೆ 20 ಲಕ್ಷ ರೂಪಾಯಿಗಳನ್ನು ಬಾಡಿಗೆ ರೂಪದಲ್ಲಿ ಬಾಡಿಗೆದಾರರ ಮೂಲಕ ಹಣವನ್ನು ನೀವು ಮರಳಿ ಪಡೆಯುವ ಹಾಗಿಲ್ಲ ಬದಲಾಗಿ, ಒಂದು ವೇಳೆ ನೀವು ಈ ಮನೆಯನ್ನು ಸ್ವಲ್ಪ ವರ್ಷಗಳ ನಂತರ ಎರಡು ಕೋಟಿ ರೂಪಾಯಿ ಹಣಕ್ಕೆ ಮಾರಾಟ ಮಾಡುವುದಕ್ಕೆ ಮುಂದಾದರೆ ಆ ಸಂದರ್ಭದಲ್ಲಿ ಆ 20 ಲಕ್ಷ ರೂಪಾಯಿ ನವೀಕರಣ ಮಾಡಿರುವಂತಹ ಖರ್ಚನ್ನ ನೀವು acquisition cost ಎಂದು ತೋರಿಸಿ ಅದರ ಮೇಲೆ ನೀವು ತೆರಿಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಪ್ರಾಪರ್ಟಿ ಕಾನೂನು ನಿಯಮಗಳು ತಿಳಿಸುತ್ತವೆ.

Comments are closed.