Pension Scheme: ಪೆನ್ಷನ್ ಪಡೆದುಕೊಳ್ಳುತ್ತಿರುವವರಿಗೆ ಸರ್ಕಾರದಿಂದ ಹೊಸ ಘೋಷಣೆ; ಹೊಸ ಲಿಸ್ಟ್ ಬಿಡುಗಡೆ!

Pension Scheme: ಯಾರಾದರೂ ವ್ಯಕ್ತಿ ಸರ್ಕಾರಿ ಹಾಗೂ ಖಾಸಗಿ ನೌಕರಿಗಳಲ್ಲಿ ಯಾವುದು ಬೆಸ್ಟ್ ಎಂಬುದಾಗಿ ಕೇಳಿದರೆ ಪ್ರತಿಯೊಬ್ಬರೂ ಹೇಳುವಂತಹ ಉತ್ತರ ಖಂಡಿತವಾಗಿ ಸರ್ಕಾರಿ ನೌಕಾರಿಯಂಬುದಾಗಿದೆ.. ಯಾಕೆಂದ್ರೆ ಸರ್ಕಾರಿ ನೌಕರಿಯಲ್ಲಿ ಸೆಕ್ಯೂರಿಟಿ ಹೆಚ್ಚು. ಕೆಲಸದ ಸಂದರ್ಭದಲ್ಲಿ ಮಾತ್ರವಲ್ಲದೆ ಕೆಲಸದ ನಂತರ ಪಿಂಚಣಿಯನ್ನು ಪಡೆದುಕೊಳ್ಳುವ ವಿಚಾರದಲ್ಲಿ ಕೂಡ ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ಆರ್ಥಿಕ ಸಹಾಯವನ್ನು ಒದಗಿಸುವ ಕೆಲಸವನ್ನು ಮಾಡಲಾಗುತ್ತದೆ. ಇನ್ನು ಪಿಂಚಣಿ ವಿಚಾರದಲ್ಲಿ ಕೂಡ ಇತ್ತೀಚಿಗೆ ಸರ್ಕಾರ ಹಾಗೂ ನಿವೃತ್ತಿ ಹೊಂದಿರುವವರ ನಡುವೆ ಜಗಳ ಪ್ರಾರಂಭವಾಗಿತ್ತು. 2006ರ ಬಳಿಕ ನೇಮಕವಾಗಿರುವಂತಹ ಸರ್ಕಾರಿ ನೌಕರರಿಗೆ ಬೇರೆ ರೀತಿಯ ಹೊಸ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು ಇದನ್ನು ತೆಗೆದುಹಾಕಿ ಮತ್ತೆ ಹಳೆಯ ವ್ಯವಸ್ಥೆಯನ್ನು ಜಾರಿಗೆ ತನ್ನಿ ಎಂಬುದಾಗಿ ರಾಜ್ಯ ಸರ್ಕಾರ ಹಾಗೂ ಸರ್ಕಾರಿ ನೌಕರರ ನಡುವೆ ಮಾತಿನ ಚಕಮಕಿ ಪ್ರಾರಂಭವಾಗಿದೆ.

ಪೆನ್ಷನ್ ಯೋಜನೆಯಲ್ಲಿ ಸರ್ಕಾರದ ಆದೇಶ!

ರಾಜ್ಯ ಸರ್ಕಾರ ಕೂಡ ಕೇವಲ ಒಂದು ಬಾರಿ ಮಾತ್ರ ಹೊಸ ಪಿಂಚಣಿ ಯೋಜನೆಯಿಂದ ಹಳೆಯ ಪೆನ್ಷನ್ ಯೋಜನೆಗೆ ವರ್ಗಾವಣೆ ಆಗುವಂತಹ ಅವಕಾಶವನ್ನ ನೌಕರರಿಗೆ ನೀಡಲಾಗಿದೆ. ಇದಕ್ಕೆ ಅರ್ಜಿ ಸಲ್ಲಿಸುವ ಮೂಲಕ ಈ ಕೆಲಸವನ್ನು ಅವರು ಮಾಡಬಹುದಾಗಿದೆ.

ಒಂದು ವೇಳೆ ಹಳೆಯ ಪಿಂಚಣಿ ಯೋಜನೆಯನ್ನು ಬೇಕು ಅಂತ ನಿವೃತ್ತಿಯಾಗಿರುವಂತಹ ಸರ್ಕಾರಿ ನೌಕರರು ತೀರ್ಮಾನ ಮಾಡಿದರೆ ಜೂನ್ 30ರ ಒಳಗೆ ಹಳೆಯ ಪಿಂಚಣಿ ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸ ಬೇಕಾಗಿರುತ್ತದೆ. ಒಂದು ವೇಳೆ ಅರ್ಜಿಯನ್ನು ಸಲ್ಲಿಸದೆ ಹೋದರೆ ನ್ಯಾಷನಲ್ ಪೆನ್ಷನ್ ಯೋಜನೆಯಲಿ ಅಂದರೆ ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಮುಂದುವರಿಯಬೇಕಾಗುತ್ತದೆ. 2006ರ ಏಪ್ರಿಲ್ ಒಂದರ ನಂತರ ಸಹಕಾರಿ ಕೆಲಸಕ್ಕೆ ಆಯ್ಕೆಯಾಗಿರುವಂತಹ ಅಭ್ಯರ್ಥಿಗಳು ಈ ಕೆಲಸವನ್ನು ಮಾಡಬಹುದಾಗಿದ್ದು ಜೂನ್ 30ರ ಒಳಗೆ ಅರ್ಜಿ ಸಲ್ಲಿಸುವಂತಹ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಈ ಮಾಹಿತಿ ಕಡ್ಡಾಯ ಬೇಕು!

  • ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಸರ್ಕಾರಿ ಕೆಲಸ ಪ್ರಾರಂಭ ಆಗಿರುವಂತಹ ದಿನಾಂಕದ ಅಧಿಕೃತ ಸರ್ಟಿಫಿಕೇಟ್ ಅಥವಾ ಪತ್ರವನ್ನು ನೀವು ನೀಡುವಂತಹ ಅರ್ಜಿ ಪತ್ರಕ್ಕೆ ಲಗತ್ತಿಸಬೇಕಾಗಿದೆ.
  • ಇಲಾಖೆಯಲ್ಲಿ ನೇಮಕಾತಿಯಿಂದ ಯಾವುದಾದರೂ ಬದಲಾವಣೆ ಆಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಅದರ ಬಗ್ಗೆ ಕೂಡ ಮಾಹಿತಿಯನ್ನು ಮೊದಲಿಗೆ ತಿಳಿದುಕೊಳ್ಳ ಬೇಕು.
  • KGID ನಂಬರ್ ಹಾಗೂ NPS PRAN ಸಂಖ್ಯೆಯನ್ನು ಕೂಡ ನೀವು ಈ ಸಂದರ್ಭದಲ್ಲಿ ತಿಳಿಸಬೇಕಾಗಿರುತ್ತದೆ. ಇದರ ಜೊತೆಗೆ ನಿಮ್ಮ ಸಿಗ್ನೇಚರ್ ಮತ್ತು ಹೆಸರನ್ನು ಕೂಡ ನಮೂದಿಸಬೇಕಾಗಿದೆ.

ಈ ಮೂಲಕ ನ್ಯಾಷನಲ್ ಪೆನ್ಶನ್ ಸ್ಕೀಮ್ ನಿಂದ ಹಳೆಯ ಪಿಂಚಣಿ ವ್ಯವಸ್ಥೆಗೆ ವರ್ಗಾವಣೆ ಆಗಬೇಕಾಗಿರುವ ನಿವೃತ್ತ ಸರ್ಕಾರಿ ನೌಕರರು ಪ್ರಕ್ರಿಯೆಗಳನ್ನು ಪಾಲಿಸುವ ಮೂಲಕ ತಮ್ಮ ಹಳೆಯ ಪಿಂಚಣಿ ವ್ಯವಸ್ಥೆಗೆ ಮರಳಬಹುದಾಗಿದೆ.

Comments are closed.