Chaya Singh: ಅಮೃತಧಾರೆ ಧಾರವಾಹಿಯ ಛಾಯಾಸಿಂಗ್ ರವರ ಎಜುಕೇಶನ್ ಸೇರಿದಂತೆ ಫ್ಯಾಮಿಲಿ ಬ್ಯಾಗ್ರೌಂಡ್ ಏನು ಎನ್ನುವ ಮಾಹಿತಿ ಇಲ್ಲಿದೆ ನೋಡಿ!

Chaya Singh: ಇತ್ತೀಚಿನ ದಿನಗಳಲ್ಲಿ ಅಮೃತಧಾರೆ ಧಾರವಾಹಿಯ ಮೂಲಕ ಜಿ ಕನ್ನಡ ವಾಹಿನಿಯ ಪ್ರೇಕ್ಷಕರ ಮನಸ್ಸನ್ನು ಸೆಳೆಯುವುದಕ್ಕೆ ಸಿನಿಮಾ ಹಾಗೂ ಕಿರುತೆರೆಯ ನಟಿಯಾಗಿರುವಂತಹ ಛಾಯಾಸಿಂಗ್ ರವರು ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಸಿನಿಮಾ ರಂಗದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದ ಇವರು ಸಾಕಷ್ಟು ವರ್ಷಗಳ ನಂತರ ಕಂಬ್ಯಾಕ್ ಮಾಡುತ್ತಿದ್ದಾರೆ ಎಂದು ನಿರೀಕ್ಷೆ ಮಾಡುತ್ತಿದ್ದವರಿಗೆ ಆಶ್ಚರ್ಯಪಡಿಸಿದ್ದು ಧಾರವಾಹಿಯಲ್ಲಿ ನಟನೆ ಮಾಡುವ ಮೂಲಕ. ಅದರಲ್ಲಿ ವಿಶೇಷವಾಗಿ ಅಮೃತಧಾರೆ ಧಾರವಾಹಿ ಎನ್ನುವುದು ಸಾಕಷ್ಟು ರೀತಿಯಲ್ಲಿ ಛಾಯಸಿಂಗ್ ರವರಿಗೆ ಜನಪ್ರಿಯತೆಯನ್ನ ಮತ್ತೆ ತಂದು ಕೊಡುತ್ತಿದೆ ಎಂದು ಹೇಳಬಹುದಾಗಿದೆ.

ಛಾಯಾ ಸಿಂಗ್ ರವರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಅಮೃತಧಾರೆ ಧಾರವಾಹಿಯಲ್ಲಿ ನೀವೆಲ್ಲರೂ ಗಮನಿಸಿರುವ ಹಾಗೆ ಛಾಯಾಸಿಂಗ್ ರವರು ಭೂಮಿಕಾ ಸದಾಶಿವ ಎನ್ನುವಂತಹ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇದು ಛಾಯಾಸಿಂಗ್ ರವರ ಕಿರುತೆರೆಯ ಕಂಬ್ಯಾಕ್ ಆಗಿದ್ದು ಪ್ರೇಕ್ಷಕರು ಇವರ ಮೊದಲ ಪ್ರಯತ್ನದಲ್ಲೇ ಮೆಚ್ಚುವುದಕ್ಕೆ ಪ್ರಾರಂಭ ಮಾಡಿದ್ದಾರೆ ಅನ್ನೋದು ತಿಳಿದುಬರುತ್ತದೆ. ಒಂದು ಸಮಯದಲ್ಲಿ ನಾಯಕ ನಟಿಯಾಗಿದ್ದ ಛಾಯಾಸಿಂಗ್ ರವರು ಸಿನಿಮಾದಿಂದ ಧಾರವಾಹಿ ಈಗ ಬಂದಿರುವ ರೀತಿ ಆರಂಭದಲ್ಲಿ ಸಾಕಷ್ಟು ಜನರಿಗೆ ಆಶ್ಚರ್ಯವನ್ನು ತಂದಿದ್ದರು ಕೂಡ ಸಮಯಕ್ಕೆ ಸರಿಹೊಂದುವ ರೀತಿಯಲ್ಲಿ ಪ್ರೇಕ್ಷಕರು ಈಗ ಛಾಯಾಸಿಂಗ್ ರವರು ಸಿನಿಮಾ ಗಿಂತ ಹೆಚ್ಚಾಗಿ ಧಾರವಾಹಿಯಲ್ಲಿ ಚೆನ್ನಾಗಿ ನಟಿಸುತ್ತಾರೆ ಅನ್ನೋದನ್ನ ಹೇಳುವ ರೀತಿಯಲ್ಲಿ ಮಾಡಿದೆ.

ಇನ್ನು ಛಾಯಾಸಿಂಗ್ ರವರು ಯಾವ ಊರಿನವರು ಅಥವಾ ಯಾವ ರಾಜ್ಯದವರು ಅಂತ ಕೇಳೋದಾದ್ರೆ ಬೇರೆ ಯಾವುದೋ ರಾಜ್ಯದ ನಟಿ ಅಲ್ಲ ಬದಲಾಗಿ ನಮ್ಮ ಬೆಂಗಳೂರಿನವರೇ. ಇನ್ನು ಇವರು ಮದುವೆಯಾಗಿ ತಮ್ಮ ಗಂಡನ ಜೊತೆಗೆ ಸದ್ಯಕ್ಕೆ ಚೆನ್ನೈನಲ್ಲಿ ನೆಲೆಸಿದ್ದಾರೆ. ಛಾಯಾಸಿಂಗ್ ರವರು ರಜಪೂತ್ ಕುಟುಂಬಕ್ಕೆ ಸೇರಿದವರಾಗಿರುತ್ತಾರೆ ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳಬೇಕಾಗಿದೆ.

ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಪಿಯುಸಿವರೆಗೆ ಛಾಯಾಸಿಂಗ್ ರವರು ಎಜುಕೇಶನ್ ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಅದರ ನಂತರ ಅವರು ಯಾವ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಸರಿಯಾಗಿ ಸಿಕ್ಕಿಲ್ಲ. ಇವರ ತಂದೆಯ ಹೆಸರು ಗೋಪಾಲ್ ಸಿಂಗ್ ಆಗುತ್ತಾ ಈ ಚಮನ್ ಲತಾ. ಛಾಯಾಸಿಂಗ್ ಅವರಿಗೆ ಈಗ 43 ವರ್ಷ ವಯಸ್ಸಾಗಿದೆ. ಆದರೆ ಇವತ್ತಿಗೂ ಕೂಡ 25ರ ಹರೆಯದ ಯುವತಿಯ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ತೆಲುಗು ಮಲಯಾಳಂ ತಮಿಳು ಹೀಗೆ ಬಹುಭಾಷೆಗಳಲ್ಲಿ ನಟನೆ ಮಾಡಿರುವಂತಹ ಅನುಭವವನ್ನು ಕೂಡ ಛಾಯಾಸಿಂಗ್ ಹೊಂದಿದ್ದಾರೆ. ಇನ್ನು ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ 2012ರಲ್ಲಿ ನಟ ಕೃಷ್ಣ ಅವರನ್ನು ಛಾಯಾಸಿಂಗ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರಿಗೂ ಇದುವರೆಗೂ ಮಕ್ಕಳಾಗಿಲ್ಲ.

Comments are closed.