SBI: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಿರಿಯ ನಾಗರಿಕರು ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ ಸಿಗುತ್ತೆ ಗೊತ್ತಾ?

SBI: ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೊಡ್ಡ ಗ್ರಾಹಕ ಬಳಗವನ್ನು ಹೊಂದಿರುವಂತಹ ಬ್ಯಾಂಕಿಂಗ್ ಸಂಸ್ಥೆಯಾಗಿದ್ದು ಎಲ್ಲಕ್ಕಿಂತ ಪ್ರಮುಖವಾಗಿ ಇದು ಸರ್ಕಾರಿ ಬ್ಯಾಂಕ್ ಆಗಿದೆ ಅನ್ನೋದನ್ನ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಬೇಕಾಗಿದೆ. ಇದೇ ಕಾರಣಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತ್ಯಂತ ನಂಬಿಕಸ್ತ ಬ್ಯಾಂಕುಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ.

ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಿರಿಯ ನಾಗರಿಕರಿಗೆ ಯಾವ ರೀತಿಯಲ್ಲಿ ಡೆಪಾಸಿಟ್ ಮೇಲೆ ಹಣವನ್ನು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ ಎನ್ನುವುದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫಿಕ್ಸ್ ಡೆಪಾಸಿಟ್ ಹೂಡಿಕೆಯಲ್ಲಿ ಸಾಮಾನ್ಯ ನಾಗರಿಕರಿಗೆ ಹೋಲಿಸಿದರೆ ಹಿರಿಯ ನಾಗರಿಕರಿಗೆ ಸಾಕಷ್ಟು ಬಡ್ಡಿದರವನ್ನು ಹೆಚ್ಚಾಗಿ ಹೇಳಲಾಗುತ್ತದೆ. ಒಂದರಿಂದ ಐದು ಲಕ್ಷ ರುಪಾಯಿಗಳವರೆಗೆ ಹೂಡಿಕೆ ಮಾಡುವುದರಿಂದ ಎಷ್ಟು ಲಾಭ ಸಿಗುತ್ತದೆ ಅನ್ನೋದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಫಿಕ್ಸಿಡ್ ಡೆಪಾಸಿಟ್ ಯೋಜನೆಯಲ್ಲಿ ಹಿರಿಯ ನಾಗರಿಕರು ಎಷ್ಟು ಹೂಡಿಕೆ ಮಾಡಿದ್ರೆ ಎಷ್ಟು ಸಿಗುತ್ತೆ?

  • ಒಂದು ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯೋಜನೆಯಲ್ಲಿ ಹಿರಿಯ ನಾಗರಿಕರು ಒಂದು ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೆ 7.30 ಪ್ರತಿಶತ ಬಡ್ಡಿ ದರದ ಲೆಕ್ಕಾಚಾರದಲ್ಲಿ 1 ಲಕ್ಷಗಳ ಮೇಲಿನ ಹೂಡಿಕೆಯ ಮೇಲೆ ಹೆಚ್ಚುವರಿಯಾಗಿ 7502 ರೂಪಾಯಿಗಳ ಬಡ್ಡಿಯನ್ನು ಪಡೆದುಕೊಳ್ಳಲಿದ್ದಾರೆ.
  • ಅದೇ ರೀತಿಯಲ್ಲಿ ಒಂದು ವರ್ಷಕ್ಕೆ 3 ಲಕ್ಷ ರೂಪಾಯಿಗಳ ಪಿಕ್ಸ್ಟ್ ಡೆಪಾಸಿಟ್ ಠೇವಣಿಯನ್ನು ಇಟ್ಟರೆ ಬಡ್ಡಿ ರೂಪದಲ್ಲಿ ನೀವು ಹೆಚ್ಚುವರಿ ಆಗಿ 22507 ರೂಪಾಯಿಗಳನ್ನು ಪಡೆದುಕೊಳ್ಳಲಿದ್ದೀರಿ.
  • ಒಂದು ವರ್ಷಕ್ಕೆ ಐದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 37, 511 ರೂಪಾಯಿಗಳ ಬಡ್ಡಿಯನ್ನು ಹೆಚ್ಚುವರಿ ಯಾಗಿ ಪಡೆದುಕೊಳ್ಳುತ್ತೀರಿ.
  • 1 ಲಕ್ಷ ಹಣವನ್ನು ಮೂರು ವರ್ಷಗಳಿಗೆ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಠೇವಣಿ ಇಟ್ಟರೆ 7.25% ಬಡ್ಡಿದರದ ಲೆಕ್ಕಾಚಾರದಲ್ಲಿ 24,055 ರೂಪಾಯಿಗಳ ಹೆಚ್ಚುವರಿ ಬಡ್ಡಿಯನ್ನು ನೀವು ಪಡೆದುಕೊಳ್ಳಬಹುದು.
  • 3 ಲಕ್ಷ ರೂಪಾಯಿಗಳನ್ನು ಮೂರು ವರ್ಷಕ್ಕೆ ಹೂಡಿಕೆ ಮಾಡಿದರೆ 72,164 ರೂಪಾಯಿಗಳ ಹೆಚ್ಚುವರಿ ಹಣವನ್ನು ಪಡೆದುಕೊಳ್ಳುತ್ತೀರಿ.
  • ಮೂರು ವರ್ಷಕ್ಕೆ 5 ಲಕ್ಷಗಳನ್ನು ಹೂಡಿಕೆ ಮಾಡಿದರೆ ಆ ಸಂದರ್ಭದಲ್ಲಿ 1,20,273 ಹಣವನ್ನ ರಿಟರ್ನ್ ರೂಪದಲ್ಲಿ ಪಡೆದುಕೊಳ್ಳುತ್ತಾರೆ.
  • 1 ಲಕ್ಷಗಳನ್ನು ಐದು ವರ್ಷದ ಅವಧಿಗೆ ಹಣವನ್ನು ಹೂಡಿಕೆ ಮಾಡಿದರೆ ಆ ಸಂದರ್ಭದಲ್ಲಿ ಬಡ್ಡಿ ರೂಪದಲ್ಲಿ 7.50% ಪ್ರತಿಶತ ಬಡ್ಡಿಯನ್ನು ನೀಡಲಾಗುತ್ತದೆ. ಹೂಡಿಕೆ ಮಾಡಿದಂತಹ ಒಂದು ಲಕ್ಷದ ಮೇಲೆ ಹೆಚ್ಚುವರಿ ಆಗಿ 44,995 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳುತ್ತಾರೆ.
  • 3 ಲಕ್ಷ ರೂಪಾಯಿಗಳನ್ನು ಐದು ವರ್ಷಗಳಿಗೆ ಹೂಡಿಕೆ ಮಾಡಿದರೆ ಹೆಚ್ಚುವರಿಯಾಗಿ 1.34 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತೀರಿ.
  • 5 ಲಕ್ಷ ರೂಪಾಯಿಗಳನ್ನು ಐದು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ ಹೂಡಿಕೆ ಮಾಡಿದರೆ 2.24 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತೀರಿ.

Comments are closed.