Pooja method: ಪೂಜೆ ಮಾಡುವಾಗ ದೇವರ ಕೋಣೆಯಲ್ಲಿ ಈ ವಸ್ತುಗಳು ಇರಲೇಬೇಕು; ನಿಮ್ಮನೆಯಲ್ಲಿ ಇಲ್ಲವಾದರೆ ಈಗಲೇ ವ್ಯವಸ್ಥೆ ಮಾಡಿಕೊಳ್ಳಿ!

Pooja method: ಪ್ರತಿದಿನ ದೇವರ ಪೂಜೆ ಮಾಡುವುದು ಹಿಂದೂ ಸನಾತನ ಸಂಸ್ಕೃತಿಯಲ್ಲಿ ಅತ್ಯಂತ ಪೂಜ್ಯ ಅಥವಾ ಪವಿತ್ರ ಆಗಿರುವಂತಹ ಕೆಲಸ ಎಂಬುದಾಗಿ ಪರಿಗಣಿಸಲಾಗುತ್ತದೆ. ದೇವರ ಆಶೀರ್ವಾದವನ್ನು ಪಡೆದುಕೊಳ್ಳಲು ಇರುವಂತಹ ಒಂದು ಪ್ರಮುಖ ಮಾರ್ಗ ಎಂಬುದಾಗಿ ಪರಿಗಣಿಸಬಹುದಾಗಿದೆ. ಇನ್ನು ಕೆಲವೊಂದು ವಸ್ತುಗಳು ದೇವರ ಕೋಣೆಯಲ್ಲಿ ಇರುವುದರಿಂದ ನಕರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಹಾಗೂ ಕೆಲವೊಂದು ವಸ್ತುಗಳು ದೇವರ ಕೋಣೆಯಲ್ಲಿ ಇದ್ದರೆ ಒಳ್ಳೆಯ ಪರಿಣಾಮಗಳು ಹೆಚ್ಚಾಗುತ್ತದೆ. ಅಂತಹ ಎರಡು ವರ್ಗದ ವಸ್ತುಗಳ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಈ ವಸ್ತುಗಳು ದೇವರ ಕೋಣೆಯಲ್ಲಿ ಇರಬಾರದು!

  • ಒಂದು ದೇವರ ಒಂದಕ್ಕಿಂತ ಹೆಚ್ಚು ವಿಗ್ರಹ ಅಥವಾ ಫೋಟೋಗಳನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳಬಾರದು ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ.
  • ಯಾವುದೇ ಕಾರಣಕ್ಕೂ ಈಗಾಗಲೇ ಮರಣ ಹೊಂದಿರುವಂತಹ ನಿಮ್ಮ ಹಿರಿಯವರ ಫೋಟೋಗಳನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಹೋಗಬೇಡಿ.
  • ಇನ್ನು ಮನೆಯ ದೇವರ ಕೋಣೆಯಲ್ಲಿ ಕಾಳಿ ಶನಿದೇವರು ಹಾಗೂ ಭೈರವನ ಫೋಟೋ ಅಥವಾ ವಿಗ್ರಹಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ.
  • ನಿಂತುಕೊಂಡಿರುವಂತಹ ಲಕ್ಷ್ಮಿ ದೇವಿಯ ಫೋಟೋವನ್ನ ದೇವರ ಕೋಣೆಯಲ್ಲಿ ಇಟ್ಟುಕೊಳ್ಳುವುದು ಅಷ್ಟೊಂದು ಒಳ್ಳೆಯ ಲಕ್ಷಣ ಅಲ್ಲ ಎಂಬುದಾಗಿ ಹೇಳಲಾಗುತ್ತದೆ.
  • ಮುರಿದು ಹೋಗಿರುವ ಫೋಟೋ ಅಥವಾ ದೇವರ ವಿಗ್ರಹದ ತುಂಡನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳಬೇಡಿ.
  • ದೇವರ ಕೋಣೆಯ ಬಾಗಿಲಿನಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಇಟ್ಟುಕೊಳ್ಳುವುದು ಶುಭಕರವಲ್ಲ.

ಈ ವಸ್ತುಗಳು ಇದ್ರೆ ಒಳ್ಳೆಯದು!

  • ಬೇರೆ ಫ್ಯಾನ್ಸಿ ದೀಪಗಳನ್ನು ದೇವರ ಪೂಜಿಗಾಗಿ ಬಳಸುವುದರ ಬದಲು ಭಾರತದಲ್ಲಿ ಮಣ್ಣಿನಿಂದ ಮಾಡಿರುವಂತಹ ದೀಪಗಳನ್ನು ಪೂಜಿಗಾಗಿ ಬಳಸುವುದು ಉತ್ತಮ ಎಂಬುದಾಗಿ ಹೇಳಲಾಗುತ್ತದೆ.
  • ಪ್ರಮುಖವಾಗಿ ಪೂಜೆ ಮಾಡುವಂತಹ ದೇವರ ಕೋಣೆಯಲ್ಲಿ ಪವಿತ್ರ ಗುರುತಾಗಿರುವಂತಹ ಸ್ವಸ್ತಿಕ್ ಚಿನ್ನೆಯನ್ನ ಬರೆಯುವುದು ಉತ್ತಮ ಎಂಬುದಾಗಿ ಹೇಳಲಾಗುತ್ತದೆ.
  • ಪ್ರತಿಯೊಂದು ಪೂಜಾ ಕೋಣೆಯಲ್ಲಿ ಇರಲೇ ಬೇಕಾಗಿರುವಂತಹ ಒಂದು ವಸ್ತು ಅಂದರೆ ಅದು ಕಲಶ. ಕೆಲಸದ ಮೇಲೆ ಕುಂಕುಮದಲ್ಲಿ ಸ್ವಸ್ತಿಕ್ ಚಿನ್ನೆಯನ್ನು ಬರೆದಿರುವ ಮೂಲಕ ದೇವರು ಕೋಣೆಯಲ್ಲಿ ಇಡಬೇಕು.
  • ಮನೆಯಲ್ಲಿ ಶಂಕ ಹಾಗೂ ಗಂಟೆ ಎರಡನ್ನು ಕೂಡ ಇರಿಸಬೇಕು ಮಾತ್ರವಲ್ಲದೆ ಪೂಜೆಯ ಸಂದರ್ಭದಲ್ಲಿ ಇವುಗಳನ್ನು ಸದ್ದು ಮಾಡುವ ಮೂಲಕ ನೀವು ಮನೆಯಲ್ಲಿ ಇರುವಂತಹ ಎಲ್ಲಾ ನಕಾರತ್ಮಕ ಶಕ್ತಿಯನ್ನು ದೂರ ಮಾಡಬಹುದಾಗಿದೆ.
  • ಎಲ್ಲಕ್ಕಿಂತ ಪ್ರಮುಖವಾಗಿ ದೇವರ ಕೋಣೆಯಲ್ಲಿ ತಪ್ಪದೇ ಗಂಗಾಜಲವನ್ನು ಇಡಿಸಿ. ಇದನ್ನು ಅತ್ಯಂತ ಪವಿತ್ರ ಎಂಬುದಾಗಿ ಪರಿಗಣಿಸಲಾಗುತ್ತದೆ.

ಇವಿಷ್ಟು ವಸ್ತುಗಳನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಒಳ್ಳೆಯ ಪರಿಣಾಮಗಳನ್ನು ಮನೆಗೆ ಹೊತ್ತು ತರುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಇವುಗಳ ಜೊತೆಗೆ ಈ ಮೇಲೆ ತಿಳಿಸಿರುವಂತೆ ಯಾವ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು ಅಥವಾ ಯಾವ ರೀತಿಯಲ್ಲಿ ದೇವರ ಕೋಣೆಯಲ್ಲಿ ನಡೆದುಕೊಳ್ಳಬಾರದು ಎನ್ನುವ ವಿವರಗಳ ಪಾಲನೆಯನ್ನು ಕೂಡ ನೀವು ಮಾಡಬೇಕಾಗುತ್ತದೆ.

Comments are closed.