Chanakya Neeti: ಈ ಒಂದು ವಿಷ್ಯ ಸಿಕ್ರೇಟ್ ಆಗಿ ಇಟ್ಟರೆ ಎಲ್ಲರೂ ನಿಮಗೆ ಮರ್ಯಾದೆ ಕೊಡ್ತಾರಂತೆ!

Chanakya Neeti: ಭಾರತೀಯ ಇತಿಹಾಸದ ಅತ್ಯಂತ ಮೇಧಾವಿ ವ್ಯಕ್ತಿಗಳಲ್ಲಿ ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ ಅಂದ್ರೆ ಅದು ಚಾಣಕ್ಯರು. ಆಚಾರ್ಯ ಚಾಣಕ್ಯರು ಭಾರತದ ಇತಿಹಾಸದಲ್ಲಿ ಯಾವುದನ್ನು ಕೂಡ ಸಾಧಿಸಬಹುದು ಅನ್ನೋದನ್ನ ಸಾಬೀತುಪಡಿಸಿ ತೋರಿಸಿದವರು. ಇನ್ನು ಜೀವನದಲ್ಲಿ ಈಗಲೂ ಕೂಡ ಯಾವ ರೀತಿಯಲ್ಲಿ ಇರಬಹುದು ಎಂದು ಅವರ ಗ್ರಂಥಗಳಲ್ಲಿ ಇರುವಂತಹ ಲೇಖನದ ಮರ್ಮವನ್ನು ಅರಿತುಕೊಳ್ಳುವ ಮೂಲಕ ನಾವು ಯಶಸ್ವಿ ಜೀವನವನ್ನು ನಡೆಸಬಹುದಾಗಿದೆ. ಇನ್ನು ಸಮಾಜದಲ್ಲಿ ನಾವು ಗೌರವವನ್ನು ಪಡೆದುಕೊಳ್ಳಬೇಕು ಅಂದ್ರೆ ಕೆಲವೊಂದು ವಿಚಾರಗಳನ್ನು ರಹಸ್ಯವಾಗಿ ಇಟ್ಟುಕೊಳ್ಳುವುದು ಒಳ್ಳೆಯದು ಎಂಬ ಮಾಹಿತಿಯನ್ನು ಕೂಡ ಅವರು ನೀಡುತ್ತಾರೆ. ಬನ್ನಿ ಹಾಗಿದ್ರೆ ಆ ಮಾಹಿತಿಗಳು ಯಾವ ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಸಮಾಜದಿಂದ ಗೌರವ ಪಡೆದುಕೊಳ್ಳಲು ಇವುಗಳನ್ನು ರಹಸ್ಯವಾಗಿ ಇಟ್ಟುಕೊಳ್ಳಿ!

  • ನೀವು ದಾಂಪತ್ಯ ಜೀವನದಲ್ಲಿ ಗಂಡನೇ ಆಗಿರಲಿ ಅಥವಾ ಹೆಂಡತಿ ಆಗಿರಲಿ ಯಾವತ್ತೂ ಕೂಡ ನಿಮ್ಮ ನಡುವೆ ನಡೆದಿರುವಂತಹ ಅಥವಾ ನಡೆಯುವ ಜಗಳ ಅಥವಾ ಕೌಟುಂಬಿಕ ಕಲಹಗಳ ಬಗ್ಗೆ ಮೂರನೆಯವರಿಗೆ ಹೇಳೋದು ಒಳ್ಳೆಯದಲ್ಲ. ಇದರಿಂದಾಗಿ ನಿಮ್ಮ ನಡುವೆ ಇರುವಂತಹ ಈ ಮನಸ್ತಾಪಗಳನ್ನು ಸಮಾಜ ಆಡಿಕೊಂಡು ನಗುವ ರೀತಿಯಲ್ಲಿ ಆಗುತ್ತದೆ. ಸಮಯ ಕಳೆದಂತೆ ಸಮಾಜದಲ್ಲಿ ನಿಮ್ಮ ಮೇಲೆ ಇರುವಂತಹ ಒಳ್ಳೆಯ ಅಭಿಪ್ರಾಯಗಳು ಕೂಡ ದೂರವಾಗುತ್ತವೆ ಅನ್ನೋದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ.
  • ನಿಮ್ಮ ಕುಟುಂಬಸ್ಥರು ಅಥವಾ ಆತ್ಮೀಯರು ಆಗಿದ್ದರೂ ಕೂಡ ಯಾವುದೇ ಕಾರಣಕ್ಕೂ ನೀವು ನಿಮ್ಮ ಕೆಲಸದ ಜೀವನದಲ್ಲಿ ಅಥವಾ ನಿಮ್ಮ ವೈಯಕ್ತಿಕ ಜೀವನದಲ್ಲಿ ಬೇರೆಯವರಿಂದ ಅವಮಾನಕ್ಕೆ ಒಳಗಾಗಿದ್ದರೆ ಅವುಗಳನ್ನು ಹೇಳೊದಕ್ಕೆ ಹೋಗಬೇಡಿ. ಇದರಿಂದಾಗಿ ನಿಮ್ಮ ಸಮಾಜದಲ್ಲಿ ಇರುವಂತಹ ಗೌರವ ಇನ್ನಷ್ಟು ಕಡಿಮೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದ್ರೆ ಎಲ್ಲರೂ ಕೂಡ ನಿಮ್ಮ ಬಗ್ಗೆ ಒಳ್ಳೆಯದನ್ನೇ ಚಿಂತಿಸಬೇಕಾದ ಅಗತ್ಯ ಇಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳಿ.
  • ಸಮಾಜದ ಬಗ್ಗೆ ಒಂದು ಸತ್ಯವನ್ನು ನೀವು ತಿಳಿದುಕೊಂಡಿರುವುದು ಅದೇನೆಂದರೆ ಕೇವಲ ಹಣ ಇದ್ದರೆ ಮಾತ್ರ ನಿಮ್ಮ ಬಳಿ ಮಾತನಾಡುವುದಕ್ಕೆ ಬರುತ್ತಾರೆ ಹೀಗಾಗಿ ಒಂದು ವೇಳೆ ನಿಮ್ಮ ಬಳಿ ಹಣದ ಕೊರತೆ ಇದ್ರೆ ಅಥವಾ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಇದ್ದರೆ ಅದನ್ನ ನಿಮ್ಮಲ್ಲಿ ಇಟ್ಕೊಳ್ಳಿ ಬೇರೆಯವರಿಗೆ ಹೇಳೋದಕ್ಕೆ ಹೋಗ್ಬೇಡಿ. ಒಮ್ಮೆ ನಿಮ್ಮ ಬಳಿ ಹಣ ಇಲ್ಲ ಎಂಬುದನ್ನು ತಿಳಿದರೆ ನಿಮ್ಮಿಂದ ಆದಷ್ಟು ದೂರ ಇರುವುದಕ್ಕಾಗಿ ಅವರು ಪ್ರಯತ್ನಿಸುತ್ತಾರೆ.

ಹೀಗಾಗಿ ಯಾವುದೇ ಕಾರಣಕ್ಕೂ ಕೂಡ ನೀವು ಇಷ್ಟು ವಿಚಾರಗಳನ್ನು ನೀವು ಮೂರನೆ ವ್ಯಕ್ತಿಗೆ ಹೇಳೋದಕ್ಕೆ ಯಾವುದೇ ಕಾರಣಕ್ಕೂ ಹೋಗಬೇಡಿ. ಸಮಾಜದಲ್ಲಿ ನಿಮ್ಮ ಗೌರವ ಕಡಿಮೆಯಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಅನ್ನೋದನ್ನ ತಲೆಯಲ್ಲಿ ನೆನಪಿಟ್ಟುಕೊಳ್ಳಿ.

Comments are closed.