Electric Scooter: ಅತ್ಯಂತ ಕಡಿಮೆ ಬೆಲೆಗೆ ಸಿಕ್ತಾ ಇದೆ ಹೊಸದಾಗಿ ಲಾಂಚ್ ಆಗುತ್ತಿರುವಂತಹ ಈ ನಾಲ್ಕು ಎಲೆಕ್ಟ್ರಿಕ್ ಸ್ಕೂಟರ್ ಗಳು!

Electric Scooter: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆ ಗ್ರಾಹಕರಲ್ಲಿ ಹೆಚ್ಚಾಗುತ್ತಿರುವ ಬೆನ್ನಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಲಾಂಚ್ ಆಗುತ್ತಿವೆ. ಅದರಲ್ಲಿ ವಿಶೇಷವಾಗಿ ನಾವು ಮಾತನಾಡೋಕೆ ಹೊರಟಿರೋದು ಜಿಟಿ ಫೋರ್ಸ್ ಕಂಪನಿಯ ಹೊಸದಾಗಿ ಲಾಂಚ್ ಆಗಲು ಇರುವಂತಹ ನಾಲ್ಕು ಎಲೆಕ್ಟ್ರಿಕ್ ಸ್ಕೂಟರ್ ಗಳ ಬಗ್ಗೆ. ಇವುಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತವೆ ಹಾಗೂ ಉತ್ತಮ ಕ್ವಾಲಿಟಿಯನ್ನು ಕೂಡ ಹೊಂದಿವೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ರೆ ಬನ್ನಿ ಈ ನಾಲ್ಕು ಎಲೆಕ್ಟ್ರಿಕ್ ಸ್ಕೂಟರ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ನೀವು ಯಾವುದನ್ನು ಖರೀದಿಸುವುದಕ್ಕೆ ಯೋಚನೆ ಮಾಡಬಹುದು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.

GT DRIVE PRO

ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವಂತಹ ಬಿ ಎಲ್ ಡಿ ಸಿ ಮೋಟಾರ್ಗಳನ್ನು ಅಳವಡಿಸಲಾಗಿದೆ. 2.5kwh ಸಾಮರ್ಥ್ಯದ ಲಿಥಿಯಂ ಅಯಾನ್ ಬ್ಯಾಟರಿಯನ್ನು ನೀವು ಇದರಲ್ಲಿ ಕಾಣಬಹುದಾಗಿದೆ. 180ಕೆಜಿಗಳ ವರೆಗೆ ಲೋಡ್ ಅನ್ನು ತಡೆದುಕೊಳ್ಳುವಂತಹ ಸಾಮರ್ಥ್ಯ ಈ ಎಲೆಕ್ಟ್ರಿಕ್ ಸ್ಕೂಟರ್ ಗೆ ಇದ್ದು 70 ಕಿಲೋ ಮೀಟರ್ ಗಳ ಟಾಪ್ ಸ್ಪೀಡ್ ನಲ್ಲಿ ಇದು ಚಲಿಸುತ್ತದೆ. ಸಿಂಗಲ್ ಚಾರ್ಜ್ ನಲ್ಲಿ ನಿಮಗೆ ಇದು 110 ಕಿಲೋಮೀಟರ್ಗಳ ರೇಂಜ್ ನೀಡುತ್ತದೆ. ನಾಲ್ಕು ಬಣ್ಣಗಳಲ್ಲಿ ನಿಮಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿರಲಿದ್ದು ಇದರ ಬೆಲೆ 84,555 ರೂಪಾಯಿ ಆಗಿದೆ.

GT ONE PLUS PRO

ಇದು ಕೂಡ ಎಲೆಕ್ಟ್ರಿಕ್ ಸ್ಕೂಟರ್ ರೀತಿಯಲ್ಲೇ 180 ಕೆಜಿಗಳ ಲೋಡ್ ಅನ್ನು ತೆಗೆದುಕೊಂಡು ಹೋಗುವ ಸಾಮರ್ಥ್ಯ ಇದೆ 110 ಕಿಲೋಮೀಟರ್ಗಳ ಲಾಂಗ್ ರೇಂಜ್ ಅನ್ನು ಕೂಡ ನೀಡುತ್ತದೆ. ಇದು ಫುಲ್ ಚಾರ್ಜ್ ಆಗೋದಕ್ಕೆ ನಾಲ್ಕರಿಂದ ಐದು ಗಂಟೆಗಳು ಬೇಕಾಗುತ್ತದೆ. ಇನ್ನು ಇದು ನಿಮಗೆ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಇದನ್ನು ಖರೀದಿಸುವುದಕ್ಕೆ ನೀವು 76555 ರೂಪಾಯಿಗಳನ್ನು ಖರ್ಚು ಮಾಡಬೇಕಾಗಿರುತ್ತದೆ.

GT VEGAS

ಮೂರು ಬಣ್ಣಗಳ ಆಪ್ಷನಲ್ ನಿಮಗೆ ದೊರಕುವಂತಹ ಎಲೆಕ್ಟ್ರಿಕ್ ಸ್ಕೂಟರ್ ಐದು ವರ್ಷಗಳ ಅಥವಾ ಅರುವತ್ತು ಸಾವಿರ ಕಿಲೋಮೀಟರ್ಗಳ ವಾರಂಟಿಯ ಜೊತೆಗೆ ನಿಮಗೆ ಇದು ಸಿಗುತ್ತದೆ. 1.5 ಕಿಲೋ ವ್ಯಾಟ್ ಲಿಥಿಯಂ ಅಯನ್ ಬ್ಯಾಟರಿಯನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಎಪ್ಪತ್ತು ಕಿಲೋಮೀಟರುಗಳ ರೇಂಜ್ ನೀಡುವಂತಹ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜ್ ಮಾಡೋದಕ್ಕೆ ನಾಲ್ಕರಿಂದ ಐದು ಗಂಟೆಗಳು ಬೇಕಾಗುತ್ತದೆ. 25 ಕಿಲೋಮೀಟರ್ ಸ್ಪೀಡ್ ನಲ್ಲಿ ಚಲಿಸುವಂತಹ ಎಲೆಕ್ಟ್ರಿಕ್ ಸ್ಕೂಟರ್ 150 ಕೆಜಿಗಳ ವರೆಗೆ ಲೋಡ್ ಮಾಡಿಕೊಳ್ಳುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಬೇಕಾಗಿ ನೀವು 55,555 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.

GT RIDE PLUS

25 ಕಿಲೋಮೀಟರ್ಗಳ ಟಾಪ್ ಸ್ಪೀಡ್ ನೀಡುವಂತಹ ಈ ಎಲೆಕ್ಟ್ರಿಕ್ ಸ್ಕೂಟರ್ ಸಿಂಗಲ್ ಚಾರ್ಜ್ ನಲ್ಲಿ ರೇಂಜ್ ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಇದರ ಬೆಲೆ 65,555 ರೂಪಾಯಿ ಆಗಿದೆ.

Comments are closed.