Hyundai Caspe: ಕಡಿಮೆ ಬೆಲೆಗೆ ಸಿಗ್ತಾ ಇದೆ ಹುಂಡೈ ಸಂಸ್ಥೆಯಿಂದ ಹೊಸ ಕಾರ್! ಟಾಟಾ ಗೆ ಕಾಂಪಿಟಿಷನ್ ರೆಡಿ!

Hyundai Caspe: ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಸಾಕಷ್ಟು ವೇಗದ ಬೆಳವಣಿಗೆಗಳನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಕಾಣಬಹುದಾಗಿದ್ದು, ಮೈಕ್ರೋ SUV ವಿಭಾಗದಲ್ಲಿ ಟಾಟಾ ಸಂಸ್ಥೆಯನ್ನು ಮೀರಿಸುವ ರೀತಿಯಲ್ಲಿ ದಕ್ಷಿಣ ಕೊರಿಯಾದ ಕಂಪನಿ ಆಗಿರುವಂತಹ ಹುಂಡೈ ತನ್ನ ಹೊಸ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡುವ ಮೂಲಕ ತನ್ನ ಪೋರ್ಟ್ಫೋಲಿಯವನ್ನು ಇಲ್ಲಿ ಹೆಚ್ಚು ಮಾಡಿಸುತ್ತಿದೆ. ನೀವು ಸರಿಯಾಗಿ ನೆನಪು ಮಾಡಿಕೊಂಡ್ರೆ ಸ್ಯಾಂಟ್ರೋ ಕಾರಿನ ಮೂಲಕ ಹುಂಡೈ ಸಂಸ್ಥೆ ಭಾರತದ ಮಾರುಕಟ್ಟೆಗೆ ತನ್ನ ಅದೃಷ್ಟ ಪರೀಕ್ಷೆಯನ್ನು ಪ್ರಾರಂಭಿಸಿತ್ತು. ಈಗ ಈ ಪ್ರಯಾಣ ಭಾರತ ಮಾರುಕಟ್ಟೆಯಲ್ಲಿ ಸಾಕಷ್ಟು ಅಡ್ವಾನ್ಸ್ ಟೀಚರ್ ಗಳನ್ನು ಹೊಂದಿರುವಂತಹ ಕಾರುಗಳನ್ನು ಪರಿಚಯಿಸುವುದರ ಜೊತೆಗೆ ಮುಂದುವರಿಯುತ್ತಿದೆ.

ಇನ್ನು ಇದೇ ಮಾರುಕಟ್ಟೆಯಲ್ಲಿ ಈಗ ಹುಂಡೈ ಸಂಸ್ಥೆ HYUNDAI CASPER ಕಾರನ್ನು ಲಾಂಚ್ ಮಾಡಲಿದೆ ಎನ್ನುವಂತಹ ಸುದ್ದಿ ಕೇಳಿ ಬರ್ತಾ ಇದ್ದು ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. HYUNDAI CASPER ಕಾರನ್ನು ಭಾರತ ದೇಶದಲ್ಲಿ ಬ್ರಾಂಡ್ ಮಾಡುವ ನಿಟ್ಟಿನಲ್ಲಿ ಹುಂಡೈ ಸಂಸ್ಥೆ ಸಾಕಷ್ಟು ತಯಾರಿಯನ್ನು ನಡೆಸಿಕೊಳ್ಳುತ್ತಿದೆ ಎನ್ನುವಂತಹ ಮಾಹಿತಿ ಕೂಡ ಕೇಳಿ ಬಂದಿದೆ. ಸ್ಯಾಂಟ್ರೋ ಕಾರಿನ ಬದಲಾಗಿ ಭಾರತದ ಮಾರುಕಟ್ಟೆಯಲ್ಲಿ ಮೈಕ್ರೋ ಎಸ್ ಯು ವಿ ಸೆಗ್ಮೆಂಟ್ನಲ್ಲಿ ಈ ಕಾರನ್ನು ಪರಿಚಯಿಸುವಂತಹ ಉದ್ದೇಶವನ್ನು ಹುಂಡೈ ಹೊಂದಿದೆ.

HYUNDAI CASPER ಕಾರಿನ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈ ಕಾರಿನಲ್ಲಿ ನೀವು ಸ್ಪೋರ್ಟ್ಸ್ ಲುಕ್ ಅನ್ನು ಕೂಡ ಕಾಣಬಹುದಾಗಿದೆ. ಆಕರ್ಷಿಕ ಹೆಡ್ ಲ್ಯಾಂಪ್‌ಗಳನ್ನು ಕೂಡ ನೀವು ಈ ಕಾರ್ ನಲ್ಲಿ ಗಮನಿಸಬಹುದಾಗಿದೆ. ಯು ಎಸ್ ಬಿ ಚಾರ್ಜಿಂಗ್ ಪೋರ್ಟ್ ಅನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಲಾಂಗ್ ಬ್ರೇಕ್ ಸೆಟಪ್ ಜೊತೆಗೆ HYUNDAI CASPER ಕಾರು ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಹಿಂಭಾಗದ ಬಂಪರ್ ನಲ್ಲಿ ಫಾಕ್ಸ್‌ ಡಿಫ್ಯೂಸರ್ ಅನ್ನು ನೀವು ಗಮನಿಸಬಹುದಾಗಿದೆ. ಟು ಸ್ಟ್ರೋಕ್ ಸ್ಟೇರಿಂಗ್ ವೀಲ್, ಡ್ಯಾಶ್ ಬೋರ್ಡ್ ಮೌಂಟೆಡ್ ಸೆಂಟರ್ ಕನ್ಸೋಲ್, ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಹಾಗೂ ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೂಡ ನೀವು ಗಮನಿಸಬಹುದಾಗಿದೆ.

ADAS ವಿಚಾರಕ್ಕೆ ಬಂದರೆ ಈ ಟೆಕ್ನಾಲಜಿ ಹೊಂದಿರುವಂತಹ ಅತ್ಯಂತ ಕಡಿಮೆ ಬೆಲೆಯ ಕಾರುಗಳಲ್ಲಿ ಇದು ಮುಂದಿನ ದಿನಗಳಲ್ಲಿ ಭಾರತದಲ್ಲಿ ಗುರುತಿಸಿಕೊಳ್ಳಲಿದೆ. 1.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಹಾಗೂ 1.0l ಟರ್ಬೊ ಪೆಟ್ರೋಲ್ ಇಂಜಿನ್ ಕೂಡ ನೀವು ಇದರಲ್ಲಿ ಗಮನಿಸಬಹುದಾಗಿದೆ. ಇದುವರೆಗೂ ಅಧಿಕೃತವಾಗಿ ಇದನ್ನು ಯಾವಾಗ ಭಾರತ ದೇಶದಲ್ಲಿ ಲಾಂಚ್ ಮಾಡಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಕಂಪನಿ ಹಂಚಿಕೊಂಡಿಲ್ಲ ಹಾಗೂ ಬೆಲೆಯ ಬಗ್ಗೆ ಕೂಡ ಯಾವುದೇ ಅಧಿಕೃತ ಮಾಹಿತಿ ಇಲ್ಲ ಆದರೆ ಆದಷ್ಟು ಶೀಘ್ರದಲ್ಲಿ ಭಾರತದ ಮಾರುಕಟ್ಟೆಗೆ ಲಾಂಚ್ ನಡೆಸಲು ಎಲ್ಲ ತಯಾರಿಗಳ ನಡೆಯುತ್ತಿವೆ.

Comments are closed.