Darshan Case: ಡಿ ಬಾಸ್ ರವರು ಈ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಪ್ರೂವ್ ಆದರೆ ಎಷ್ಟು ವರ್ಷದ ಶಿಕ್ಷೆ ಇರುತ್ತೆ ಗೊತ್ತಾ?

Darshan Case: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಬ್ಬ ನಾಯಕನಟ ಮ-ರ್ಡರ್ ವಿಚಾರಕ್ಕಾಗಿ ವಿಚಾರಣೆಯನ್ನು ಎದುರಿಸುತ್ತಾನೆ ಅಥವಾ ಆರೋಪವನ್ನು ಎದುರಿಸುತ್ತಾನೆ ಅನ್ನೋದನ್ನ ನಾವು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೂಲಕ ಮೊದಲನೇ ಬಾರಿಗೆ ನೋಡಿದ್ದೇವೆ ಎಂದು ಹೇಳಬಹುದಾಗಿದೆ. ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟಂತೆ ಬೇರೆ ಬೇರೆ ಸ್ಟಾರ್ ನಟರ ಬಗ್ಗೆ ಬೇರೆ ಬೇರೆ ರೀತಿಯ ವಿವಾದಗಳನ್ನು ನಾವು ಗಮನಿಸಬಹುದು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟದ್ದಾಗಿದೆ. ಆದರೆ ನಿಜಕ್ಕೂ ಕೂಡ ಈ ರೀತಿಯ ಕೃತ್ಯಗಳಲ್ಲಿ ನಮ್ಮ ಕನ್ನಡ ಚಿತ್ರರಂಗದ ಕಲಾವಿದರು ಭಾಗಿಯಾಗುತ್ತಾರೆ ಎಂದು ಊಹಿಸಲು ಕೂಡ ಸಾಧ್ಯವಿಲ್ಲ ಅಂತ ಹೇಳಬಹುದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೇವಲ ಸಿನಿಮಾ ಜೀವನದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವುದರಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಜನರಿಗೆ ಸಹಾಯ ಮಾಡುವುದನ್ನು ಯಾವುದೇ ಪ್ರಚಾರ ಇಲ್ಲದೆ ಮಾಡುವಂತಹ ವಿಚಾರದಲ್ಲಿ ಕೂಡ ಸುದ್ದಿ ಆಗಿದ್ರು. ಇಂತಹ ಒಳ್ಳೆಯ ಮನಸ್ಸನ್ನು ಹೊಂದಿರುವಂತಹ ಮುಂಗೋಪವನ್ನು ಹೊಂದಿರುವಂತಹ ವ್ಯಕ್ತಿ ಈ ರೀತಿಯ ಕೆಲಸವನ್ನು ಮಾಡಿದ್ದು ನಿಜಕ್ಕೂ ಕೂಡ ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಘಾ-ಸಿಗೊಳಿಸಿದೆ ಎಂದು ಹೇಳಬಹುದಾಗಿದೆ.

ತನಿಖೆ ಈಗಾಗಲೇ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಪೊಲೀಸ್ ಕಸ್ಟಡ್ ಗೆ ಒಟ್ಟಾರೆಯಾಗಿ ಆರು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ ಎನ್ನುವಂತಹ ಮಾಹಿತಿ ಸಿಕ್ಕಿದ್ದು ಆರು ದಿನಗಳಲ್ಲಿ ಪೊಲೀಸರು ಈ ಪ್ರಕರಣದ ಕುರಿತಂತೆ ಆರೋಪಿಗಳ ಬಳಿ ಬೇಕಾಗಿರುವಂತಹ ತನಿಖೆ ಹಾಗೂ ಪ್ರಶ್ನೋತ್ತರಗಳನ್ನು ಮಾಡಬಹುದಾಗಿದೆ ಎನ್ನುವುದು ತಿಳಿದುಬಂದಿರುವ ಸಾಮಾನ್ಯ ಜ್ಞಾನವಾಗಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಪ್ಪಿತಸ್ಥರು ಎಂಬುದಾಗಿ ಯಾವ ಶಿಕ್ಷೆ ಸಿಗಬಹುದು ಎನ್ನುವುದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಡಿ ಬಾಸ್ ಗೆ ಅಪರಾಧ ಸಾಬೀತಾದರೆ ಏನು ಶಿಕ್ಷೆ ಸಿಗಬಹುದು ಗೊತ್ತಾ?

ಈ ಪ್ರಕರಣದಲ್ಲಿ ಮೊದಲಿಗೆ ಪ್ರಭಾವಿ ರಾಜಕಾರಣಿಗಳಿಂದ ಈ ಪ್ರಕರಣದ ಮೇಲೆ ಒತ್ತಡ ಹೇರಿ ಬರುತ್ತಿದ್ದು ಇದು ಬೇರೆ ಕೇಸ್ ಗಳ ರೀತಿಯಲ್ಲಿ ಮುಚ್ಚಿ ಹೋಗಬಹುದು ಎಂಬುದಾಗಿ ಮಾತುಕತೆ ಕೇಳಿಬಂದಿತ್ತು ಆದರೆ ರಾಜ್ಯದ ಸಾಕಷ್ಟು ಮಂತ್ರಿಗಳು ಹಾಗೂ ಹಿರಿಯ ರಾಜಕೀಯ ನಾಯಕರು ಈ ಪ್ರಕರಣದಲ್ಲಿ ಯಾವುದೇ ರೀತಿಯ ಭೇದ ಭಾವ ತೋರಿಸುವುದಿಲ್ಲ ಬದಲಾಗಿ ಕಠಿಣ ಕ್ರಮವನ್ನು ಒಂದು ವೇಳೆ ಆರೋಪ ಸಾಬೀತಾ ಆದರೆ ವಿಧಿಸುವುದರಲ್ಲಿ ಸರ್ಕಾರ ಬೇಕಾಗಿರುವಂತಹ ಪ್ರತಿಯೊಂದು ಸಹಕಾರವನ್ನು ನೀಡುತ್ತದೆ ಎನ್ನುವ ರೀತಿಯಲ್ಲಿ ರಾಜ್ಯ ಸರ್ಕಾರದ ಕೆಲವು ಮಂತ್ರಿಗಳು ಮಾತನಾಡಿದ್ದಾರೆ. ಒಂದು ವೇಳೆ ಈ ಪ್ರಕರಣದಲ್ಲಿ ಡಿ ಬಾಸ್ ರವರ ಅಪರಾಧ ಸಾಬೀತಾದರೆ ಭಾರತೀಯ ಕಾನೂನು ಸಂಹಿತೆ 302ರ ಪ್ರಕಾರ ಜೀವಾವಧಿ ಶಿಕ್ಷೆಯನ್ನು ಯಾವುದೇ ಅನುಮಾನವಿಲ್ಲದೆ ನೀಡಬಹುದಾಗಿದೆ ಎನ್ನುವುದಾಗಿ ಸಾಕಷ್ಟು ಜನ ಕಾನೂನು ಸಲಹೆಗಾರರು ತಮ್ಮ ಅಭಿಪ್ರಾಯವನ್ನು ಈ ಪ್ರಕರಣದಲ್ಲಿ ನೀಡಿದ್ದಾರೆ.

Comments are closed.