Film: ಈ ಪವಿತ್ರ ಗೌಡ ನಿಜಕ್ಕೂ ಯಾರು ಇವರ ಲೈಫ್ ಸ್ಟೋರಿ ಏನು ಇಲ್ಲಿದೆ ನೋಡಿ ಮಾಹಿತಿ!?

Film: ವರ್ಷಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹೆಸರು ಅವರ ಸಿನಿಮಾಗಳಿಗಿಂತ ಹೆಚ್ಚಾಗಿ ಅವರ ವಾದ ವಿವಾದಗಳಿಗೆ ಮತ್ತು ಪವಿತ್ರ ಗೌಡರವರ ಜೊತೆಗೆ ಹೆಚ್ಚಾಗಿ ಕೇಳಿ ಬಂದಿದೆ ಎಂದು ಹೇಳಬಹುದಾಗಿದೆ. ಇತ್ತೀಚಿಗೆ ನೀವು ಸರಿಯಾಗಿ ಗಮನಿಸಿರಬಹುದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪವಿತ್ರ ಗೌಡ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ 10 ವರ್ಷಗಳ ಸಂಬಂಧವನ್ನು ಹೊಂದಿದ್ದೇನೆ ಅನ್ನೋದನ್ನ ಬಹಿರಂಗವಾಗಿ ಹಂಚಿಕೊಂಡಿದ್ದರು ಹಾಗೂ ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೊದಲ ಪತ್ನಿ ಆಗಿರುವಂತಹ ವಿಜಯಲಕ್ಷ್ಮಿ ದರ್ಶನ್ ರವರು ಈ ವಿಚಾರದ ಬಗ್ಗೆ ಬಹಿರಂಗವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಕಾನೂನಾತ್ಮಕ ಕ್ರಮವನ್ನು ಜರಗಿಸುವಂತಹ ಎಚ್ಚರಿಕೆಯನ್ನು ಕೂಡ ನೀಡಿದ್ದನ್ನು ನಾವು ಈ ಹಿಂದೆ ನೋಡಬಹುದಾಗಿದೆ. ಹಾಗಿದ್ರೆ ಬನ್ನಿ ಪವಿತ್ರ ಗೌಡ ನಿಜಕ್ಕೂ ಯಾರು ಅವರ ಹಿನ್ನೆಲೆ ಏನು ಎನ್ನುವುದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಪವಿತ್ರ ಗೌಡ ನಿಜಕ್ಕೂ ಯಾರು? ಅವರ ಹಿನ್ನೆಲೆ ಇಲ್ಲಿದೆ!

ಚಾಮರಾಜಪೇಟೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಪವಿತ್ರ ಗೌಡ ಹಾಗೂ ಆಕೆಯ ಕುಟುಂಬ ಮಿಡಲ್ ಕ್ಲಾಸ್ ಫ್ಯಾಮಿಲಿ ಆಗಿತ್ತು. ಮನೆಯ ಮುಂದೆ ಇದ್ದ ಕಿರಾಣಿ ಅಂಗಡಿಯ ಮಾಲೀಕನ ಮಗ ಸಂಜಯ್ ಎನ್ನುವ ಆತನ ಮೇಲೆ ಪವಿತ್ರ ಗೌಡ ಅವರಿಗೆ ಲವ್ ಪ್ರಾರಂಭವಾಗಿ ಇಬ್ಬರು ಕೂಡ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರ ಮದುವೆ ನಂತರ ಖುಷಿ ಗೌಡ ಎನ್ನುವಂತಹ ಮಗಳು ಕೂಡ ಈ ದಂಪತಿಗಳಿಗೆ ಜನಿಸುತ್ತಾಳೆ. ಇನ್ನು ಮಗುವಿನ ಜನನ ನಂತರ ಪವಿತ್ರ ಗೌಡ ದಪ್ಪಗಾಗುತ್ತಾ ಹೋಗುತ್ತಾರೆ. ಅವರು ತಾವು ಸಣ್ಣ ಆಗ್ಬೇಕು ಅನ್ನೋ ಕಾರಣಕ್ಕಾಗಿ ಏರೋ ಬಿಕ್ಸ್ ಕ್ಲಾಸಿಗೆ ಕೂಡ ಸೇರ್ತಾರೆ. ಇಲ್ಲಿ ನಟಿಯ ಪರಿಚಯ ಆಗಿ ಸಿನಿಮಾರಂಗಕ್ಕೆ ಕೂಡ ಪವಿತ್ರ ಗೌಡ ಪ್ರಯತ್ನ ಮಾಡೋಕೆ ಪ್ರಾರಂಭಿಸುತ್ತಾರೆ ಹಾಗೂ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳನ್ನು ಮಾಡಿದ್ದಾರೆ ಆದರೆ ಯಾವ ಸಿನಿಮಾ ಕೂಡ ಅವರ ಕೈ ಹಿಡಿದಿಲ್ಲ ಅನ್ನೋದು ಅಷ್ಟೇ ಸತ್ಯ. ತಮಿಳಿನಲ್ಲಿ ಕೊಡು ಒಂದು ಸಿನಿಮಾವನ್ನು ಮಾಡಿ ಬಂದಿದ್ದಾರೆ. ಆದರೆ ಇದಕ್ಕೆ ಮುಂಚೆ ಅವಕಾಶವನ್ನು ಪಡೆದುಕೊಳ್ಳುವುದಕ್ಕಾಗಿ ಪವಿತ್ರ ಗೌಡ ಸೆಲೆಬ್ರಿಟಿಗಳ ಪಾರ್ಟಿಯಲ್ಲಿ ಭಾಗವಹಿಸುವುದನ್ನು ಪ್ರಾರಂಭಿಸುತ್ತಾರೆ. ಇದು ಅವರ ಗಂಡ ಆಗಿರುವಂತಹ ಸಂಜಯ್ ರವರಿಗೆ ಆಗಿ ಬರೋದಿಲ್ಲ ಹೀಗಾಗಿ ಇವರಿಬ್ಬರ ನಡುವೆ ಮನಸ್ತಾಪ ಮಾಡಿ ಬಂದು ಪರಸ್ಪರ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ.

ಇದೇ ಸಂದರ್ಭದಲ್ಲಿ ದರ್ಶನ್ ರವರ ಪರಿಚಯವಾಗಿ ಈಗಾಗಲೇ ಇಬ್ಬರೂ ಒಂದು ದಶಕದ ಸಂಬಂಧವನ್ನು ಹೊಂದಿದ್ದಾರೆ ಅನ್ನೋದನ್ನ ಅವರೇ ತಿಳಿಸಿರುವುದನ್ನು ನೀವು ನೋಡಿರಬಹುದಾಗಿದೆ. ಆರ್ ಆರ್ ನಗರದಲ್ಲಿ ರೆಡ್ ಕಾರ್ಪೆಟ್ ಸ್ಟುಡಿಯೋ ಎನ್ನುವಂತಹ ಡಿಸೈನರ್ ಬಟ್ಟೆಯ ಅಂಗಡಿಯನ್ನು ಹೊಂದಿದ್ದಾರೆ. ಇದು ಬಹುತೇಕ ದೊಡ್ಡ ಮಟ್ಟದ ಶ್ರೀಮಂತರು ಹಾಗೂ ಸೆಲೆಬ್ರಿಟಿಗಳು ಧರಿಸುವಂತಹ ಬಟ್ಟೆಯನ್ನು ಇಲ್ಲಿ ಮಾರಾಟ ಮಾಡಲಾಗುತ್ತೆ. ಮಗಳ ಜೊತೆಗೆ ಆಗಾಗ ಫಾರಿನ್ ಟೂರ್ ಸೇರಿದಂತೆ ಬೇರೆ ಬೇರೆ ಕಡೆ ಹೋಗುವಂತಹ ಕೆಲಸವನ್ನು ಮಾಡಿಕೊಂಡಿದ್ದ ಪವಿತ್ರ ಗೌಡ ಈಗ ರೇಣುಕಾ ಸ್ವಾಮಿ ಪ್ರಕರಣದಲ್ಲಿ ತೆಗೆದಿಕೊಂಡಿದ್ದು ಮುಂದಿನ ದಿನಗಳಲ್ಲಿ ಪ್ರಕರಣ ಯಾವ ರೀತಿಯಲ್ಲಿ ತೀರ್ಪನ್ನು ಕಾಣಲಿದೆ ಎಂಬುದಾಗಿ ಇಡೀ ಕರ್ನಾಟಕ ರಾಜ್ಯವೇ ಎದುರು ನೋಡುತ್ತಿದೆ ಎಂದು ಹೇಳಬಹುದು.

Comments are closed.