Free Bus: ಉಚಿತವಾಗಿ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವವರಿಗೆ ಸರ್ಕಾರ ಜಾರಿಗೆ ತಂದಿದೆ ಹೊಸ ನಿಯಮ!

Free Bus: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವಂತಹ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತಹ ಶಕ್ತಿ ಯೋಜನೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಮಹಿಳೆಯರು ಕೆಎಸ್ಆರ್ಟಿಸಿ ನಿಗಮದ ಬಸ್ಸುಗಳಲ್ಲಿ ರಾಜ್ಯದ ಪ್ರತಿಯೊಂದು ಮೂಲೆಗಳಲ್ಲಿ ಹೋಗುವಂತಹ ಉಚಿತ ಅವಕಾಶ ಹೊಂದಿರುವಂತಹ ಈ ಶಕ್ತಿ ಯೋಜನೆಯ ಆರಂಭದಲ್ಲಿ ಪ್ರತಿಯೊಬ್ಬರು ಕೂಡ ಈ ಯೋಜನೆಯನ್ನು ಟೀಕಿಸುವಂತ ಕೆಲಸವನ್ನು ಮಾಡಿದ್ರು ಅಂದ್ರೆ ತಪ್ಪಾಗಲ್ಲ. ಅದಾದ ನಂತರ ಈ ಯೋಜನೆಯಿಂದಾಗಿ ದೇವಸ್ಥಾನಗಳಿಗೆ ಹಾಗೂ ಪ್ರವಾಸಿ ತಾಣಗಳಿಗೆ ಜನರು ಭೇಟಿ ನೀಡುವುದು ಹೆಚ್ಚಾದ ನಂತರದಿಂದ ಪ್ರತಿಯೊಬ್ಬರು ಕೂಡ ಈ ಯೋಜನೆಯನ್ನು ಹೊಗಳುವುದಕ್ಕೆ ಪ್ರಾರಂಭ ಮಾಡುತ್ತಾರೆ.

ಇದರಿಂದಾಗಿ ದೇವಸ್ಥಾನಗಳಲ್ಲಿ ಆದಾಯ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ ಆದರೂ ಕೂಡ ಅಗತ್ಯಕ್ಕೂ ಮೀರಿದ ಜನಜಂಗುಳಿಯ ಕಾರಣದಿಂದಾಗಿ ಬಸ್ ನಿರ್ವಾಹಕರಿಗೆ ಇಂತಹ ಬಸ್ಸುಗಳಲ್ಲಿ ಕಾರ್ಯನಿರ್ವಹಿಸುವುದು ತುಂಬಾನೇ ಕಷ್ಟವಾಗಿ ಬಿಟ್ಟಿದೆ ಅಂತ ಕೂಡ ನಾವು ತಿಳಿದುಕೊಳ್ಳಬೇಕಾಗಿರುತ್ತದೆ. ಇದಕ್ಕಿಂತಲೂ ಪ್ರಮುಖ ತಲೆಬಿಸಿ ನೀಡುವಂತಹ ವಿಚಾರ ಅಂತ ಅಂದ್ರೆ ಟಿಕೆಟ್ ಪಡೆದುಕೊಂಡು ಮಹಿಳೆಯರು ತಾವು ಇಳಿಯುವಂತಹ ಜಾಗಕ್ಕಿಂತ ಮುಂಚೇನೆ ಇಳಿಯುವ ಮೂಲಕ ಬಸ್ ಕಂಡಕ್ಟರ್ಗಳ ಕೆಲಸ ಹೋಗುವುದಕ್ಕೆ ಕೂಡ ಕಾರಣವಾಗಿರುವಂತಹ ಸಾಕಷ್ಟು ಜೀವಂತ ಉದಾಹರಣೆಗಳು ಇತ್ತೀಚಿನ ತಿಂಗಳು ಗಳಲ್ಲಿ ನಡೆದಿರುವುದನ್ನು ಕೂಡ ನಾವು ಸುದ್ದಿ ಪತ್ರಿಕೆಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಿ ನೋಡಬಹುದಾಗಿದೆ. ಈ ಸಂದರ್ಭದಲ್ಲಿ ಈ ಎಲ್ಲ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇನ್ಮುಂದೆ ಪ್ರಯಾಣ ಮಾಡಿದರೆ ಅಥವಾ ಟಿಕೆಟ್ ಇದ್ದು ಗುರುತಿನ ಚೀಟಿ ಇಲ್ದೆ ಹೋದರೆ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಜಾರಿಗೆ ಬಂದು ನೋಡಿ ಹೊಸ ನಿಯಮ!

ಒಂದು ವೇಳೆ ಬಸ್ ಕಂಡಕ್ಟರ್ಗಳು ಗುರುತಿನ ಚೀಟಿ ಇಲ್ಲದೆ ಇರುವಂತಹ ಮಹಿಳೆಯರಿಗೆ ಟಿಕೆಟ್ ನೀಡಿದರೆ ಅದಕ್ಕೂ ಕೂಡ ದಂಡ ಬೀಳುವಂತಹ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ಸಂದರ್ಭದಲ್ಲಿ ಒಂದು ವೇಳೆ ಟಿಕೆಟ್ ನೀಡುವಂತಹ ಮಿಷನ್ ಕೆಟ್ಟು ಹೋದರೆ ಪಿಂಕ್ ಕಲರ್ ಟಿಕೆಟ್ ಮೂಲಕ ಮಹಿಳೆಯರಿಗೆ ಶಕ್ತಿ ಯೋಜನೆಯ ಉಚಿತ ಟಿಕೆಟ್ಗಳನ್ನು ನೀಡಬೇಕಾಗಿರುತ್ತದೆ ಎನ್ನುವುದಾಗಿ ಕೂಡ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ಈ ಟಿಕೆಟ್ ನಲ್ಲಿ ಎಲ್ಲಿಂದ ಎಲ್ಲಿಗೆ ಹೋಗೋದು ಅನ್ನೋದು ಕೂಡ ಕಂಡಕ್ಟರ್ ಗಳು ಬರೆದಿರಬೇಕಾಗುತ್ತದೆ. ಪ್ರಯಾಣಿಕರ ವಿಚಾರದಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಜಾರಿ ತರುವ ನಿಟ್ಟಿನಲ್ಲಿ ಈ ನಿಯಮಗಳನ್ನ ವಿಧಿಸಲಾಗಿದೆ ಎನ್ನುವಂತಹ ಮಾಹಿತಿ ಕೇಳಿ ಬಂದಿದೆ. ಹೀಗಾಗಿ ಜನಜಂಗುಳಿಯ ನಡುವೆ ಬಸ್ ಕಂಡಕ್ಟರ್ ಗಳಿಗೆ ಕಷ್ಟವಾದರೂ ಕೂಡ ಇದನ್ನ ತಪ್ಪದೆ ಮಾಡಲೇಬೇಕು ಎನ್ನುವುದಾಗಿ ಬಿಗಿ ನಿಯಮವನ್ನು ಹೇರಲಾಗಿದೆ. ಒಂದು ವೇಳೆ ಸಂದರ್ಭದಲ್ಲಿ ಟಿಕೆಟ್ ಅನ್ನು ಕಳೆದು ಹಾಕಿಕೊಂಡಿದ್ದರೆ ಹತ್ತು ಸಾವಿರ ರೂಪಾಯಿ ದಂಡವನ್ನು ಕೂಡ ಕಟ್ಟಬೇಕಾದಂತಹ ಪರಿಸ್ಥಿತಿ ಇಲ್ಲಿ ಕಂಡು ಬರುತ್ತದೆ. ಹೀಗಾಗಿ ಉಚಿತ ಬಸ್ ಪ್ರಯಾಣವನ್ನು ಮೈಮರೆತು ಆನಂದಿಸುವುದಕ್ಕಿಂತ ಮುಂಚೆ ಈ ನಿಯಮಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ.

Comments are closed.