Darshan Case: ಮತ್ತೊಂದು ವಾದ ಮುಂದಿಟ್ಟ ದರ್ಶನ್ ಅಭಿಮಾನಿಗಳು- ಇದಕ್ಕಾಗಿ ಅವರನ್ನು ಬಿಡುಗಡೆ ಮಾಡಬೇಕಂತೆ; ಯಾಕೆ ಗೊತ್ತೇ??

Darshan Case:ಮಟ್ಟಿಗೆ ಕರ್ನಾಟಕ ರಾಜ್ಯ ಅನ್ನೋದು ಕಳೆದ ಸಾಕಷ್ಟು ದಿನಗಳಿಂದ ಒಂದೇ ವಿಚಾರದ ಬಗ್ಗೆ ಟಿವಿಯ ಮೇಲೆ ತಮ್ಮ ಚಿತ್ತ ನಡೆಯುವುದಕ್ಕೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ. ಹೌದು ನಾವ್ ಮಾತಾಡ್ತಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರೇಣುಕಾ ಸ್ವಾಮಿ ಪ್ರಕರಣದ ಬಗ್ಗೆ. ಕನ್ನಡ ಚಿತ್ರರಂಗದ ಮಟ್ಟಿಗೆ ಖಂಡಿತವಾಗಿ ಇದೊಂದು ಕಪ್ಪು ಚುಕ್ಕೆ ಅಂತ ಹೇಳಿದರು ಕೂಡ ತಪ್ಪಾಗಲ್ಲ. ಎಲ್ಲಕ್ಕಿಂತ ಬೇಸರ ಆಗುವಂತಹ ವಿಚಾರ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸದ್ಯದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು ಅವರು ಯಾವ ವಿಚಾರಕ್ಕೆ ಜೈಲು ಪಾಲಾಗಿದ್ದಾರೆ ಎಂಬುದಾಗಿ ತಿಳಿದಿದ್ದರೂ ಕೂಡ ಅವರ ಕೆಲವು ಅಭಿಮಾನಿಗಳು ಈ ವಿಚಾರದಲ್ಲಿ ದರ್ಶನ್ ರವರನ್ನ ಬೆಂಬಲಿಸುವಂತಹ ಪ್ರಯತ್ನ ಮಾಡುತ್ತಿರುವುದೇ ನಿಜಕ್ಕೂ ಕೂಡ ವಿಷಾದನೀಯ ವಿಚಾರವಾಗಿದೆ.

ಈ ಕಾರಣಕ್ಕಾಗಿ ಡಿ ಬಾಸ್ ಅವರನ್ನು ಬಿಡಬೇಕಂತೆ ಅಂದ ಅಭಿಮಾನಿಗಳು!

ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿರುವಂತಹ ಸಾವಿರಾರು ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಗಮನಿಯುವಂತಹ ಪ್ರಯತ್ನವನ್ನು ಮಾಡ್ತಾ ಇದ್ದಾರೆ ಎಂದು ಹೇಳಬಹುದಾಗಿದೆ. ಅದರಲ್ಲೂ ಕೆಲವರಂತೂ ಬಾಸ್ ಈ ವಿಚಾರದಲ್ಲಿ ತಪ್ಪು ಮಾಡಿರಬಹುದು ಆದರೆ ಅವರು ಈ ಹಿಂದೆ ಜನರಿಗೆ ಮಾಡಿರುವಂತಹ ಸಹಾಯವನ್ನ ನೆನಪಿಸಿಕೊಂಡಾದ್ರು ಅವರನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ಹೇಳುತ್ತಿರುವುದು ಕೂಡ ವ್ಯಾಪಕವಾಗಿ ಕೇಳಿ ಬರ್ತಾ ಇದೆ.

ಇಷ್ಟು ದಿನ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಸಂದರ್ಭದಲ್ಲಿ ಅಭಿಮಾನಿಗಳು ಅಲ್ಲಿ ಕೂಡ ದೊಡ್ಡ ಮಟ್ಟದ ಸಂಖ್ಯೆಯಲ್ಲಿ ಜಮಾಯಿಸಿದ್ರು. ಆದರೆ ಈಗ ಪರಪ್ಪನ ಅಗ್ರಹಾರ ಜೈಲ್ಗೆ ದರ್ಶನ್ ರವರನ್ನು ಹಾಕಿದ್ದು ಅಲ್ಲಿ ಕೂಡ ಅಭಿಮಾನಿಗಳು ಹೊರ ಭಾಗದಲ್ಲಿ ನಿಂತಿರೋದು ಕಂಡುಬರುತ್ತದೆ. ಖಂಡಿತವಾಗಿ ಬಾಸ್ ರವರನ್ನ ನೋಡಿಕೊಂಡು ಹೋಗೋದು ಅನ್ನೋದಾಗಿ ಬೇರೆ ಬೇರೆ ನಗರಗಳಿಂದ ಬಂದಿರುವಂತಹ ಅಭಿಮಾನಿಗಳು ಈ ಸಂದರ್ಭದಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿಗಳ ಬಳಿ ಕೇಳಿದ್ರೆ ನಮ್ಮ ಬಾಸ್ ಖಂಡಿತವಾಗಿ ಯಾವುದೇ ತಪ್ಪು ಮಾಡಿಲ್ಲ ಆತನಿಗೆ ಆಗಬೇಕಾಗಿರುವಂತಹ ಶಿಕ್ಷೆ ನೀಡಿದ್ದಾರೆ ಅನು ರೀತಿಯಲ್ಲಿ ಮಾತಾಡ್ತಾ ಇದ್ದಾರೆ ಹಾಗೂ ಎಲ್ಲಿ ನೋಡಿದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪೋಲೀಸರವರ ಜೊತೆಗೆ ಕಾಣಿಸಿಕೊಂಡರೆ ಜೈ ಡಿ ಬಾಸ್ ಎನ್ನುವಂತಹ ಜೈಕಾರವನ್ನು ಹಾಕುವುದನ್ನು ಕೂಡ ನೀವು ನೋಡಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೀತಿಯಲ್ಲಿ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಎಲ್ಲರೂ ಕಾದು ನೋಡುತ್ತಿದ್ದಾರೆ. ಸದ್ಯಕ್ಕೆ ಇದು ಕನ್ನಡ ಚಿತ್ರರಂಗದಲ್ಲಿ ಒಂದು ರೀತಿಯಲ್ಲಿ ದೊಡ್ಡಮಟ್ಟದ ಆಘಾತವನ್ನು ಸೃಷ್ಟಿಸಿರುವ ಅಂತಹ ಘಟನೆ ಯಾಗಿದ್ದು ಇದರಿಂದ ಕನ್ನಡ ಚಿತ್ರರಂಗ ಯಾವ ರೀತಿಯಲ್ಲಿ ಚೇತರಿಸಿಕೊಳ್ಳುತ್ತದೆ ಎಂಬುದನ್ನು ಕೂಡ ಕಾದು ನೋಡಬೇಕಾಗಿದೆ.

Comments are closed.