Driving Tips: ಶೇಕಡಾ 99 % ಡ್ರೈವರ್ ಗಳಿಗಳಿಗೆ ತಿಳಿಯದ ಅಭ್ಯಾಸಗಳು- ಹೈವೇ ಅಲ್ಲಿ ಹೀಗೆ ಡ್ರೈವ್ ಮಾಡಿ, ಎಲ್ಲವೂ ಸರಿ ಹೋಗುತ್ತೆ!

Driving Tips: ನ್ಯಾಷನಲ್ ಹೈವೆಗಳಲ್ಲಿ ಕಾರನ್ನು ಓಡಿಸುವುದಕ್ಕೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಹಾಗಂತ ಮಜಾದ ಕೈಗೆ ಬುದ್ಧಿಯನ್ನು ಕೊಟ್ಟು ಮೈ ಮರೆತು ನೀವು ಹೆದ್ದಾರಿಯಲ್ಲಿ ಕಾರನ್ನು ಓಡಿಸುವ ಹಾಗೆ ಇರುವುದಿಲ್ಲ ಅನ್ನೋದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗುತ್ತದೆ. ಇವತ್ತಿನ ಈ ಲೇಖನದಲ್ಲಿ ಹೈವೇನಲ್ಲಿ ಕಾರನ್ನು ಓಡಿಸುವ ಸಂದರ್ಭದಲ್ಲಿ ನೀವು ಪಾಲಿಸಬೇಕಾಗಿರುವಂತಹ ಕೆಲವೊಂದು ಪ್ರಮುಖ ನಿಯಮ ಅಥವಾ ಸುರಕ್ಷತಾ ಕ್ರಮಗಳ ಬಗ್ಗೆ ಇವತ್ತಿನ ಈ ಲೇಖನದಲ್ಲಿ ಹೇಳಲು ಹೊರಟಿದ್ದು ತಪ್ಪದೆ ಈ ಲೇಖನವನ್ನು ನಿಮ್ಮ ಡ್ರೈವಿಂಗ್ ಸಂದರ್ಭದಲ್ಲಿ ಮರೆಯಬೇಡಿ.

  • ಹೈವೇನಲ್ಲಿ ಕಾರನ್ನು ಓಡಿಸುವ ಸಂದರ್ಭದಲ್ಲಿ ಮುಂದೆ ಹೋಗುತ್ತಿರುವಂತಹ ವಾಹನಕ್ಕಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿನ ಅಂತರವನ್ನು ಕಾಯ್ದುಕೊಳ್ಳುವುದು ಒಳ್ಳೆಯದು ಅಥವಾ ಸುರಕ್ಷಿತ ಎಂದು ಹೇಳಬಹುದು. ಯಾಕೆಂದ್ರೆ ಅವರು ಸಡನ್ನಾಗಿ ಬ್ರೇಕ್ ಹಾಕಿದ್ರೆ ಆ ಸಂದರ್ಭದಲ್ಲಿ ನಿಮಗೆ ಕಂಟ್ರೋಲ್ ಮಾಡಲು ಸಾಕಷ್ಟು ಕಷ್ಟಕರವಾಗಿ ಪರಿಣಮಿಸಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಮಳೆ ಹಾಗೂ ಸ್ನೋ ಆಗಿರುವಂತಹ ಸ್ಥಳಗಳಲ್ಲಿ ಈ ರೀತಿ ಯಾವತ್ತೂ ಕೂಡ ಮಾಡೋದಕ್ಕೆ ಹೋಗಲೇಬೇಡಿ ಯಾಕೆಂದರೆ ನೀವು ಬ್ರೇಕ್ ಹಾಕಿದರೂ ಕೂಡ ಅದು ನಿಮ್ಮ ಕಂಟ್ರೋಲಿಗೆ ಸಿಗದೇ ಜಾರಿಕೊಂಡು ಹೋಗುವಂತಹ ಸಾಧ್ಯತೆ ಇರುತ್ತದೆ. ಹೀಗಾಗಿ ನಿಧಾನಗತಿಯಲ್ಲಿ ಮುಂದೆ ಹೋಗುತ್ತಿರುವಂತಹ ವಾಹನಕ್ಕಿಂತ ಸ್ವಲ್ಪ ಮಟ್ಟಿಗೆ ಡಿಸ್ಟೆನ್ಸ್ ಮೈಂಟೆನ್ ಮಾಡೋದು ಒಳ್ಳೆಯದು.
  • ಇನ್ನು ಒಂದು ವೇಳೆ ನೀವು ಹೆದ್ದಾರಿಯಲ್ಲಿ ಚಲಿಸುವಾಗ ಲಯನ್ ಬದಲಾಯಿಸುವಂತಹ ಇಚ್ಛೆ ಇದ್ದರೆ ಅಥವಾ ಮುಂದೆ ತಿರುವುಗಳಲ್ಲಿ ಬೇರೆ ಪಥವನ್ನ ಬಳಸುವಂತಹ ಸಾಧ್ಯತೆ ಇದ್ದರೆ ಆ ಸಂದರ್ಭದಲ್ಲಿ ಬೇರೆ ವಾಹನಗಳಿಗೆ ನೀವು ನೀಡುವಂತಹ ಸಿಗ್ನಲ್ ಸಾಕಷ್ಟ ಪ್ರಮುಖವಾಗಿರುತ್ತದೆ. ಸಿಗ್ನಲ್ ನೋಡಿಕೊಂಡೆ ಬೇರೆ ವಾಹನಗಳು ನಿಮ್ಮನ್ನ ಯಾವ ರೀತಿಯಲ್ಲಿ ಅವಾಯ್ಡ್ ಮಾಡಿ ಹೋಗಬೇಕು ಅನ್ನೋದನ್ನ ನಿರ್ಧರಿಸುತ್ತದೆ.
  • ನೀವು ಎಲ್ಲಿಗಾದರೂ ಹೋಗುವಾಗ ಆ ರಸ್ತೆಯಲ್ಲಿ ನಿಮಗಾಗಿ ಸೆಟ್ ಮಾಡಿರುವಂತಹ ವೇಗದ ಲಿಮಿಟ್ ನಲ್ಲಿ ಮಾತ್ರ ವಾಹನವನ್ನು ಚಾಲನೆ ಮಾಡುವುದಕ್ಕೆ ನೋಡಿ. ಆ ಸೂಚನೆ ಫಲಕದಲ್ಲಿ ಯಾವುದಾದರೂ ನಿರ್ದಿಷ್ಟ ವೇಗವನ್ನ ಸೂಚಿಸಿದ್ದಾರೆ ಎಂದರೆ ಅದಕ್ಕೆ ಒಂದು ಕಾರಣ ಇರುತ್ತದೆ ಎಂದು ತಿಳಿದುಕೊಂಡು ವಾಹನ ಚಲಾಯಿಸಿ ಇಲ್ಲವಾದಲ್ಲಿ ಅತಿಯಾದ ವೇಗ ತಿಥಿ ಬೇಗ ಎನ್ನುವಂತಹ ಮಾತು ನಿಜ ಆಗೋ ರೀತಿಯಲ್ಲಿ ಮಾಡುತ್ತದೆ ಅನ್ನೋದನ್ನ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.
  • ಇನ್ನು ಓವರ್ಟೇಕ್ ಮಾಡೋದಕ್ಕಿಂತ ಮುಂಚೆ ನೀವು ನಿಮ್ಮ ಕನ್ನಡಿಯಲ್ಲಿ ಸರಿಯಾದ ರೀತಿಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಸರಿಯಾದ ವೇಗದಲ್ಲಿ ಹಾಗೂ ಯಾವುದೇ ತಿರುವುಗಳು ಇಲ್ಲದ ಪ್ರದೇಶದಲ್ಲಿ ಓವರ್ಟೇಕ್ ಮಾಡಿ. ಓವರ್ ಟೇಕ್ ಮಾಡಿದ ನಂತರ ನಿಮ್ಮ ಲೇನ್ ಗೆ ಮತ್ತೆ ಮರಳಿ ಬರೋದನ್ನ ಮರೆಯಬೇಡಿ.
  • ಡ್ರೈವಿಂಗ್ ಮಾಡುವಾಗ ಕೇವಲ ಡ್ರೈವಿಂಗ್ ಮಾತ್ರ ಮಾಡಿ ಮೊಬೈಲ್ ಬಳಸುವುದು ಅಥವಾ ತಿಂಡಿ ತಿನ್ನುವುದು ಹೀಗೆ ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ಮಾಡಿ ನಿಮ್ಮ ಲೈಫ್ ಅನ್ನು ಅಪಾಯಕ್ಕೆ ತಳ್ಳಬೇಡಿ. ಈ ಕಾರಣದಿಂದಾಗಿ ಕೇವಲ ನೀವು ನಿಮ್ಮ ಮತ್ತು ನಿಮ್ಮ ಕುಟುಂಬದವರ ಪ್ರಾಣವನ್ನು ಅಪಾಯಕ್ಕೆ ಒಡ್ಡುವುದು ಮಾತ್ರವಲ್ಲದೆ ಎದುರುಗಡೆ ಹೋಗುತ್ತಿರುವಂತಹ ವಾಹನದವರ ಜೀವನವನ್ನು ಕೂಡ ಹಾಳು ಮಾಡುತ್ತಿದೆ ಅನ್ನೋದನ್ನ ಗಮನದಲ್ಲಿಟ್ಟುಕೊಂಡು ಡ್ರೈವ್ ಮಾಡಿ.

ಹೆದ್ದಾರಿಯಲ್ಲಿ ವಾಹನ ಚಲಾಯಿಸುವಾಗ ಅಗತ್ಯಕ್ಕಿಂತ ಹೆಚ್ಚಿನ ಮುಂಜಾಗ್ರತ ಕ್ರಮಗಳು ಅಗತ್ಯವಾಗಿರುತ್ತವೆ ಹಾಗೂ ಸೂಚಿಸಿರುವಂತಹ ಗೈಡ್ ಲೈನ್ ಗಳನ್ನು ಕೂಡ ಸರಿಯಾದ ರೀತಿಯಲ್ಲಿ ಪಾಲಿಸಬೇಕಾಗಿರುತ್ತದೆ.

Comments are closed.